ಕೋಲಾರದಲ್ಲಿ ಬಿಜೆಪಿ ಸರ್ಕಾರ ಬಡವರಿಗೆ ಮನೆ ಕೊಟ್ಟಿದ್ದು ಪ್ರೂವ್ ಆದರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್
ಗ್ಯಾರಂಟಿ ಯೋಜನೆಗಳಿಗೆ ಕನಿಷ್ಠ ₹ 60,000 ಕೋಟಿ ಪ್ರತಿವರ್ಷ ಖರ್ಚಾಗುತ್ತದೆ, ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಬಿಜೆಪಿ ನಾಯಕರು ಹೇಳುತ್ತಿದ್ದರು, ಅದರೆ ಸರ್ಕಾರ ರಚನೆಯಾದ ಒಂದು ತಿಂಗಳು ಅವಧಿಯಲ್ಲೇ ಸಿದ್ದರಾಮಯ್ಯ ಸರ್ಕಾರ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿತು ಎಂದು ಜಮೀರ್ ಹೇಳಿದರು.
ಕೋಲಾರ, ಜೂನ್ 16: ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಇಂದು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತ ಬಿಜೆಪಿ ನಾಯಕರಿಗೆ (BJP leaders) ಸವಾಲೆಸೆದರು. ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಕೇವಲ ಪಂಚ ಗ್ಯಾರಂಟಿಗಳ ಭರವಸೆಯನ್ನು ಮಾತ್ರ ನೀಡಿತ್ತು, ಸ್ಲಂ ನಿವಾಸಿಗಳಿಗೆ ಮತ್ತು ರಾಜೀವ್ ಗಾಂಧಿ ಯೋಜನೆ ಅಡಿ ಮನೆಗಳನ್ನು ಕೊಡುತ್ತೇವೆ ಅಂತ ಹೇಳಿರಲಿಲ್ಲ, ಆದರೆ ತಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿದೆ, ಹಾಗಾಗೇ ಮನೆಗಳನ್ನು ನೀಡಿದ್ದೇವೆ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಒಂದೇಒಂದು ಮನೆ ಕೊಟ್ಟಿರುವುದನ್ನು ಸಿದ್ಧಮಾಡಿದರೆ ತಾನು ರಾಜಕೀಯದಿಂದ ನಿವೃತ್ತನಾಗೋದಾಗಿ ಸಚಿವ ಜಮೀರ್ ಹೇಳಿದರು.
ಇದನ್ನೂ ಓದಿ: ಜಮೀರ್ ಅಹ್ಮದ್ ಹೇಳಿದ ಕೂಡಲೇ ಏನೂ ಆಗಲ್ಲ: ಮುಸ್ಲಿಂ ಮೀಸಲಾತಿ ಹೆಚ್ಚಳ ಬಗ್ಗೆ ಪ್ರಲ್ಹಾದ್ ಜೋಶಿ ತಿರುಗೇಟು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ