ರಾಜ್ಯದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ; ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು
ರಾಜ್ಯದಲ್ಲಿ ನನಗೆ ಅಧಿಕಾರ ಕೊಡುವ ಮೊದಲು 53 ಸಾವಿರ ಶಿಕ್ಷಕರ ಕೊರತೆಯಿತ್ತು. ಅದರಲ್ಲಿ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಇನ್ನುಳಿದಂತೆ ಆದಷ್ಟು ಬೇಗ ನೇಮಕ ಮಾಡಿಕೊಳ್ಳುತ್ತೇವೆ ಕಾಲಾವಕಾಶ ಕೊಡಬೇಕು. ಇನ್ನು ಖಾಯಂ ಶಿಕ್ಷಕರನ್ನು ಕೂಡ ಕೋರ್ಟ್ನಿಂದ ಆದೇಶ ಬರಲಿದೆ, ಅದು ಬಂದ ಕೂಡಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
ಚಿತ್ರದುರ್ಗ, ಸೆ.21: ರಾಜ್ಯದಲ್ಲಿ ನನಗೆ ಅಧಿಕಾರ ಕೊಡುವ ಮೊದಲು 53 ಸಾವಿರ ಶಿಕ್ಷಕರ ಕೊರತೆಯಿತ್ತು. ಅದರಲ್ಲಿ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ‘ಇನ್ನುಳಿದಂತೆ ಆದಷ್ಟು ಬೇಗ ನೇಮಕ ಮಾಡಿಕೊಳ್ಳುತ್ತೇವೆ ಕಾಲಾವಕಾಶ ಕೊಡಬೇಕು. ಇನ್ನು ಖಾಯಂ ಶಿಕ್ಷಕರನ್ನು ಕೂಡ ಕೋರ್ಟ್ನಿಂದ ಆದೇಶ ಬರಲಿದೆ, ಅದು ಬಂದ ಕೂಡಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದರು. ಇದೇ ವೇಳೆ ‘ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ವಿಚಾರ ‘1991ರಲ್ಲಿ ಬಂಗಾರಪ್ಪನವರು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಆ ರೀತಿಯ ನಿರ್ಧಾರ ಈಗ ಕೈಗೊಳ್ಳುವುದು ಸಿಎಂಗೆ ಬಿಟ್ಟ ವಿಚಾರ ಎಂದು ಚಿತ್ರದುರ್ಗದಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ