ಬೆಂಗಳೂರಿನಲ್ಲಿದ್ದು ಬೆಸ್ಟ್​ ಹೋಳಿಗೆ ಸವಿಯಲು ಬಯಸಿದರೆ ಇಲ್ಲಿಗೆ ಭೇಟಿ ನೀಡಿ

|

Updated on: Nov 20, 2024 | 3:34 PM

ನೀವು ಕೂಡ ಹೋಳಿಗೆ ಪ್ರಿಯರಾಗಿದ್ದರೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ರುಚಿ ರುಚಿಯಾದ ಬಿಸಿ ಬಿಸಿ ಹೋಳಿಗೆ ಸವಿಯಿರಿ. ಇಲ್ಲಿ ನಿಮ್ಮ ಮುಂದೆಯೇ ಬಿಸಿ ಬಿಸಿಯಾದ ಹೋಳಿಗೆ ತಯಾರಿಸುತ್ತಾರೆ. ದುಪ್ಪಟ್ಟು ರುಚಿ ಪಡೆಯಲು ತುಪ್ಪದೊಂದಿಗೆ ಸವಿಯಿರಿ.

ಬೆಂಗಳೂರಿನಲ್ಲಿದ್ದು ಬೆಸ್ಟ್​ ಹೋಳಿಗೆ ಸವಿಯಲು ಬಯಸಿದರೆ ಇಲ್ಲಿಗೆ ಭೇಟಿ ನೀಡಿ
Best Holige Shops in Bangalore
Follow us on

ಹಬ್ಬಗಳು ಬಂತೆಂದರೆ ಸಾಕು, ಮನೆಯಲ್ಲಿ ಹಬ್ಬದ ಅಡುಗೆಗಳು ರೆಡಿಯಾಗುತ್ತದೆ. ಅದರಲ್ಲೂ ಹಬ್ಬ ಎಂದರೆ ಅಲ್ಲಿ ಸಿಹಿ ಇರಲೇಬೇಕು. ಅದರಲ್ಲಿ ಪ್ರಮುಖವಾದುದು ಹೋಳಿಗೆ. ಸಾಮಾನ್ಯವಾಗಿ ಬೇಳೆ ಅಥವಾ ಕಾಯಿ ಒಬ್ಬಟ್ಟು ಮಾಡುತ್ತೇವೆ. ಇದಲ್ಲದೇ ಹೋಳಿಗೆಯಲ್ಲಿ ಹಲವು ವಿಧಗಳಿವೆ. ನೀವು ಕೂಡ ಹೋಳಿಗೆ ಪ್ರಿಯರಾಗಿದ್ದರೆ ಬೆಂಗಳೂರಿನಲ್ಲಿ ಈ ಅಂಗಡಿಗೆ ಭೇಟಿ ನೀಡಿ, ರುಚಿ ರುಚಿಯಾದ ಬಿಸಿ ಬಿಸಿ ಹೋಳಿಗೆ ಸವಿಯಿರಿ.

1. ಹೋಳಿಗೆ ಮನೆ, ಮಲ್ಲೇಶ್ವರಂ:

ಮಲ್ಲೇಶ್ವರಂನ ಸಂಪಿಗೆ ರೋಡ್​ನಲ್ಲಿರುವ ಹೋಳಿಗೆ ಮನೆಯಲ್ಲಿ ನೀವು 20ಕ್ಕೂ ಅಧಿಕ ಬಗೆಯ ಹೋಳಿಗೆಯನ್ನು ಸವಿಯಬಹುದು. ಇಲ್ಲಿ ಬೇಳೆ ಹೋಳಿಗೆಯಿಂದ ಪ್ರಾರಂಭವಾಗಿ ವಿವಿಧ ಬಗೆಯ ಡ್ರೈ ಫ್ರೂಟ್ಸ್ ನಿಂದ ತಯಾರಿಸಿದ ಹೋಳಿಗೆ ಇಲ್ಲಿ ಲಭ್ಯವಿದೆ.

2. ಭಾಸ್ಕರ್ಸ್​ ಮನೆ ಹೋಳಿಗೆ, ಬಸವನಗುಡಿ:

ಬಸವನಗುಡಿಯ ಡಿವಿ ಗುಂಡಪ್ಪ ರಸ್ತೆಯಲ್ಲಿರುವ ಭಾಸ್ಕರ್ಸ್​ ಮನೆ ಹೋಳಿಗೆ ಸಿಹಿ ಪ್ರಿಯರಿಗೆ ಒಂದು ಬೆಸ್ಟ್​​ ಸ್ಥಳ. ಇಲ್ಲಿ ಕೂಡ ವಿವಿಧ ಬಗೆಯ ಹೋಳಿಗೆಗಳ ಜೊತೆಗೆ ಹಬ್ಬಕ್ಕೆ ಬೇಕಾದ ಎಲ್ಲಾ ರೀತಿಯ ಗರಿಗರಿಯಾದ ಚಕ್ಲಿ, ಕೊಡ್ಬಳೆ, ನಿಪಟ್ಟು, ಬೆಣ್ಣೆ ಮುರುಕು ಮುಂತಾದ ವಿವಿಧ ತಿಂಡಿಗಳು ಸಹ ಇಲ್ಲಿ ಲಭ್ಯವಿದೆ.

3. ಭಟ್ ಹೋಳಿಗೆ ಮನೆ, ನಂದಿನಿ ಲೇಔಟ್:

ಸುಮಾರು 30 ವರ್ಷಗಳಿಂದ ಜನರಿಗೆ ರುಚಿರುಚಿಯಾದ ಹೋಳಿಗೆ ಬಡಿಸುತ್ತಿರುವ ನಂದಿನಿ ಲೇಔಟ್​ನ ಗಣೇಶ ಬ್ಲಾಕ್​ನಲ್ಲಿರುವ ಭಟ್ ಹೋಳಿಗೆ ಮನೆಗೆ ಒಂದು ಸಲ ಭೇಟಿ ನೀಡಿ. ಈ ಹೋಳಿಗೆ ನಿಮಗೆ ಮನೆಯಲ್ಲಿ ಮಾಡಿದ ಹೋಳಿಗೆಯ ರುಚಿಯನ್ನೇ ನೀಡುತ್ತದೆ. ತೆಂಗಿನ ಹೋಳಿಗೆ, ಬೇಳೆ ಒಬ್ಬಟ್ಟು, ಖರ್ಜೂರ ಹೋಳಿಗೆ ಜೊತೆಗೆ ಇಲ್ಲಿನ ಕಜ್ಜಾಯವನ್ನೂ ಒಮ್ಮೆ ಸವಿಯಿರಿ.

ಇದನ್ನೂ ಓದಿ: ಗರಿ ಗರಿ ದೋಸೆ ಸಿಗುವ ಬೆಂಗಳೂರಿನ ಟಾಪ್‌ 10 ಹೋಟೆಲ್‌ಗಳಿವು

4. ಮನೆ ಹೋಳಿಗೆ :

ಬೆಂಗಳೂರಿನಾದ್ಯಂತ ಮನೆಹೋಳಿಗೆಯ ವಿವಿಧ ಶಾಖೆಗಳಿದ್ದು, ಜಯನಗರ, ವಿಜಯನಗರ, ಜೆಪಿ ನಗರ, ಮಲ್ಲೇಶ್ವರಂ, ಮುಂತಾದ ನಿಮ್ಮ ಹತ್ತಿರದ ಶಾಖೆಗಳಿಗೆ ಭೇಟೆ ನೀಡಬಹುದಾಗಿದೆ. ಇಲ್ಲಿ ನೀವು ಸಾಕಷ್ಟು ಬಗೆಯ ಹೋಳಿಗೆಗಳನ್ನು ಸವಿಯಬಹುದು.

5. ಶ್ರೀಕೃಷ್ಣ ಮನೆ ಹೋಳಿಗೆ:

ಜೆಪಿ ನಗರದಲ್ಲಿ ಶ್ರೀಕೃಷ್ಣ ಮನೆ ಹೋಳಿಗೆ ಮತ್ತೊಂದು ಉತ್ತಮ ಆಯ್ಕೆ. ವಿವಿಧ ಬಗೆಯ ಹೋಳಿಗೆ ಜೊತೆ ನೀವು ಕುರುಕಲು ತಿಂಡಿಯನ್ನೂ ಕೂಡ ಸವಿಯಬಹುದು. ನಿಮ್ಮ ಮುಂದೆಯೇ ಬಿಸಿ ಬಿಸಿಯಾದ ಹೋಳಿಗೆ ತಯಾರಿಸುತ್ತಾರೆ. ದುಪ್ಪಟ್ಟು ರುಚಿ ಪಡೆಯಲು ತುಪ್ಪದೊಂದಿಗೆ ಸವಿಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ