Bizarre: ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲಲಾಗುತ್ತದೆ! ಯಾಕೆ ಗೊತ್ತಾ?

|

Updated on: Apr 14, 2023 | 7:30 AM

ಪ್ರತಿಯೊಬ್ಬ ಪೋಷಕರು ತಮಗೆ ಜನಿಸಿದ ಮಗು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಭಾರತದ ಈ ಒಂದು ನೆಲದಲ್ಲಿ ಬಿಳಿ ಮಗು ಶಾಪವಂತೆ! ಅವಿವಾಹಿತ ಅಥವಾ ವಿಧವೆಗೆ ಬಿಳಿ ಮಗು ಜನಿಸಿದರೆ ಆ ಮಗುವನ್ನು ಕೊಲ್ಲಾಗುತ್ತದೆ.

Bizarre: ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲಲಾಗುತ್ತದೆ! ಯಾಕೆ ಗೊತ್ತಾ?
ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲುವುದು ಜನಾಂಗದ ಸಂಸ್ಕೃತಿಯ ಭಾಗ (ಸಾಂದರ್ಭಿಕ ಚಿತ್ರ)
Follow us on

ಜಗತ್ತಿನ ವಿವಿಧ ಕಡೆಗಳಲ್ಲಿರುವ ಅನೇಕ ವಿಚಿತ್ರ ನಂಬಿಕೆಗಳು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಪ್ರತಿಯೊಬ್ಬ ಪೋಷಕರು ತಮಗೆ ಜನಿಸಿದ ಮಗು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಭಾರತದ ಈ ಒಂದು ನೆಲದಲ್ಲಿ ಸುಂದರ ಮಗು ಶಾಪವಾಗಿದೆ. ಹೌದು, ಅಂಡಮಾನ್ ಕೇಂದ್ರಾಡಳಿತ ಪ್ರದೇಶದಲ್ಲಿ ಭಾರತದ ಶಿಲಾಯುಗದ ಕೊನೆಯ ಸಂತತಿ ಎಂದೇ ಹೇಳಲಾಗುವ ಜರಾವಾ ಬುಡಕಟ್ಟು (Jarawa Tribe) ಜನಾಂಗದಲ್ಲಿ ಅವಿವಾಹಿತ ಅಥವಾ ವಿಧವೆಗೆ ಬಿಳಿ ಮಗು ಜನಿಸಿದರೆ ಆ ಮಗುವನ್ನು ಕೊಲ್ಲಾಗುತ್ತದೆ.
ಈ ಬುಡಕಟ್ಟು ಆಫ್ರಿಕಾದ ಸ್ಥಳೀಯ ಎಂದು ನಂಬಲಾಗಿದೆ.

ಮಾಧ್ಯಮಗಳ ಪ್ರಕಾರ ಇಲ್ಲಿನ ಯಾವುದೇ ಮನೆಯಲ್ಲಿ ಬಿಳಿ ಮಗು ಜನಿಸಿದರೆ ಅದನ್ನು ಕೊಲ್ಲಲಾಗುತ್ತದೆ. ಇಲ್ಲಿ ಬಿಳಿ ಮಗುವನ್ನು ಶಾಪವೆಂದು ಪರಿಗಣಿಸಲಾಗುತ್ತದೆ. ಜರವಾ ಬುಡಕಟ್ಟಿನ ಬಹುತೇಕ ಜನರು ಕಪ್ಪು ಮೈಬಣ್ಣವನ್ನು ಹೊಂದಿರುತ್ತಾರೆ. ಈ ಬುಡಕಟ್ಟಿನ ಮಹಿಳೆಗೆ ಬಿಳಿ ಬಣ್ಣದ ಮಗು ಜನಿಸಿದರೆ ಅದು ಬೇರೆ ಯಾವುದಾದರೂ ಬುಡಕಟ್ಟಿಗೆ ಸೇರಿದೆ ಎಂದು ನಂಬುತ್ತಾರೆ.

ಇನ್ನೂ ಬಿಡಿಸಿ ಹೇಳಬೇಕೆಂದರೆ, ಅವರ ಸಮುದಾಯದ ಜನರನ್ನು ಬಿಟ್ಟು ಹೊರಗಿನ ಸಮುದಾಯದ ಜನರ ಜತೆಗಿನ ದೈಹಿಕ ಸಂಬಂಧವನ್ನು ಒಪ್ಪುವುದಿಲ್ಲ. ಈ ಜನಾಂಗದ ಅವಿವಾಹಿತ ಅಥವಾ ವಿಧವೆಗೆ ಬಿಳಿ ಬಣ್ಣದ ಮಗು ಜನಿಸಿತು ಎಂದರೆ ಆ ಮಹಿಳೆಯೊಂದಿಗೆ ಬಾಹ್ಯ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ನಡೆದಿದೆ ಎಂದು ನಂಬುತ್ತಾರೆ. ಹೀಗಾಗಿ ಈ ಮಗುವನ್ನು ಜನರು ಕೊಲ್ಲುತ್ತಾರೆ. ಇನ್ನೊಂದು ವಿಚಿತ್ರವೆಂದರೆ, ಮಗುವನ್ನು ಕೊಲ್ಲುವ ಮುನ್ನ ಎಲ್ಲ ಮಹಿಳೆಯರು ಎದೆಹಾಲು ಉಣಿಸಿದ ನಂತರ ಕೊಲ್ಲಲಾಗುತ್ತದೆ. ಹೀಗೆ ಮಾಡುವುದು ಸಮುದಾಯದ ಪರಿಶುದ್ಧತೆಗಾಗಿ ಎನ್ನಲಾಗುತ್ತದೆ.

ಇದನ್ನೂ ಓದಿ: ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!

ಮಾಧ್ಯಮ ವರದಿಗಳ ಪ್ರಕಾರ, ಈ ಬುಡಕಟ್ಟು ಜನಾಂಗವನ್ನು 90 ರ ದಶಕದಲ್ಲಿ ಪತ್ತೆಯಾಗಿದೆ. ಭಾರತ ಸರ್ಕಾರವು ಈ ಬುಡಕಟ್ಟು ಜನಾಂಗದವರ ಫೋಟೋ ತೆಗೆಯುವ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಬಗ್ಗೆ ಕಟ್ಟುನಿಟ್ಟಾದ ಕಾನೂನುಗಳನ್ನು ಮಾಡಿದೆ. ಯಾರಾದರೂ ಅವರ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದರೆ ಜೈಲಿಗೆ ಹೋಗಬೇಕಾಗಬಹುದು. ಇದರೊಂದಿಗೆ ದಂಡವನ್ನೂ ವಿಧಿಸಬಹುದು.

ಜರಾವಾ ಬುಡಕಟ್ಟಿನ ಜನರು ಮೂಢನಂಬಿಕೆಯನ್ನು ಬಹಳಷ್ಟು ನಂಬುತ್ತಾರೆ. ಈ ಬುಡಕಟ್ಟಿನ ಜನರು ಗರ್ಭಿಣಿ ಮಹಿಳೆಯು ಪ್ರಾಣಿಗಳ ರಕ್ತವನ್ನು ಕುಡಿದರೆ ಅವಳ ಮಗು ಕಪ್ಪಾಗುತ್ತದೆ ಎಂದು ನಂಬುತ್ತಾರೆ. ಇಲ್ಲಿ ಕಪ್ಪು ಬಣ್ಣದ ಮಕ್ಕಳು ಮಾತ್ರ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ