ಬೆಂಗಳೂರು: ಕ್ರಿಸ್‌ಮಸ್(Christmas) ಹಬ್ಬದ ಸಡಗರ ಈಗಾಗಲೇ ಪ್ರಾರಂಭವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿನಲ್ಲಿ ಡಿಸೆಂಬರ್ 16 ರಿಂದ ಪ್ರಾರಂಭವಾದ ಕೇಕ್ ಶೋ(Bengaluru Cake Show) ಜನವರಿ 2ರವರೆಗೆ ಪ್ರದರ್ಶನ ನಡೆಯಲಿದೆ. ಇದೀಗಾಗಲೇ ಅಂದರೆ, ಶುಕ್ರವಾರದಿಂದ ಪ್ರಾರಂಭವಾಗಿರುವ ಈ ಕೇಕ್ ಶೋ ನಲ್ಲಿ ವಿವಿಧ ವಿನ್ಯಾಸ ಕೇಕ್ ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರತಿ ವರ್ಷದ ಕೇಕ್ ಪ್ರದರ್ಶನವನ್ನು ನೋಡಿದ್ದರೂ ಕೂಡ, ಈ ವರ್ಷ ವಿಭಿನ್ನವಾದ ಥೀಮ್ ಇಟ್ಟುಕೊಂಡು ಕೇಕ್ ತಯಾರಿಸಿ ಪ್ರದರ್ಶದಲ್ಲಿ ಇಡಲಾಗಿದೆ. ಇದು ನಿಜವಾಗಿಯೂ ಸಂತೋಷ ತಂದುಕೊಟ್ಟಿದೆ ಎಂದು ಆಯೋಜಕರಾದ ಗೌತಮ್ ಅಗರ್ವಾಲ್ ಖುಷಿ ವ್ಯಕ್ತ ಪಡಿಸಿದರು.
ಯುಬಿ ಸಿಟಿಯ ಬಳಿಯ ಸೆಂಟ್ ಜೋಸೆಫ್ ಶಾಲಾ ಆವರಣದಲ್ಲಿ ಶುಗರ್ಸ್ ಸ್ಕಲ್‌ಪ್ಟ್ ಅಕಾಡೆಮಿ ವತಿಯಿಂದ ವಾರ್ಷಿಕ ಕೇಕ್ ಪ್ರದರ್ಶನ ನಡೆಯುತ್ತಿದೆ. 28 ಬಗೆಯ ವಿವಿಧ ವಿನ್ಯಾಸದ ಕೇಕ್ ಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅಮೇರಿಕಾದ ಕ್ಯಾಥೋಲಿಕ್ ಚರ್ಚ್. 20 ಅಡಿ ಎತ್ತರದ ಈ ಕೇಕ್ ನ್ನು ಸುಮಾರು 3 ತಿಂಗಳುಗಳಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Swiggyಯಲ್ಲಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿ
ಪ್ರತಿ ವರ್ಷ ಈ ಕೇಕ್ ಪ್ರದರ್ಶನ ಪ್ರಾರಂಭವಾಗುವ 6 ತಿಂಗಳ ಮೊದಲೇ ಥೀಮ್ ಏನು ಎಂದು ಚರ್ಚಿಸಲಾಗುತ್ತದೆ. ವೀಕ್ಷಕರನ್ನು ತೃಪ್ತಿಪಡಿಸುವುದು ನಮ್ಮ ಗುರಿಯಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ನ ಸಹ-ಸಂಸ್ಥಾಪಕ ಮನೀಶ್ ಗೌರ್ ಹೇಳಿದರು.
ಇದನ್ನೂ ಓದಿ: ಪ್ರಶಸ್ತಿ ಪಡೆದ ವನ್ಯ ಜೀವಿಗಳ ಫೋಟೋಗಳು ಇಲ್ಲಿವೆ
ಕ್ಯಾಥೋಲಿಕ್ ಚರ್ಚ್ ಸೇರಿದಂತೆ ಬೇಲೂರಿನ ಶಿಲ್ಪಕಲೆ, ಮೈಸೂರಿನ ದಸರಾ ಆನೆ, ಐಫಿಲ್ ಟವರ್, ಭಾರತೀಯ ಶಸ್ತ್ರಚಿಕಿತ್ಸೆ ಪದ್ಧತಿ, ಇವಿ ಕಾರು ಹಾಗೂ ಅಶೋಕ ಸ್ತಂಭಗಳು ಸೇರಿದಂತೆ 28 ಶೈಲಿಯ ಕೇಕ್ ಪ್ರದರ್ಶನಕ್ಕಿಡಲಾಗಿದೆ. ಪ್ರತಿ ದಿನ ಬೆಳಗ್ಗೆ 11ಗಂಟೆಯಿಂದ ರಾತ್ರಿ 9ಗಂಟೆವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಇದೆ. ಪ್ರವೇಶ ದರ 100 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಎಂದು ಅಕಾಡೆಮಿಯ ಬಿ.ವಿ. ಹರೀಶ್ ತಿಳಿಸಿದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:10 pm, Sun, 18 December 22