Worst Foods At Night: ರಾತ್ರಿ ಸಮಯದಲ್ಲಿ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಇಲ್ಲಿದೆ ಕಾರಣ
ದೇಹವನ್ನು ಆರೋಗ್ಯಕರವಾಗಿಡಲು, ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಅದೇ ರೀತಿ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಮತ್ತು ಅದನ್ನು ಸರಿಯಾದ ಸಮಯದಲ್ಲಿ ತಿನ್ನುವುದು ಕೂಡಾ ಮುಖ್ಯ. ಏಕೆಂದರೆ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪು ಸಮಯದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯ ಹದಗೆಡಬಹುದು.
ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಅದೇ ರೀತಿ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಮತ್ತು ಅದನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡುವುದು ಕೂಡಾ ಬಹಳ ಮುಖ್ಯ. ಏಕೆಂದರೆ ಆಹಾರದ ತಪ್ಪಾದ ಸೇವನೆಯಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನುವುದರಿಂದ ಅಸಿಡಿಟಿ, ಗ್ಯಾಸ್ ಮುಂತಾದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು ನಿಮ್ಮ ನಿದ್ರೆಯನ್ನು ಅಡ್ಡಿಪಡಿಸಬಹುದು. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಈ ಕೆಲವು ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ರಾತ್ರಿ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲವು ಆಹಾರಗಳನ್ನು ಸೇವಿಸಬೇಡಿ:
ಮೊಸರು: ಮೊಸರು ಅನೇಕ ಪೌಷ್ಟಿಕಾಂಶ ಗುಣಗಳಿಂದ ಸಮೃದ್ಧವಾಗಿರುವ ಆಹಾರವಾಗಿದೆ. ಹಗಲು ಹೊತ್ತಿನಲ್ಲಿ ಮೊಸರು ತಿನ್ನುವುದರಿಂದ ಹಲವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಸುತ್ತದೆ. ಮೂಳೆಗಳನ್ನು ಬಲಡಿಸುತ್ತದೆ ಮತ್ತು ದೇಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೊಟ್ಟೆಯಲ್ಲಿ ಅನಿಲ ರಚನೆಗೆ ಕಾರಣವಾಗಬಹುದು. ಇದರಿಂದ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಹಣ್ಣುಗಳು: ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ರಾತ್ರಿ ಹೊತ್ತು ಹಣ್ಣು ತಿನ್ನಲು ಸೂಕ್ತ ಸಮಯವಲ್ಲ. ಹಣ್ಣುಗಳಲ್ಲಿನ ತಣ್ಣನೆಯ ಗುಣ ಕಫದ ಸಮಸ್ಯೆಯನ್ನು ಉಂಟುಮಾಡಬಹುದು. ಮತ್ತು ಹಣ್ಣುಗಳಲ್ಲಿ ಸಕ್ಕರೆ, ಕಾರ್ಬೋಹೈಡ್ರೇಟ್ ಗಣಗಳಿವೆ. ಇವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ ರಾತ್ರಿ ಹಣ್ಣು ಸೇವನೆಯಿಂದ ಗ್ಯಾಸ್ ಮಲಬದ್ಧತೆಯ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಯಾವಾಗಲೂ ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಸಮಯದಲ್ಲಿ ಹಣ್ಣುಗಳನು ಸೇವಿಸಿ.
ಟೊಮೆಟೊ: ರಾತ್ರಿ ಹೊತ್ತಿನಲ್ಲಿ ಟೊಮೆಟೊ ಸೇವನೆ ಮಾಡಬಾರದು. ಏಕೆಂದರೆ ಇದು ಆಮ್ಲೀಯ ಗುಣವನ್ನು ಹೊಂದಿದ್ದು, ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆಯುಬ್ಬರ ಮತ್ತು ಅಜೀರ್ಣ ಉಂಟಾಗುತ್ತದೆ. ಇದಲ್ಲದೆ ಇದು ಟೈರಮೈನ್ ಎಂಬ ಅಂಶವನ್ನು ಹೊಂದಿದೆ. ಇದು ಒಂದು ರೀತಿಯ ಅಮೈನೋ ಆಮ್ಲದ ವಿಧವಾಗಿದ್ದು, ಇದು ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ.
ಇದನ್ನೂ ಓದಿ: ಈ ಆಹಾರ ಪದಾರ್ಥಗಳು ನಿಮ್ಮ ಹೃದಯವನ್ನು ಘಾಸಿಗೊಳಿಸಬಹುದು ಎಚ್ಚರ
ಕೋಳಿ ಮಾಂಸ: ಕೋಳಿ ಮಾಂಸ ಹೆಚ್ಚಿನ ಪ್ರಮಾಣದ ಪ್ರೋಟಿನ್ ಅಂಶವನ್ನು ಹೊಂದಿರುತ್ತದೆ. ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ರಾತ್ರಿಯಲ್ಲಿ ಕೋಳಿ ಮಾಂಸ ತಿನ್ನುವುದರಿಂದ ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ನಿದ್ರೆಗೆ ತೊಂದರೆಯನ್ನುಂಟುಮಾಡುತ್ತದೆ. ನೀವು ರಾತ್ರಿಯಲ್ಲಿ ಕೋಳಿ ಮಾಂಸ ಸೇವಿಸಲೇಬೇಕೆಂದಿದ್ದರೆ, ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಿ.
ಮಸಾಲೆಯುಕ್ತ ಆಹಾರಗಳು: ಹೆಚ್ಚಿನ ಮಸಾಲೆಯುಕ್ತ ಆಹಾರಗಳು, ಕೊಬ್ಬಿನಂಶದ ಆಹಾರಗಳು, ಕರಿದ ಆಹಾರಗಳನ್ನು ರಾತ್ರಿ ಹೊತ್ತಿನಲ್ಲಿ ಸೇವನೆ ಮಾಡುವುದು ಉತ್ತಮ ಆಯ್ಕೆಯಲ್ಲ. ಇಂತಹ ಆಹಾರ ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ರಾತ್ರಿಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದ ಅಜೀರ್ಣ ಮತ್ತು ಎದೆಯುರಿ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ