Relationship: ಒನ್‌ಸೈಡ್ ಲವ್ ಸಂಕೇತಗಳು ತಿಳಿದುಕೊಳ್ಳುವುದು ಹೇಗೆ?

ಒನ್‌ಸೈಡ್ ಲವ್ ಅಥವಾ ಸಂಬಂಧ ಒಬ್ಬ ವ್ಯಕ್ತಿಯ ಮೇಲೆ ಮಾನಸಿಕವಾಗಿ ಪರಿಣಾಮ ಬೀರಬಹುದು. ಈ ಒನ್‌ಸೈಡ್ ಸಂಬಂಧದ ಕೆಲವೊಂದು ಚಿಹ್ನೆಗಳು ಇಲ್ಲಿವೆ.

Relationship: ಒನ್‌ಸೈಡ್ ಲವ್ ಸಂಕೇತಗಳು ತಿಳಿದುಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 13, 2023 | 5:48 PM

ಒನ್‌ಸೈಡ್ ಸಂಬಂಧವೆಂದರೆ, ದಾಂಪತ್ಯ ಅಥವಾ ಪ್ರೀತಿಯ ಸಂಬಂಧದಲ್ಲಿ ದಂಪತಿಗಳಿಬ್ಬರ ಮಧ್ಯೆ ಕೇವಲ ಒಬ್ಬ ವ್ಯಕ್ತಿ ಮಾತ್ರ ತನ್ನ ಸಂಗಾತಿಯ ಬಗ್ಗೆ ಕಾಳಜಿ ವಹಿಸುತ್ತಾ, ಪ್ರೀತಿ ಮಾಡುತ್ತಾ, ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುತ್ತಾ, ಸಂಗಾತಿಯ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲವಾಗಿ ನಿಲ್ಲುತ್ತಾನೆ. ಆದರೆ ಆತನ ಸಂಗಾತಿ ಆತನ ಅಥವಾ ಆಕೆಯ ಬಗ್ಗೆ ಪ್ರೀತಿಯನ್ನು ತೊರದೆ ನಿರ್ಲಕ್ಷ್ಯ ತೋರಿದರೆ ಅದು ಒನ್‌ಸೈಡ್ ಸಂಬಂಧವಾಗಿರುತ್ತದೆ. ಇದು ನಿಷ್ಠಾವಂತ ಸಂಗಾತಿಯ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಹುದು. ತನ್ನ ಸಂಗಾತಿ ತನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಖಿನ್ನತೆಗೂ ಒಳಗಾಗಬಹುದು. ನಿಮ್ಮ ಸಂಬಂಧವು ಒನ್ ಸೈಡ್ ಆಗಿರಬಹುದೇ ಎಂದು ಈ ಸಂಕೇತಗಳ ಮೂಲಕ ತಿಳಿಯಿರಿ.

ಸಂವಹನದ ಕೊರತೆ: ಸಂಬಂಧದಲ್ಲಿ ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಸಂಗಾತಿಯ ಜೊತೆಗೆ ಸಂಭಾಷಣೆಯನ್ನು ಮಾಡುತ್ತಿದ್ದರೆ ಮತ್ತು ಇನ್ನೊಬ್ಬ ವ್ಯಕ್ತಿಯು ಮಾತನಾಡಲು ಆಸಕ್ತಿ ತೋರಿಸದಿದ್ದರೆ ಅಥವಾ ಆತನ ಮಾತಿಗೆ ಪ್ರತಿಕ್ರಿಯಿಸದಿದ್ದರೆ, ಅದು ಏಕಪಕ್ಷೀಯ ಅಥವಾ ಒನ್ ಸೈಡ್ ಸಂಬಂದದ ಸಂಕೇತವಾಗಿರಬಹುದು.

ಅಸಮತೋಲಿತ ಪ್ರಯತ್ನ: ಇಬ್ಬರ ನಡುವಿನ ಸಂಬಂಧದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ತಾನು ಪ್ರೀತಿ ಮಾಡುವ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತಾ ಪ್ರೀತಿಯಲ್ಲಿ ಆಸಕ್ತಿ ತೋರಿಸುತ್ತಿದ್ದರೆ ಅದು ಒನ್ ಸೈಡ್ ಸಂಬಂಧದ ಸಂಕೇತವಾಗಿರಬಹುದು.

ಬೆಂಬಲದ ಕೊರತೆ: ಸಂಬಂಧದಲ್ಲಿ ಯಾವಾಗಲೂ ಪರಸ್ಪರ ಬೆಂಬಲದ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿ ಮಾತ್ರ ತನ್ನ ಸಂಗಾತಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾ, ಇನ್ನೊಬ್ಬ ವ್ಯಕ್ತಿ ಆತನಿಗೆ ಯಾವ ರೀತಿಯಲ್ಲೂ ಬೆಂಬಲವನ್ನು ನೀಡದಿದ್ದರೆ ಅದು ಒನ್ ಸೈಡ್ ಸಂಬಂಧದ ಲಕ್ಷಣವಾಗಿರಬಹುದು.

ಇದನ್ನೂ ಓದಿ: Relationships: ನಂಬಿಕೆ ದ್ರೋಹದ ಬಳಿಕ ಸಂಬಂಧದಲ್ಲಿ ಮತ್ತೆ ವಿಶ್ವಾಸ ಬೆಳೆಸಲು ಇಲ್ಲಿವೆ 6 ಮಾರ್ಗಗಳು

ಮೆಚ್ಚುಗೆಯನ್ನು ಸೂಚಿಸದಿರುವುದು: ತನ್ನ ಸಂಗಾತಿಯ ಪ್ರಯತ್ನಗಳಿಗೆ ಪ್ರಶಂಸಿಸಿ ಮೆಚ್ಚುಗೆಯ ಮಾತುಗಳನ್ನು ಆಡದಿದ್ದರೆ, ಅಥವಾ ಸಂಗಾತಿಯನ್ನು ಲಘುವಾಗಿ ಪರಿಗಣಿಸಿದರೆ ಅದು ಒನ್ ಸೈಡ್ ಸಂಬಂಧದ ಸಂಕೇತವಾಗಿರುತ್ತದೆ.

ಮೌಲ್ಯ ನೀಡದಿರುವುದು: ಸಂಬಂಧದಲ್ಲಿ ಒಬ್ಬ ವ್ಯಕ್ತಿ ತನ್ನ ಸಂಗಾತಿಯ ಅಗತ್ಯಗಳಿಗೆ ಮೊದಲ ಆದ್ಯತೆ ನೀಡದಿದ್ದರೆ ಅಥವಾ ಅವರಿಗೆ ಮೌಲ್ಯ ನೀಡದಿದ್ದರೆ ಅದು ಒನ್ ಸೈಡ್ ಸಂಬಂಧದ ಸಂಕೇತವಾಗಿರಬಹುದು.

ನಂಬಿಕೆಯ ಕೊರತೆ: ಒಬ್ಬ ವ್ಯಕ್ತಿ ತನ್ನ ಸಂಗಾತಿಯ ನಿಷ್ಠೆ ಅಥವಾ ಬದ್ಧತೆಯನ್ನು ಪ್ರಶ್ನಿಸುತ್ತಿದ್ದರೆ, ಅದು ಒನ್‌ಸೈಡ್ ಸಂಬಂಧದ ಸಂಕೇತವಾಗಿರಬಹುದು.

ನಿರ್ಲಕ್ಷ್ಯದ ಭಾವನೆ: ಸಂಬಂಧದಲ್ಲಿ ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಸಂಗಾತಿಯ ಜೊತೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದರೆ, ಆದರೆ ಆತನ ಸಂಗಾತಿಯು ನಿರ್ಲಕ್ಷ್ಯ ತೋರಿಸಿದರೆ ಅದು ಒನ್‌ಸೈಡ್ ಸಂಬಂಧದ ಲಕ್ಷಣವಾಗಿರಬಹುದು.

ನಿಮ್ಮ ಸಂಬಂಧದಲ್ಲಿ ಈ ರೀತಿಯ ಯಾವುದೇ ಸಂಕೇಗಳು ಕಂಡುಬಂದರೆ, ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ