ಎರಡು ದೇಶಗಳ ನಡುವೆ ಯುದ್ಧ ಶುರುವಾದಾಗ ಇಂಧನ ಮತ್ತು ಚಿನ್ನ-ಬೆಳ್ಳಿ ಬೆಲೆ ಹೆಚ್ಚಾಗುತ್ತದೆ: ಟಿಎ ಸರವಣ, ವ್ಯಾಪಾರಿ ಮತ್ತು ಶಾಸಕ
ಯುದ್ಧಗಳ ಸಮಯದಲ್ಲಿ ಚಿನ್ನದ ಜೊತೆ ಬೆಳ್ಳಿಯ ಬೆಲೆಯೂ ಹೆಚ್ಚಾಗುತ್ತದೆ ಎಂದು ನಗರದ ಪ್ರಮುಖ ಬುಲಿಯನ್ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ಸರವಣ ಹೇಳುತ್ತಾರೆ, ಇವತ್ತು ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹ 110 ಅಂದರೆ ಕೆಜಿಗೆ ₹ 1,10,000 ಆಗಿದೆ ಎಂದು ಹೇಳುವ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 3,413 ಡಾಲರ್ ಆಗಿದೆ ಎನ್ನುತ್ತಾರೆ.
ಬೆಂಗಳೂರು, ಜೂನ್ 16: ಇಪ್ಪತ್ನಾಲ್ಕು ಕ್ಯಾರಟ್ ಚಿನ್ನದ ಬೆಲೆ ಇವತ್ತಿನ ಪ್ರತಿ ಗ್ರಾಮಿಗೆ ₹10,300, ಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ, ಎರಡು ದೇಶಗಳ ನಡುವೆ ಯುದ್ಧ ಶುರುವಾದಾಗ ಮೊದಲಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತದೆ, ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗುತ್ತದೆ ಎಂದು ಬುಲಿಯನ್ ವ್ಯಾಪಾರಿ ಮತ್ತು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿಎ ಸರವಣ ಹೇಳುತ್ತಾರೆ. ಅಮೇರಿಕ ಮತ್ತು ಚೀನಾದ ನಡುವೆ ನಡೆಯುತ್ತಿರುವ ಟ್ರೇಡ್ ವಾರ್ ಕಾರಣ ಬಂಗಾರದ ಬೆಲೆ ಪ್ರತಿ ಗ್ರಾಮಿಗೆ ರೂ 10,000 ತಲುಪಿತು, ಈಗ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧಾ ಶುರುವಾಗಿರುವಿದರಿಂದ ಬೆಲೆ ಮತ್ತೇ ₹ 300 ರಷ್ಟು ಹೆಚ್ಚಾಗಿದೆ. ಯುದ್ಧ ಮುಂದುವರಿದರೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದು ಸರವಣ ಹೇಳಿದರು.
ಇದನ್ನೂ ಓದಿ: Gold Rate Today Bangalore: ವಾರಾಂತ್ಯದಲ್ಲಿ ನಿಲ್ಲದ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ