Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀರ್ಘಾವಧಿಯವರೆಗೆ ಅಡುಗೆ ಗ್ಯಾಸ್ ಬರಬೇಕಾ? ಇಲ್ಲಿದೆ ಸರಳ ಸಲಹೆಗಳು

ಮನೆಯಲ್ಲಿ ಗ್ಯಾಸ್ ಅನಿಲ ವೇಗವಾಗಿ ಖಾಲಿಯಾಗುತ್ತದೆ ಎನ್ನುವ ಚಿಂತೆಯಲ್ಲಿದ್ದೀರಾ. ದೀರ್ಘಾವಧಿಯವರೆಗೆ ಗ್ಯಾಸ್ ಸಿಲಿಂಡರ್‌ನ್ನು ಪರಿಣಾಮಕಾರಿಯಾಗಿ ಬಳಸಲು ನಿಮಗೆ ಸಹಾಯ ಮಾಡುವ ಸರಳ ಸಲಹೆಗಳು ಇಲ್ಲಿವೆ.

ದೀರ್ಘಾವಧಿಯವರೆಗೆ ಅಡುಗೆ ಗ್ಯಾಸ್ ಬರಬೇಕಾ? ಇಲ್ಲಿದೆ ಸರಳ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 12, 2023 | 7:02 PM

ಎಲ್‌ಪಿಜಿ ಗ್ಯಾಸ್ ನಾವು ಆಹಾರ ಬೇಯಿಸಲು ಬಳಸುವ ಅತ್ಯಂತ ಅಗತ್ಯ ವಸ್ತುವಾಗಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಬಳಸುವುದು ತುಂಬಾ ಮುಖ್ಯವಾಗಿರುತ್ತದೆ. ಅದರ ಅನಗತ್ಯ ಬಳಕೆಯನ್ನು ಮಾಡದೆ, ಈ ಅಮೂಲ್ಯ ಸಂಪನ್ಮೂಲವನ್ನು ಸಂರಕ್ಷಿಸುವುದು ತುಂಬಾ ಮುಖ್ಯವಾಗಿದೆ. ಈಗ ಕಟ್ಟಿಗೆಗಳನ್ನು ಬಳಸುವ ಬದಲು ಸಿಟಿಯಿಂದ ಹಳ್ಳಿಯವರೆಗೂ ಪ್ರತಿಯೊಂದು ಮನೆಯಲ್ಲೂ ಎಲ್‌ಪಿಜಿ ಗ್ಯಾಸ್‌ನ್ನು ಅಡುಗೆಗೆ ಬಳಸಲಾಗುತ್ತದೆ. ಆದರೆ ಒಂದೇ ಗ್ಯಾಸ್ ಸಿಲಿಂಡರ್‌ನ್ನು ದೀರ್ಘಕಾಲದವರೆಗೆ ಹೇಗೆ ಬಳಕೆ ಮಾಡಬಹುದು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎಲ್‌ಪಿಜಿ ಅನಿಲವನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ, ವಾತಾವರಣಕ್ಕೆ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ ಪರಿಣಾಮಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಅಲ್ಲದೆ ಇದು ಗ್ಯಾಸ್ ಅನಿಲದ ಉಳಿತಾಯವನ್ನು ಮಾಡುತ್ತದೆ. ನೀವು ಕೇವಲ ಒಂದು ಗ್ಯಾಸ್ ಸಿಲಿಂಡರ್‌ನ್ನು ದೀರ್ಘಾವಧಿಯವರೆಗೆ ಬಳಕೆ ಮಾಡಬಹುದು. ಅದಕ್ಕಾಗಿ ನೀವು ಅನುಸರಿಸಬೇಕಾದ ಕೆಲವು ಸರಳ ಸಲಹೆಗಳು ಇಲ್ಲಿವೆ.

ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಬೇಯಿಸಿ:

ನೀವು ನಿಮ್ಮ ಊಟವನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಬೆಯಿಸಿ ನಂತರ ರೆಫ್ರಜರೆಟರ್‌ನಲ್ಲಿ ಸಂಗ್ರಹಿಸಿಡಬಹುದು, ನಂತರದಲ್ಲಿ ಅವುಗಳ ಬಳಕೆಗಾಗಿ ಅವುಗಳನ್ನು ಮತ್ತೆ ಬಿಸಿ ಮಾಡಬಹುದು. ಆಗ ಗ್ಯಾಸ್ ಕೂಡಾ ಕಡಿಮೆ ಖರ್ಚಾಗುತ್ತದೆ.

ಪ್ರೆಶರ್ ಕುಕ್ಕರ್ ಬಳಸಿ: ಪ್ರೆಶರ್ ಕುಕ್ಕರ್ ಆಹಾರವು ವೇಗವಾಗಿ ಬೇಯಲು ಸಹಾಯ ಮಾಡುತ್ತದೆ. ಇದರಿಂದ ಗ್ಯಾಸ್ ಅನಿಲವೂ ಉಳಿತಾಯವಾಗುತ್ತದೆ.

ಸರಿಯಾದ ಬರ್ನರ್ ಬಳಸಿ: ನೀವು ಅಡುಗೆಗೆ ಬಳಸುವ ಪಾತ್ರೆಗಳ ಗಾತ್ರಕ್ಕೆ ಹೊಂದಿಕೆಯಾಗುವ ಬರ್ನರ್‌ನ್ನು ಬಳಸಿ. ದೊಡ್ಡ ಬರ್ನರ್‌ನಲ್ಲಿ ಸಣ್ಣ ಪಾತ್ರೆಯನ್ನಿಟ್ಟು ಅಡುಗೆ ಮಾಡಿದಾಗ ಅಲ್ಲಿ ಹೆಚ್ಚು ಅನಿಲ ವ್ಯಯವಾಗುತ್ತದೆ. ಆದ್ದರಿಂದ ಸರಿಯಾದ ಗಾತ್ರವನ್ನು ಆಯ್ಕೆ ಮಾಡಿ.

ಬರ್ನರ್‌ನ್ನು ಸ್ವಚ್ಛವಾಗಿಡಿ: ಸ್ವಚ್ಛವಾಗಿರುವ ಬರ್ನರ್‌ನ್ನು ಉಪಯೋಗಿಸುವುದರಿಂದ ಆಹಾರವು ವೇಗವಾಗಿ ಬೇಯುತ್ತದೆ. ಮತ್ತು ಇದರಿಂದ ಹೆಚ್ಚು ಹೊತ್ತ ಗ್ಯಾಸ್ ಅನಿಲವನ್ನು ವ್ಯಯ ಮಾಡುವ ಅಗತ್ಯ ಇರುವುದಿಲ್ಲ. ಜೊತೆಗೆ ಬರ್ನರ್‌ನ್ನು ಸುಸ್ಥಿತಿಯಲ್ಲಿಡಲು ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮುಖ್ಯವಾಗಿದೆ.

ಬೇಗ ಬರ್ನರ್ ಆಫ್ ಮಾಡಿ: ಅಡುಗೆ ಮಾಡುವಾಗ ನಿಮ್ಮ ಆಹಾರವು ಸಂಪೂರ್ಣವಾಗಿ ಬೇಯುವ ಕೆಲವು ನಿಮಿಷಗಳ ಮೊದಲು ಬರ್ನರ್‌ನ್ನು ಆಫ್ ಮಾಡಿ. ಆಗ ಬರ್ನರ್‌ನ ಉಳಿದ ಶಾಖವು ಆಹಾರವನ್ನು ಪೂರ್ಣ ಪ್ರಮಾಣದಲ್ಲಿ ಬೇಯಿಸುತ್ತದೆ. ಮತ್ತು ಇದರಿಂದ ಅನಿಲವೂ ಉಳಿತಾಯವಾಗುತ್ತದೆ.

ಇದನ್ನೂ ಓದಿ: LPG Subsidy: 2023-24ನೇ ಸಾಲಿಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ವಿಸ್ತರಣೆ

ಮುಚ್ಚಳವನ್ನು ಇರಿಸಿಕೊಳ್ಳಿ: ನೀವು ಅಡುಗೆ ಮಾಡುವಾಗ ಬಳಸುವ ಪಾತ್ರೆಯ ಮೇಲೆ ಮುಚ್ಚಳ ಮುಚ್ಚುವುದು ತುಂಬಾ ಮುಖ್ಯವಾಗಿರುತ್ತದೆ. ಇದು ಶಾಖ ಮತ್ತು ಉಗಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಮತ್ತು ಇದು ಕಡಿಮೆ ಅನಿಲವನ್ನು ಬಳಸಿಕೊಂಡು ಆಹಾರವನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬೇಯಿಸಲು ಸಹಾಯವಾಗುತ್ತದೆ.

ನೈಸರ್ಗಿಕ ಬೆಳಕನ್ನು ಬಳಸಿ: ನೀವು ಹಗಲಿನಲ್ಲಿ ಅಡುಗೆ ಮಾಡುತ್ತಿದ್ದರೆ, ಅಡುಗೆ ಮನೆಯಲ್ಲಿ ಲೈಟ್​ ಆನ್ ಮಾಡುವ ಬದಲು ನೈಸರ್ಗಿಕ ಬೆಳಕನ್ನು ಬಳಸಿ. ಇದು ನಿಮ್ಮ ಅನಿಲ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published On - 6:59 pm, Wed, 12 April 23

ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್