ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಹೀಗೆ ಬಳಸಿದ್ರೆ ಸೊಳ್ಳೆಗಳು ಓಡಿ ಹೋಗುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2024 | 3:00 PM

ಹೆಚ್ಚಿನವರು ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಈ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಹಾಗೂ ಫೈಟೊನ್ಯೂಟ್ರಿಯೆಂಟ್‌ ಗಳಿಂದ ಸಮೃದ್ಧವಾಗಿದೆ. ಈ ಸಿಪ್ಪೆ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅನೇಕ ಚರ್ಮದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಆದರೆ ಈ ಸಿಪ್ಪೆಯಿಂದ ಸೊಳ್ಳೆಯನ್ನು ಓಡಿಸಬಹುದು. ಸಿಪ್ಪೆಯನ್ನು ನಾನಾ ವಿಧಾನಗಳಲ್ಲಿ ಬಳಸಿ ಸೊಳ್ಳೆಗಳು ಬಾರದಂತೆ ತಡೆಯಬಹುದಾಗಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಹೀಗೆ ಬಳಸಿದ್ರೆ ಸೊಳ್ಳೆಗಳು ಓಡಿ ಹೋಗುತ್ತೆ
ಸಾಂದರ್ಭಿಕ ಚಿತ್ರ
Follow us on

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುತ್ತವೆ. ಸೈಲೆಂಟ್ ಆಗಿ ರಕ್ತವನ್ನು ಹೀರುವ ಸೊಳ್ಳೆಗಳು ಮನುಷ್ಯರಿಗೆ ಕೊಡುವ ತೊಂದರೆ ಅಷ್ಟಿಷ್ಟಲ್ಲ. ಈ ಸೊಳ್ಳೆಗಳು ಕಚ್ಚಿದರೆ ಮಲೇರಿಯಾ, ಚಿಕನ್‌ಗುನ್ಯಾ, ಡೆಂಗ್ಯೂ, ಝೀಕಾ ವೈರಸ್ ಸೇರಿದಂತೆ ಹಲವು ಕಾಯಿಲೆಗಳು ಬರುತ್ತದೆ. ಸೊಳ್ಳೆಗಳನ್ನು ಓಡಿಸುವ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳೇ ಹೆಚ್ಚು . ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಸುಲಭವಾಗಿ ಸೊಳ್ಳೆಗಳನ್ನು ಓಡಿಸಬಹುದು. ಈ ಕೆಲವು ವಿಧಾನಗಳನ್ನು ಅನುಸರಿಸಿದರೆ ಸೊಳ್ಳೆಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ.

  • ಸೊಳ್ಳೆಗಳನ್ನು ಓಡಿಸಲು ಈ ಬಾಳೆಹಣ್ಣಿನ ಸಿಪ್ಪೆಯೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಮನೆಯಲ್ಲಿ ಸೊಳ್ಳೆ ಕಾಟ ಅಧಿಕವಾಗಿದ್ದರೆ ರಾತ್ರಿ ಮಲಗುವ ಒಂದು ಗಂಟೆ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಕೋಣೆಯ ನಾಲ್ಕು ಮೂಲೆಗಳಲ್ಲಿ ಇಡಬೇಕು. ಈ ಸಿಪ್ಪೆಯ ವಾಸನೆಗೆ ಸೊಳ್ಳೆಗಳು ಹತ್ತಿರ ಕೂಡ ಬರಲ್ಲ.
  • ಬಾಳೆಹಣ್ಣಿನ ಸಿಪ್ಪೆಗಳನ್ನು ಸುಲಿದು ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್‌ ಮಾಡಿಕೊಳ್ಳಿ. ಈ ಪೇಸ್ಟ್‌ ಅನ್ನು ಮನೆಯ ಮೂಲೆಮೂಲೆಗಳಿಗೆ ಹಚ್ಚಿದರೆ, ಇದರ ವಾಸನೆಗೆ ಸೊಳ್ಳೆಗಳು. ಇಷ್ಟ ಪಡುವುದಿಲ್ಲ. ಈ ಸಿಪ್ಪೆ ಪೇಸ್ಟ್ ಸೊಳ್ಳೆಗಳು ಬರದಂತೆ ತಡೆಯುತ್ತದೆ. ಈ ರೀತಿ ಮಾಡಿಟ್ಟರೆ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
  • ಬಾಳೆಹಣ್ಣಿನ ಸಿಪ್ಪೆಯನ್ನು ಸುಡುವುದರಿಂದಲೂ ಸೊಳ್ಳೆಗಳನ್ನು ಓಡಿಸಬಹುದು. ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿಟ್ಟುಕೊಳ್ಳಿ, ಈ ಸಿಪ್ಪೆಯಿಂದ ಧೂಪದಂತೆ ಹೊಗೆ ಹಾಕಿದರೆ ಸೊಳ್ಳೆಗಳು ಮನೆಯೊಳಗೆ ಒಂದು ನಿಮಿಷ ಕೂಡ ನಿಲ್ಲುವುದಿಲ್ಲ. ಇದೊಂದು ಸಾವಯವ ಸೊಳ್ಳೆ ನಿವಾರಕವಾಗಿದ್ದು, ಇದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ