ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ, ಕಾವೇರಿ ನೀರು ಉಳಿಸುವ ಯೋಚನೆ ಮಾಡಲಿ: ಹೆಚ್ ಡಿ ಕುಮಾರಸ್ವಾಮಿ
ತಮ್ಮ ಸಮ್ಮಿಶ್ರ ಸರ್ಕಾರವನ್ನು ಯಾರು ಬೀಳಿಸಿದರು ಅನ್ನೋದು ಈಗಿನ ಪ್ರಶ್ನೆಯಲ್ಲ, ಸರ್ಕಾರ ಉರುಳೋದಿಕ್ಕೆ ಕುಮ್ಮಕ್ಕು ನೀಡಿದ್ದು ಯಾರು ಅಂತಲೂ ತಮಗೆ ಗೊತ್ತಿದೆ, ಆದರೆ ಈಗ ಅದೆಲ್ಲ ಮುಗಿದ ಅಧ್ಯಾಯ, ಅದರ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ, ರಾಜ್ಯದ ಮುಂದಿರುವ ಸಮಸ್ಯೆಯನ್ನು ಸರ್ಕಾರ ಗಮನಿಸಲಿ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಂದು ಒಟ್ಟಾಗಿ ತಮಿಳುನಾಡುಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಿಧಾನ ಸೌಧದ ಅವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy), ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಶುಭವಾಗಲಿ ಅಂತ ಡಿಕೆ ಶಿವಕುಮಾರ್ (DK Shivakumar) ಹೇಳಿರುವುದನ್ನು ತಿಳಿಸಿದಾಗ, ನಮಗೆ ಶುಭವಾಗುತ್ತೋ ಬಿಡುತ್ತೋ ಅದು ಬೇರೆ ವಿಚಾರ, ಮೊದಲು ಕಾವೇರಿಯಿಂದ ಹರಿದುಹೋಗುತ್ತಿರುವ ನೀರು ಉಳಿಸುವ ಪ್ರಯತ್ನವನ್ನು ನೀರಾವರಿ ಸಚಿವ ಮಾಡಲಿ ಎಂದು ತಿವಿದರು. ತಮ್ಮ ಸಮ್ಮಿಶ್ರ ಸರ್ಕಾರವನ್ನು (coalition government) ಯಾರು ಬೀಳಿಸಿದರು ಅನ್ನೋದು ಈಗಿನ ಪ್ರಶ್ನೆಯಲ್ಲ, ಸರ್ಕಾರ ಉರುಳೋದಿಕ್ಕೆ ಕುಮ್ಮಕ್ಕು ನೀಡಿದ್ದು ಯಾರು ಅಂತಲೂ ತಮಗೆ ಗೊತ್ತಿದೆ, ಆದರೆ ಈಗ ಅದೆಲ್ಲ ಮುಗಿದ ಅಧ್ಯಾಯ, ಅದರ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ, ರಾಜ್ಯದ ಮುಂದಿರುವ ಸಮಸ್ಯೆಯನ್ನು ಸರ್ಕಾರ ಗಮನಿಸಲಿ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ