ಕಾಶ್ಮೀರ: ಮಸೀದಿ ನೆಲಸಮ ಮಾಡುವ ವೇಳೆ ನಿಗೂಢ ಸ್ಫೋಟ, ಮೂವರಿಗೆ ಗಾಯ
ಉತ್ತರ ಕಾಶ್ಮೀರದ ಹಂದ್ವಾರದ ಕಶೇರಿಯಲ್ಲಿ ಮಸೀದಿಯನ್ನು ನೆಲಸಮ ಮಾಡುವ ವೇಳೆ ನಿಗೂಢ ಸ್ಫೋಟ ಸಂಭವಿಸಿದ್ದು,ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ಮಸೀದಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಲು ಸ್ಥಳೀಯರು ಹಳೆಯ ಮಸೀದಿಯನ್ನು ಕೆಡವುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅನಿರೀಕ್ಷಿತವಾಗಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ.
ಹಂದ್ವಾರ, ಜೂನ್ 16: ಉತ್ತರ ಕಾಶ್ಮೀರದ ಹಂದ್ವಾರದ ಕಶೇರಿಯಲ್ಲಿ ಮಸೀದಿಯನ್ನು ನೆಲಸಮ ಮಾಡುವ ವೇಳೆ ನಿಗೂಢ ಸ್ಫೋಟ ಸಂಭವಿಸಿದ್ದು,ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ಮಸೀದಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಲು ಸ್ಥಳೀಯರು ಹಳೆಯ ಮಸೀದಿಯನ್ನು ಕೆಡವುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅನಿರೀಕ್ಷಿತವಾಗಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನಟ್ನೂಸಾದ ಮುದಾಸಿರ್ ಅಹ್ಮದ್ ಮಿರ್, ಕಚ್ರಿಯ ಗುಲಾಮ್ ಅಹ್ಮದ್ ತಂತ್ರೇ ಮತ್ತು ಹಾದಿಪೋರಾದ ಓವೈಸ್ ಅಹ್ಮದ್ ಎಂದು ಗುರುತಿಸಲಾಗಿದೆ. ಮೂವರನ್ನೂ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಸ್ಫೋಟದ ನಂತರ, ಭದ್ರತಾ ಪಡೆಗಳು ತ್ವರಿತವಾಗಿ ಸ್ಥಳಕ್ಕೆ ತಲುಪಿ ಪ್ರದೇಶವನ್ನು ಸುತ್ತುವರೆದವು.
ಪೊಲೀಸ್ ತಂಡವು ಪ್ರಸ್ತುತ ಸ್ಫೋಟದ ಮೂಲ ಮತ್ತು ಸ್ವರೂಪವನ್ನು ತನಿಖೆ ಮಾಡುತ್ತಿದೆ. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಂದ್ವಾರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಇದು ಉಗ್ರರು ಅಡಗಿರುವ ಸ್ಥಳವಾಗಿತ್ತು, ಇದೀಗ ಅದೇ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಉಗ್ರರು ಮಸೀದಿಯೊಳಗೆ ಆಶ್ರಯ ಪಡೆದಿರಬಹುದು. ಗ್ರೆನೇಡ್ ಅಥವಾ ಯಾವುದೇ ಇತರ ಸ್ಫೋಟಕ ವಸ್ತುವನ್ನು ಅಲ್ಲಿಯೇ ಬಿಟ್ಟಿರಬಹುದು ಅದು ಈಗ ಸ್ಫೋಟಗೊಂಡಿರಬಹುದು ಎಂದದು ಹೇಳಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ