ವಾಸ್ತವಾಂಶ ತಿಳಿದಿರುವ ಯಡಿಯೂರಪ್ಪ ದೆಹಲಿಗೆ ಹೋಗಿ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ? ಮಧು ಬಂಗಾರಪ್ಪ
ಯಡಿಯೂರಪ್ಪನವರು ಬೆಂಗಳೂರಲ್ಲಿ ಪ್ರತಿಭಟನೆ ಮಾಡುತ್ತಾ ಕರ್ನಾಟಕ ಸರ್ಕಾರದ ವಿರುದ್ದ ಟೀಕೆಗಳನ್ನು ಮಾಡುವ ಬದಲು ದೆಹಲಿಗೆ ಹೋಗಿ ಕೇಂದ್ರ ಸರಕಾರಕ್ಕೆ ರಾಜ್ಯದ ಸ್ಥಿತಿ ಮನವರಿಕೆ ಮಾಡುವ ಪ್ರಯತ್ನ ಯಾಕೆ ಮಾಡಬಾರದು ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ಬಿಜೆಪಿಯ 26 ಸಂಸದರಿದ್ದಾರಲ್ಲ? ಅವರೆಲ್ಲ ಏನು ಮಾಡುತ್ತಿದ್ದಾರೆ? ಅವರು ಮೌನ ವಹಿಸಿರುವುದಕ್ಕೆ ಏನು ಕಾರಣ ಎಂದು ಸಚಿವ ಕೇಳಿದರು.
ಚಿತ್ರದುರ್ಗ: ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಸರ್ಕಾರವನ್ನು ದೂಷಿಸುತ್ತಿರುವ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರ (BS Yediyurappa) ಧೋರಣೆಯನ್ನು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಖಂಡಿಸಿದರು. ಚಿತ್ರದುರ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಒಂದು ಹನಿ ನೀರನ್ನೂ ಬಿಡದ ಸ್ಥಿತಿಯಲ್ಲಿ ಈಗ ರಾಜ್ಯವಿದೆ, ಇದು ಯಡಿಯೂರಪ್ಪನವರಿಗೆ ಗೊತ್ತಿಲ್ಲವೇ? ಕಾವೇರಿ ನದಿ ನಿಯಂತ್ರಣ ಮಂಡಳಿ (CWRC) ಕೇಂದ್ರ ಸರ್ಕಾರದ ಆಧೀನದಲ್ಲಿರುತ್ತದೆ. ಯಡಿಯೂರಪ್ಪನವರು ಬೆಂಗಳೂರಲ್ಲಿ ಪ್ರತಿಭಟನೆ ಮಾಡುತ್ತಾ ಕರ್ನಾಟಕ ಸರ್ಕಾರದ ವಿರುದ್ದ ಟೀಕೆಗಳನ್ನು ಮಾಡುವ ಬದಲು ದೆಹಲಿಗೆ ಹೋಗಿ ಕೇಂದ್ರ ಸರಕಾರಕ್ಕೆ ರಾಜ್ಯದ ಸ್ಥಿತಿ ಮನವರಿಕೆ ಮಾಡುವ ಪ್ರಯತ್ನ ಯಾಕೆ ಮಾಡಬಾರದು ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ಬಿಜೆಪಿಯ 26 ಸಂಸದರಿದ್ದಾರಲ್ಲ? ಅವರೆಲ್ಲ ಏನು ಮಾಡುತ್ತಿದ್ದಾರೆ? ಅವರು ಮೌನ ವಹಿಸಿರುವುದಕ್ಕೆ ಏನು ಕಾರಣ ಎಂದು ಸಚಿವ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ