ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಯುವತಿ ಮೇಲೆ ರ‍್ಯಾಪಿಡೊ (Rapido) ಬೈಕ್ ಚಾಲಕ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೊದಲು ಆ ಯುವತಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದು ಎಂದು ಬೈಕ್ ಚಾಲಕ (Bike Rider) ಸುಹಾಸ್ ಆರೋಪಿಸಿದ್ದಾನೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶ್ರೇಯಾ ಮೇಲೆ ಹಲ್ಲೆ ಮಾಡಿದ ಬೈಜ್ ಟ್ಯಾಕ್ಸಿ ಚಾಲಕ ಸುಹಾಸ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾನೆ.
ಬೆಂಗಳೂರು, (ಜುನ್ 16): ಯುವತಿ ಮೇಲೆ ರ‍್ಯಾಪಿಡೊ (Rapido) ಬೈಕ್ ಚಾಲಕ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೊದಲು ಆ ಯುವತಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದು ಎಂದು ಬೈಕ್ ಚಾಲಕ (Bike Rider) ಸುಹಾಸ್ ಆರೋಪಿಸಿದ್ದಾನೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶ್ರೇಯಾ ಮೇಲೆ ಹಲ್ಲೆ ಮಾಡಿದ ಬೈಜ್ ಟ್ಯಾಕ್ಸಿ ಚಾಲಕ ಸುಹಾಸ್ ಪ್ರತಿಕ್ರಿಯಿಸಿದ್ದು, ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಆ ಯುವತಿ. ಶರ್ಟ್ ಕಟ್ ನಲ್ಲಿ ಬಂದೆ ಅಂತ ಅರ್ಧ ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್ ನಲ್ಲಿ ಬೈದ್ರು. ನಾನು ಐದು ವರ್ಷದಿಂದ ರ್ಯಾಪಿಡೋ ಓಡಿಸುತ್ತಿದ್ದೇನೆ. ದಾರಿ ಗೊತ್ತು ಅಂದೆ. ಬಳಿಕ ಗಾಡಿ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ನನಗೆ ಕೆಟ್ಟದಾಗಿ ಬೈದರು. ಟಿಫಿನ್ ಬಾಕ್ಸ್ ನಿಂದ ಹೊಡೆದ್ರು. ಅಷ್ಟು ಜನರ ಮುಂದೆ ಹೊಡೆದಾಗ ಸಿಟ್ಟಲ್ಲಿ ನಾನು ಹೊಡೆದೆ ಎಂದು ಸ್ಪಷ್ಟಪಡಿಸಿದ್ದಾನೆ.
ಆಮೇಲೆ ಯುವತಿ ಕೆಲಸ ಮಾಡುವ ಅಂಗಡಿಗೆ ಹೋಗಿ ಮ್ಯಾನೇಜರ್ ಗೆ ದೂರು ನೀಡಿದೆ . ಅದಕ್ಕೆ ಮ್ಯಾನೇಜರ್ ಅಂದರು ಅವಳು ಸೈಕೋ, ಇಲ್ಲೂ ಹುಚ್ಚುಚ್ಚಾಗಿ ಇರ್ತಾಳೆ ಅಂದ್ರು. ಅದಕ್ಕೆ ನಾನು ವಾಪಸ್ ಬಂದೆ. ಈಗ ವಿಡಿಯೋ ವೈರಲ್ ಆದ್ಮೇಲೆ ಪೊಲೀಸರು ಕಾಲ್ ಮಾಡಿದ್ರು. ತನಿಖೆಗೆ ಸಹಾಕರ ನೀಡುತ್ತೇನೆ ಎಂದಿದ್ದಾನೆ