Ambedkar Jayanti 2023: ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದೇಕೆ? ಕೆಲವು ವಿಶೇಷ ಸಂಗತಿಗಳು ಇಲ್ಲಿವೆ
ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ. ಬಿ.ಆರ್, ಅಂಬೇಡ್ಕರ್ ಅವರ ಜನ್ಮದಿನವನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ.
ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ. ಬಿ.ಆರ್, ಅಂಬೇಡ್ಕರ್ ಅವರ ಜನ್ಮದಿನವನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ಭಾರತೀಯರ ಪಾಲಿಗೆ ಸಾರ್ವಕಾಲಿಕ ಸಕಾಲಿಕ ಎನ್ನಬಹುದು. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ.
ಭಾರತೀಯರ ಪವಿತ್ರ ಗ್ರಂಥವಾದ ದೇಶದ ಆತ್ಮವೆಂದೇ ಕರೆಯಬಹುದಾದ ಸಂವಿಧಾನ ರಚನೆಯ ಹಿಂದಿನ ದೊಡ್ಡ ಶಕ್ತಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್. ಸಮಾಜದಲ್ಲಿ ದುರ್ಬಲರು, ಕಾರ್ಮಿಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅವರು ಸುದೀರ್ಘ ಹೋರಾಟ ನಡೆಸಿದರು ಮತ್ತು ಕೆಳವರ್ಗದವರಿಗೆ ಸಮಾನತೆಯ ಹಕ್ಕನ್ನು ನೀಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು.
ಕೆಳಜಾತಿಯಲ್ಲಿ ಜನಿಸಿದ ಭೀಮರಾವ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ತಾರತಮ್ಯವನ್ನು ಎದುರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಸಮಾಜದ ಜಾತಿ ವ್ಯವಸ್ಥೆಯನ್ನು ಕೊನೆಗಾಣಿಸಲು ಅವರು ಬಯಸಿದ್ದರು. ಹಾಗೆಯೇ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅನುಸರಿಸಲು ಕಾರಣವೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಬಾಲ್ಯದಿಂದಲೂ ಜಾತಿ ವ್ಯವಸ್ಥೆಯಿಂದ ನರಳುತ್ತಿದ್ದ ಅಂಬೇಡ್ಕರ್ 1935ರ ಅಕ್ಟೋಬರ್ 13ರಂದು ಘೋಷಣೆ ಮಾಡಿದರು. ಇದರಲ್ಲಿ ಅವರು ಹಿಂದೂ ಧರ್ಮವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರು, ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ, ಏಕೆಂದರೆ ವ್ಯಕ್ತಿಯ ಬೆಳವಣಿಗೆಗೆ ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯದ ಮೂರು ವಿಷಯಗಳು ಬೇಕಾಗುತ್ತವೆ. ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ. ಅವರ ಪ್ರಕಾರ ಜಾತಿ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದಲ್ಲಿ ಈ ಮೂರರ ಕೊರತೆ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಅಕ್ಟೋಬರ್ 14, 1956 ರಂದು ಡಾ.ಭೀಮರಾವ್ ಅಂಬೇಡ್ಕರ್ ಅವರು ತಮ್ಮ 3.65 ಲಕ್ಷ ಬೆಂಬಲಿಗರೊಂದಿಗೆ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿ ಪ್ರಚಲಿತದಲ್ಲಿರುವ ವರ್ಣ ವ್ಯವಸ್ಥೆಯನ್ನು ಕೊನೆಗೊಳಿಸಲು ಸಾಮಾಜಿಕ ಹೋರಾಟವನ್ನು ನಡೆಸಿದರು, ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಅನಿಷ್ಟಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದರು.
ಬಾಬಾ ಸಾಹೇಬರು ತಮ್ಮ ಭಾಷಣದಲ್ಲಿ ಗೌರವಾನ್ವಿತ ಜೀವನ ಮತ್ತು ಸಮಾನ ಹಕ್ಕುಗಳನ್ನು ಬಯಸಿದರೆ, ನೀವು ಸಹಾಯ ಮಾಡಬೇಕು, ಇದಕ್ಕಾಗಿ ಮತಾಂತರವೊಂದೇ ದಾರಿ ಎಂದು ಹೇಳಿದ್ದರು. ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ, ಕನಿಷ್ಠ ಅದು ನನ್ನ ಹಿಡಿತದಲ್ಲಿದೆ ಎಂಬುದು ಅವರ ಮಾತು.
ಪ್ರಜ್ಞಾ ಎಂದರೆ – ಮೂಢನಂಬಿಕೆ ಮತ್ತು ಅಲೌಕಿಕ ಶಕ್ತಿಗಳ ವಿರುದ್ಧ ತಿಳಿವಳಿಕೆ. ಕರುಣಾ ಎಂದರೆ – ಪ್ರೀತಿ, ಸಂಕಟದ ಬಗ್ಗೆ ಸಹಾನುಭೂತಿ. ಸಮಾನತೆ ಎಂದರೆ- ಧರ್ಮ, ಜಾತಿ, ಲಿಂಗ, ಉಚ್ಚ-ನೀಚ ಚಿಂತನೆಗಳಿಂದ ದೂರವಿದ್ದು, ಮನುಷ್ಯ ಸಮಾನತೆಯನ್ನು ನಂಬುವ ತತ್ವ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Fri, 14 April 23