Jamboo Savari 2023 Live: ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ, ಕುಳಿತಲ್ಲೇ ಕಣ್ತುಂಬಿಕೊಳ್ಳಿ
ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ: ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಮಾತು ಅಕ್ಷರಶಃ ನಿಜ. ಈ ಬಾರಿ ಬರದ ಆತಂಕದಲ್ಲಿ ಆರಂಭವಾದ ಮೈಸೂರು ದಸರಾ ಯಾವುದೇ ಅಡ್ಡಿ ಆತಂಕವಿಲ್ಲದೆ ಅಂತಿಮ ಹಂತ ತಲುಪಿದ್ದು, ಜಂಬೂಸವಾರಿಯೊಂದಿಗೆ ಗತವೈಭವ ಮರುಕಳಿಸಲು ಕ್ಷಣಗಣನೆ ಆರಂಭವಾಗಿದೆ.
ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಮಾತು ಅಕ್ಷರಶಃ ನಿಜ. ಈ ಬಾರಿ ಬರದ ಆತಂಕದಲ್ಲಿ ಆರಂಭವಾದ ಮೈಸೂರು ದಸರಾ ಯಾವುದೇ ಅಡ್ಡಿ ಆತಂಕವಿಲ್ಲದೆ ಅಂತಿಮ ಹಂತ ತಲುಪಿದ್ದು,ಜಂಬೂಸವಾರಿಯೊಂದಿಗೆ ಗತವೈಭವ ಮರುಕಳಿಸಲು ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ ಮೂಲಕ ಆನೆ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಸಂಜೆ ನಡೆಯಲಿರುವ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಕೆಲವರು ನೇರವಾಗಿ ಕಣ್ತುಂಬಿಕೊಳ್ಳಲು ಈಗಾಗಲೇ ಮೈಸೂರಿಗೆ ಬಂದಿದ್ದಾರೆ. ಇನ್ನೂ ಕೆಲವರು ಮನೆಯಲ್ಲೇ ಕುಳಿತು ಟಿವಿ ಮೂಲಕ ಜಂಬೂಸವಾರಿ ಸವಾರಿ ನೋಡಲು ಕಾತುರರಾಗಿದ್ದಾರೆ. ಅಲ್ಲಿ ಇಲ್ಲಿ ಏಕೆ? ನಿಮ್ಮ ಟಿವಿ9 ಕನ್ನಡ ಲೈವ್ ತೋರಿಸುತ್ತಿದೆ,. ಹೀಗಾಗಿ ಇದ್ದಲ್ಲಿಯೇ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಿ.