8ರಿಂದ 10ನೇ ತರಗತಿವರೆಗೆ ಒಬ್ಬರೇ ಶಿಕ್ಷಕ: ಶಿಕ್ಷಕರನ್ನ ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ ವಿದ್ಯಾರ್ಥಿಗಳು

Bidar News: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಹಾರಾಷ್ಟ್ರದ ಗಡಿಯನ್ನ ಹಂಚಿಕೊಂಡಿರುವ ಜಂಬಗಿ ಸರಕಾರಿ ಪ್ರೌಢ ಶಾಲೆಯಲ್ಲಿ 8 ಮತ್ತು 10ನೇ ತರಗತಿಗಳಲ್ಲಿ 151 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಆದರೆ ಇಷ್ಟು ಮಕ್ಕಳಿಗೆ ಒಬ್ಬರೇ ಒಬ್ಬರು ಶಿಕ್ಷಕರಿದ್ದಾರೆ. ಶಿಕ್ಷಕರನ್ನ ನೇಮಕ ಮಾಡದೆ ಮಕ್ಕಳ ಶಿಕ್ಷಣದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

8ರಿಂದ 10ನೇ ತರಗತಿವರೆಗೆ ಒಬ್ಬರೇ ಶಿಕ್ಷಕ: ಶಿಕ್ಷಕರನ್ನ ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕ
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2023 | 8:27 PM

ಬೀದರ್, ಆಗಸ್ಟ್​ 05: ಎಂಟರಿಂದ ಹತ್ತನೇ ತರಗತಿಯವರೆಗೆ 151 ಮಕ್ಕಳು ಓದುತ್ತಿದ್ದಾರೆ. ಎಲ್ಲಾ ಮಕ್ಕಳು ಪ್ರತಿದಿನವೂ ಶಾಲೆಗೆ ಬರುತ್ತಾರೆ ಆದರೆ, ಶಿಕ್ಷಕರೆ (teacher) ಅಲ್ಲಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಆ ಮಕ್ಕಳಿಗೆ ಮರಿಚಿಕೆಯಾಗಿದೆ. ಉಚಿತವಾಗಿ ಶಿಕ್ಷಣ ಸಿಗುತ್ತದೆಂದು ಸರಕಾರಿ ಪ್ರೌಢ ಶಾಲೆ ಆಯ್ಕೆ ಮಾಡಿಕೊಂಡಿರುವ ಮಕ್ಕಳಿಗೆ ಶಾಲೆಗೆ ಶಿಕ್ಷಕರನ್ನ ನೇಮಕ ಮಾಡದೆ ಮಕ್ಕಳ ಶಿಕ್ಷಣದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ.

ಗಡಿ ಜಿಲ್ಲೆ ಬೀದರ್, ತೆಲಗಾಂಣ ಹಾಗೂ ಮಹಾರಾಷ್ಟ್ರ ಎರಡು ರಾಜ್ಯದ ಗಡಿಯನ್ನ ಹಂಚಿಕೊಂಡಿದೆ. ಆದರೆ ಗಡಿಯಲ್ಲಿರುವ ಸರಕಾರಿ ಶಾಲೆಗಳನ್ನ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ ಅನ್ನೊದಕ್ಕೆ ಈ ಸರಕಾರಿ ಪ್ರೌಢ ಶಾಲೆಯೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಹಾರಾಷ್ಟ್ರದ ಗಡಿಯನ್ನ ಹಂಚಿಕೊಂಡಿರುವ ಜಂಬಗಿ ಸರಕಾರಿ ಪ್ರೌಢ ಶಾಲೆಯೇ ಉದಾಹರಣೆಯಾಗಿದೆ.

ಈ ಸರಕಾರಿ ಪ್ರೌಢ ಶಾಲೆಯಲ್ಲಿಯಲ್ಲಿ ಎಂಟರಿಂದ ಹತ್ತನೇ ತರಗತಿಯವರೆಗೆ 151 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಆದರೆ ಇಷ್ಟು ಮಕ್ಕಳಿಗೆ ಒಬ್ಬರೇ ಒಬ್ಬರು ಶಿಕ್ಷಕರಿದ್ದು, ಒಬ್ಬರೇ ಶಿಕ್ಷಕರು ಎಲ್ಲಾ ಮಕ್ಕಳಿಗೆ ಪಾಠ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಲೆ ಆರಂಭವಾಗಿ ಮೂರು ತಿಂಗಳು ಕಳೆದಿದೆ ಇನ್ನೂ ಕೂಡ ಮಕ್ಕಳಿಗೆ ಪಾಠವೇ ಆರಂಭವಾಗಿಲ್ಲ. ಒಬ್ಬರು ಗಣಿತ ಶಿಕ್ಷಕರಿದ್ದು, ಅವರು ಗಣಿತ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದಾರೆ.

ಇದನ್ನೂ ಓದಿ: Bidar Centenary School: ಶತಮಾನದ ಬಾಲಕಿಯರ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದೆ

ಆದರೆ ಇನ್ನೂಳಿದ ಪಾಠವನ್ನ ಹೇಳುಲು ಇಲ್ಲಿ ಶಿಕ್ಷಕರಿಲ್ಲ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಮೇಲೆ ಭಾರೀ ಹೊಡೆತ ಬೀಳುತ್ತಿದೆ. ಮಕ್ಕಳು ತಾವೇ ಪುಸ್ತಕವನ್ನ ಓದುಕೊಂಡು ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಶಿಕ್ಷಕರನ್ನ ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ವಿದ್ಯಾರ್ಥಿನೀರಯರು ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.

ಈ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿದಿನವೂ ತಪ್ಪದೆ ಶಾಲೆಗೆ ಬರುತ್ತಾರೆ. ಒಬ್ಬರು ಶಿಕ್ಷಕರು ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವೆ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನ ಕಾಡತೊಡಗಿದೆ. ಹೀಗಾಗಿ ನಮ್ಮ ಶಾಲೆಗೆ ಶಿಕ್ಷಕರನ್ನ ನೇಮಕ ಮಾಡಿ ಮಕ್ಕಳಿಗೆ ಉತ್ತಮಗುಣಮಟ್ಟದ ಶಿಕ್ಷಣ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.

ನಮ್ಮ ಶಾಲೆಗೆ ಶಿಕ್ಷಕರನ್ನ ನೇಮಕ ಮಾಡಿ ಎಂದು ಹತ್ತಾರು ಸಲು ಡಿಡಿಪಿಐ ಅವರಿಗೆ ಮನವಿ ಮಾಡಿದರೂ ಕೂಡ ನೇಮಕ ಮಾಡುತ್ತಿಲ್ಲ. ಹೀಗಾಗಿ ಕಳೆದ ಎರಡು ತಿಂಗಳಿಂದ ಮಕ್ಕಳಿಗೆ ಒಬ್ಬರೇ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಉಚಿತವಾಗಿ ಶಿಕ್ಷಣ ಸಿಗುತ್ತದೆಂದು ಸರಕಾರಿ ಕನ್ನಡ ಶಾಲೆಗೆ ಬರುವ ಮಕ್ಕಳಿಗೆ ಶಿಕ್ಷಕರನ್ನೇ ನೇಮಕ ಮಾಡದೆ ಹೋದರೆ ಮಕ್ಕಳ ಭವಿಷ್ಯ ಏನಾಗಬಾರದೆಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಬೀದರ್​: ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥ; ಗ್ರಾಮ ಪಂಚಾಯತ್​ ಪಿಡಿಒ ಅಮಾನತು

ಮಕ್ಕಳ ಸಂಖ್ಯೆ ಶಾಲೆಯಲ್ಲಿ ಜಾಸ್ತಿಯಿದ್ದರು ಕೂಡಾ ಶಿಕ್ಷಕರ ಕೊರತೆಯಿಂದ ಮಕ್ಕಳನ್ನ ಕಾಡುತ್ತಿದೆ. ವಿಷಯವಾರು ಕಲಿಸೋಕೆ ಇಲ್ಲಿ ಶಿಕ್ಷಕರೇ ಇಲ್ಲಾ ಹೀಗಾಗಿ ಶಿಕ್ಷಕರಿಗೆ ಒತ್ತಡ ಜಾಸ್ತಿಯಾಗುತ್ತಿದೆ. ಇತ್ತ ಮಕ್ಕಳಿಗೆ ಒಬ್ಬರೆ ಶಿಕ್ಷಕರು ಎರಡು ಮೂರು ವಿಷಯ ಪಾಠ ಮಾಡುತ್ತಿರುವುದುರಿಂದ ಮಕ್ಕಳಿದೆ ಪಾಠ ತಲೆಗೆ ಹೋಗುತ್ತಿಲ್ಲ. ಹೀಗಾಗಿ ಮಕ್ಕಳು ಓದಿನಲ್ಲಿ ಹಿಂದೆ ಬಳುತ್ತಿದ್ದಾರೆ.

ಶಿಕ್ಷಕರ ಕೊರತೆಯ ನಡುವೆಯೂ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಪಾಠ ಕೇಳುತ್ತಿದ್ದಾರೆ, ಉತ್ತಮ ಗುಣಮಟ್ಟದ ಶಿಕ್ಷಣವನ್ನ ಕೂಡ ಕೊಡಲಾಗುತ್ತಿದೆ. ಆದರೆ ನಮಗೆ ಇನ್ನೂ ಶಿಕ್ಷಕರ ಅವಶ್ಯಕತೆಯಿದ್ದು ಬೇಗ ಶಿಕ್ಷಕರನ್ನ ನೇಮಕ ಮಾಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

ಉಚಿತ ಶಿಕ್ಷಣ ಸಿಗುತ್ತದೆಂದು ಸರಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಸರಕಾರ ಅವರಿಗೆ ಮೂಲಭೂತ ಸೌಲಭ್ಯಗಳನ್ನ ಕೊಡುತ್ತಿಲ್ಲ. ಸರಕಾರದಿಂದಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದಲೇ ಮಕ್ಕಳ ಹಕ್ಕುಗಳು ಇಲ್ಲಿ ಉಲ್ಲಘನೆಯಾಗುತ್ತಿದ್ದರು ಯಾರು ಇದರ ಬಗ್ಗೆ ಮಾತನಾಡುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.