ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಮೆಡಿಕಲ್ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಸ್ಥಳಾಂತರಿಸುವ ನಿರ್ಧಾರ ಪ್ರಕಟಿಸಿದ್ದರು: ಡಿಕೆ ಶಿವಕುಮಾರ್
ಅಸಲಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಮೆಡಿಕಲ್ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಶಿಫ್ಟ್ ಮಾಡಿದ್ದರು. ಆಫ್ ಕೋರ್ಸ್ ತಾವು ಒತ್ತಾಯ ಮಾಡಿದ್ದು ನಿಜ. ಕಾಲೇಜನ್ನು ಸ್ಥಳಾಂತರಿಸಿ ಆದೇಶದ ಹೊರಡಿಸಿದಾಗ ಕುಮಾರಸ್ವಾಮಿಯವರಿಗೆ ಬುದ್ಧಿ ಇರಲಿಲ್ಲವೇ? ಅವರಾಗ ದಡ್ಡರಾಗಿದ್ದರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರಾಮನಗರದಲ್ಲಿ ಸ್ಥಾಪನೆಯಾಗಬೇಕಿದ್ದ ವೈದ್ಯಕೀಯ ಕಾಲೇಜನ್ನು (medical college) ಕನಕಪುರಕ್ಕೆ ಸ್ಥಳಾಂತರಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡಿರುವ ಕಾಮೆಂಟನ್ನು ಕಟುವಾಗಿ ಟೀಕಿಸಿದರು. ಅಸಲಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಮೆಡಿಕಲ್ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಶಿಫ್ಟ್ ಮಾಡಿದ್ದರು. ಆಫ್ ಕೋರ್ಸ್ ತಾವು ಒತ್ತಾಯ ಮಾಡಿದ್ದು ನಿಜ. ಕಾಲೇಜನ್ನು ಸ್ಥಳಾಂತರಸಿ ಆದೇಶದ ಹೊರಡಿಸಿದಾಗ ಕುಮಾರಸ್ವಾಮಿಯವರಿಗೆ ಬುದ್ಧಿ ಇರಲಿಲ್ಲವೇ? ಅವರಾಗ ದಡ್ಡರಾಗಿದ್ದರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಕಾಲೇಜು ಸ್ಥಳಾಂತರಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದಾಗಲೇ, ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಹೈಜಾಕ್ ಮಾಡಿತು ಎಂದು ಹೇಳಿದ ಅವರು ಈಗ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುತ್ತಿರವುದರ ಹಿಂದೆ ತಮ್ಮ ಸ್ವಾರ್ಥವೂ ಅಡಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ