Relationships: ನಂಬಿಕೆ ದ್ರೋಹದ ಬಳಿಕ ಸಂಬಂಧದಲ್ಲಿ ಮತ್ತೆ ವಿಶ್ವಾಸ ಬೆಳೆಸಲು ಇಲ್ಲಿವೆ 6 ಮಾರ್ಗಗಳು

ಪ್ರೀತಿಪಾತ್ರರ ನಂಬಿಕೆ ದ್ರೋಹ ನಿಜವಾಗಿಯೂ ಅತಿಯಾಗಿ ನೋವುಂಟುಮಾಡುತ್ತದೆ. ಮಾನಸಿಕ ಖುಷಿಯನ್ನು, ಕಳೆದುಹೋದ ನಂಬಿಕೆಯನ್ನು ನೀವು ಪುನಃ ಪಡೆದುಕೊಳ್ಳುವ ಮಾರ್ಗಗಳು ಇಲ್ಲಿವೆ.

Relationships: ನಂಬಿಕೆ ದ್ರೋಹದ ಬಳಿಕ ಸಂಬಂಧದಲ್ಲಿ ಮತ್ತೆ ವಿಶ್ವಾಸ ಬೆಳೆಸಲು ಇಲ್ಲಿವೆ 6 ಮಾರ್ಗಗಳು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 07, 2023 | 6:43 PM

ಸಂಗಾತಿಯಿಂದ ದ್ರೋಹಕ್ಕೊಳಗಾದ ನಂತರ, ಸ್ನೇಹಿತ ಅಥವಾ ಕುಟುಂಬ ಸದಸ್ಯರನ್ನು ನಂಬುವುದು ಸುಲಭದ ಮಾತಲ್ಲ. ಆಗ ಯಾರ ಮೇಲೂ ನಂಬಿಕೆ ಇರುವುದಿಲ್ಲ. ಭರವಸೆ ಕೆಳೆದುಕೊಳ್ಳುವುದು, ಸುಳ್ಳು ಹೇಳುವುದು ಅಥವಾ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡುವುದು ಇವೆಲ್ಲವೂ ತುಂಬಾ ನೋವುಂಟು ಮಾಡುತ್ತದೆ. ಕೆಲವರು ದ್ರೋಹ ಮರೆತು ಕ್ಷಮಿಸಿ ಮುನ್ನೆಡೆಯುತ್ತಾರೆ ಆದರೆ ಇನ್ನು ಕೆಲವರಿಗೆ ನಡೆದ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಆ ನೋವು ಸಂಬಂಧವನ್ನು ಶಾಶ್ವತವಾಗಿ ಬದಲಾಯಿಸುರುತ್ತದೆ. ಆದರೆ ನಿಮ್ಮ ಸಂಗಾತಿ ಅಥವಾ ಸ್ನೇಹಿತನಿಂದ ಆ ವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯವೇ? ನಿಜವಾದ ಪ್ರಯತ್ನ, ಆಳವಾದ ಪ್ರೀತಿ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಬಯಕೆ, ಸಂಬಂಧವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮರಳಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ನಿಮ್ಮಿಬ್ಬರ ನಡುವೆ ವಿಷಯಗಳು ಸಾಮಾನ್ಯವಾಗುವ ಮೊದಲು ಸ್ವಲ್ಪ ಸಮಯವನ್ನು ನೀಡಬೇಕಾಗುತ್ತದೆ.

ಸಂಬಂಧಗಳಲ್ಲಿ ದ್ರೋಹವು ಒಬ್ಬ ವ್ಯಕ್ತಿ ಅನುಭವಿಸಬಹುದಾದ ಅತ್ಯಂತ ಆಘಾತಕಾರಿ ಮತ್ತು ನೋವಿನ ಅನುಭವಗಳಲ್ಲಿ ಒಂದಾಗಿದೆ. ಇದು ಅಪನಂಬಿಕೆ, ಅಸಮಾಧಾನ, ಗೊಂದಲ ಮತ್ತು ಖಿನ್ನತೆಗೆ ಕಾರಣವಾಗಬಹುದು. ವಿಶ್ವಾಸ ಘಾತುಕತೆಯೊಂದಿಗೆ ಬರುವ ನೋವನ್ನು ವಿವರಿಸುವುದು ಕಷ್ಟ ಅಲ್ಲದೆ ಗುಣವಾಗಲು ಬಹಳ ಸಮಯ ತೆಗೆದುಕೊಳ್ಳಬಹುದು. ಹಾಗಾಗಿ ಕ್ಷಮೆ ಸಿಗುವವ ವರೆಗೆ ಇಬ್ಬರೂ ತಾಳ್ಮೆಯಿಂದ ಇದ್ದು ಸಂಬಂಧವನ್ನು ಸರಿಪಡಿಸಿಕೊಳ್ಳಬೇಕು.

ದ್ರೋಹಕ್ಕೊಳಗಾದ ನಂತರ ನಂಬಿಕೆಯನ್ನು ಪುನರ್ನಿರ್ಮಿಸಲು 6 ಮಾರ್ಗಗಳು ಇಲ್ಲಿವೆ.

ತಪ್ಪನ್ನು ಒಪ್ಪಿಕೊಳ್ಳಿ: ಸಂಗಾತಿಯ ವಿಶ್ವಾಸ ಪಡೆದುಕೊಳ್ಳಲು ಮೊದಲ ಹೆಜ್ಜೆಯೆಂದರೆ ತಪ್ಪು ಮಾಡಿದವರು ತಮ್ಮ ಕಾರ್ಯಗಳನ್ನು ಒಪ್ಪಿಕೊಳ್ಳುವುದು. ನೆಪಗಳನ್ನು ಹೇಳದೆ ಅಥವಾ ಇತರರನ್ನು ದೂಷಿಸದೆ ಒಪ್ಪಿಕೊಳ್ಳುವುದು ದೊಡ್ಡತನ. ನಿಮ್ಮ ತಪ್ಪಿಗೆ ನೀವೇ ಜವಾಬ್ದಾರರು ಹಾಗಾಗಿ ಸ್ನೇಹ ಅಥವಾ ವ್ಯವಹಾರವಾಗಿರಲಿ ಯಾವುದೇ ಸಂಬಂಧದಲ್ಲಿ ವಿಶ್ವಾಸವನ್ನು ಪುನಃ ಪಡೆದುಕೊಳ್ಳಲು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಅನಿವಾರ್ಯ.

ಇದನ್ನೂ ಓದಿ:Live-in relationships: ಲೀವ್ ಇನ್‌ ರಿಲೇಷನ್‌ಶಿಪ್‌ ನೋಂದಣಿ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನಿಜವಾದ ಪಶ್ಚಾತ್ತಾಪ ಮತ್ತು ಸಹಾನುಭೂತಿ ತೋರಿಸಿ: ಪ್ರಾಮಾಣಿಕ ಕ್ಷಮೆಯಾಚನೆಯು ದ್ರೋಹದಿಂದ ಉಂಟಾದ ನೋವನ್ನು ಸರಿಪಡಿಸಲು ಸಹಾಯಮಾಡಬಲ್ಲದು. ಕ್ಷಮೆಯಾಚಿಸುವವನು ನಿಜವಾದ ಪಶ್ಚಾತ್ತಾಪ ಮನಸ್ಸಿನಲ್ಲಿರುವುದು ಮುಖ್ಯ ಏಕೆಂದರೆ ಅದು ಪ್ರದರ್ಶನ ವಾಗಬಾರದು ಹಾಗೂ ನಾವೆಷ್ಟು ನೋವು ನೀಡಿದ್ದೇವೆ ಎಂದು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ತಮ್ಮ ಸಂಗಾತಿ ಅಥವಾ ಸ್ನೇಹಿತನ ಭಾವನೆಗಳನ್ನು ಮೌಲ್ಯೀಕರಿಸಬೇಕು ಮತ್ತು ಅವರೊಂದಿಗೆ ಸಹಾನುಭೂತಿ ಹೊಂದಿರಬೇಕು.

ಹಾನಿಯನ್ನು ಸರಿಪಡಿಸಿ: ದ್ರೋಹದಿಂದ ಉಂಟಾದ ಹಾನಿಯನ್ನು ಪುನಃಸ್ಥಾಪಿಸಿ. ವ್ಯವಹಾರವಾಗಿರಲಿ ಅಥವಾ ಸಂಬಂಧದಲ್ಲಿ, ಆಗ ಉಂಟಾದ ಯಾವುದೇ ನಷ್ಟವನ್ನು ಸರಿದೂಗಿಸಬಹುದು. ದ್ರೋಹದಿಂದ ಉಂಟಾಗುವ ಹಾನಿಯನ್ನು ಸರಿಪಡಿಸುವ ಗಣನೀಯ ಪ್ರಯತ್ನಗಳು ಸಂಬಂಧದಲ್ಲಿ ವಿಶ್ವಾಸವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.

ಪಾರದರ್ಶಕವಾಗಿರಿ: ಸಂಗಾತಿಯ ನಂಬಿಕೆಯನ್ನು ಮತ್ತೆ ಪಡೆಯಲು ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ಮಾಡುವ ಕಾರ್ಯಗಳ ಬಗ್ಗೆ ನಿರಂತರ ಪಾರದರ್ಶಕತೆಯ ಅಗತ್ಯವಿದೆ. ಇದರರ್ಥ ನಿಮ್ಮ ಜೀವನದ ಹೆಚ್ಚಿನದನ್ನು ಹಂಚಿಕೊಳ್ಳುವುದು, ಸ್ವ ಇಚ್ಛೆಯಿಂದ ಸಂಬಂಧಿತ ಮಾಹಿತಿಯನ್ನು ನೀಡುವುದು ಮತ್ತು ಪ್ರಾಮಾಣಿಕರಾಗಿರುವುದು, ಅದು ಕೆಲವೊಮ್ಮೆ ನಿಮಗೆ ಅಹಿತಕರವಾಗಿದ್ದರೂ ಸಹ.

ಸ್ಥಿರತೆಯನ್ನು ಅಭ್ಯಾಸ ಮಾಡಿ ಅದನ್ನೇ ಅನುಸರಿಸಿ: ನಿಮ್ಮನ್ನು ನಂಬಬಹುದು ಎಂದು ನಿರಂತರವಾಗಿ ತೋರಿಸಿಕೊಡುವ ಮೂಲಕ ಕಾಲಾನಂತರದಲ್ಲಿ ಮತ್ತೆ ವಿಶ್ವಾಸ ಪಡೆಯಬಹುದು. ಇದು ಭರವಸೆಗಳನ್ನು ಉಳಿಸಿಕೊಳ್ಳುವುದು, ಸಮಯಪ್ರಜ್ಞೆ ಮತ್ತು ಸಾಮಾನ್ಯವಾಗಿ ನಿಮ್ಮ ಬದ್ಧತೆಗಳಿಗೆ ನೀವು ನಿಮ್ಮನ್ನು ತೊಡಗಿಸಿಕೊಳ್ಳಬೇಕು. ನಂಬಿಕೆ ಮುರಿದಾಗ, ನೀವು ವಿಶ್ವಾಸಾರ್ಹರು ಮತ್ತು ಸಂಬಂಧವನ್ನು ಪೋಷಿಸಲು ನಿಮಗೂ ಅರ್ಹತೆ ಇದೆ ಎಂಬುದನ್ನು ಸಾಬೀತುಪಡಿಸಬೇಕು. ಹಾಗಾಗಿ ನಿಮ್ಮ ಯಾವುದೇ ವಿಚಾರದಲ್ಲಿ ಸ್ಥಿರತೆ ಕಳೆದುಕೊಳ್ಳಬೇಡಿ.

ತಾಳ್ಮೆಯಿಂದಿರಿ ಮತ್ತು ಸಾಧ್ಯವಾದಷ್ಟು ಸಮಯ ನೀಡಿ: ನಂಬಿಕೆಯನ್ನು ಹುಟ್ಟುವುದು ರಾತ್ರೋರಾತ್ರಿಯ ಪ್ರಕ್ರಿಯೆಯಲ್ಲ, ಅಂತಹ ಸಂದರ್ಭದಲ್ಲಿ ವ್ಯಕ್ತಿಯೊಂದಿಗೆ ತಾಳ್ಮೆಯಿಂದಿರುವುದು ಅತ್ಯಗತ್ಯ. ನಂಬಿಕೆಯನ್ನು ಸಂಪೂರ್ಣವಾಗಿ ಮತ್ತೆ ಪಡೆಯಲು ಮೊದಲು ಅವರ ಭಾವನೆಗಳು ಸರಿಯಾಗುವವರೆಗೆ ಅವರಿಗೆ ಸಮಯ ಬೇಕಾಗಬಹುದು. ಹಾಗಾಗಿ ಅವರಿಗೆ ಭಾವನಾತ್ಮಕ ಬೆಂಬಲವನ್ನು ಒದಗಿಸುವ ಮೂಲಕ ತಾಳ್ಮೆ ವಹಿಸಬೇಕಾಗುತ್ತದೆ. ಬಳಿಕ ಅವರು ಚೇತರಿಸಿಕೊಳ್ಳುತ್ತಾರೆ. ಬೇರೆ ಜಾಗ ಸ್ವಲ್ಪ ಸಮಯ ಸಿಕ್ಕರೆ ನೋವು ಮಾಸುತ್ತದೆ. ಇದು ಸುಲಭವಲ್ಲವಾದರೂ ನಿಮ್ಮ ಮೇಲಿನ ಪ್ರೀತಿ ಅವರನ್ನು ಸರಿಪಡಿಸುತ್ತದೆ.

ನಂಬಿಕೆ ದ್ರೋಹದ ನಂತರ ಸಂಬಂಧಗಳಲ್ಲಿ ವಿಶ್ವಾಸವನ್ನು ಪುನರ್ನಿರ್ಮಿಸುವುದು ಸವಾಲಾಗಿದೆ. ಆದರೆ ದ್ರೋಹವನ್ನು ಒಪ್ಪಿಕೊಳ್ಳುವ ಮೂಲಕ, ನಿಜವಾದ ಪಶ್ಚಾತ್ತಾಪವನ್ನು ತೋರಿಸುವ ಮೂಲಕ, ಪಾರದರ್ಶಕವಾಗಿರಲು ಮತ್ತು ಸ್ಥಿರತೆಗೆ ಬದ್ಧರಾಗುವ ಮೂಲಕ ಸಂಬಂಧವನ್ನು ಸರಿಪಡಿಸಲು ಸಾಧ್ಯವಿದೆ. ಸಹಾನುಭೂತಿ ಮತ್ತು ಸಂಪರ್ಕದೊಂದಿಗೆ ಮುಂದುವರಿಯಲು ಸಂಬಂಧ ತಜ್ಞರ ಸಹಾಯವನ್ನು ಪಡೆಯಲು ಮರೆಯದಿರಿ.

Published On - 6:42 pm, Fri, 7 April 23