ಬೆಂಗಳೂರಿನಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟ: ಇಬ್ಬರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ
ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಿಹಾರ ಮೂಲದ ಗೌತಮ್, ಮಂಡಿಲ್, ಮಹಿಳೆ ಸೋನಿ ಎಂಬುವರಿಗೆ ಗಾಯವಾಗಿದೆ.
ಬೆಂಗಳೂರು: ಅಡುಗೆ ಗ್ಯಾಸ್ ಸಿಲಿಂಡರ್ (gas cylinder) ಲೀಕ್ ಆಗಿ ಸ್ಪೋಟಗೊಂಡು ಇಬ್ಬರಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವಂತಹ ಘಟನೆ ಕೆಎಸ್ ಲೇಔಟ್ ಠಾಣಾ ವ್ಯಾಪ್ತಿಯ ಯಲಚೇನಹಳ್ಳಿ ಬಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಿಹಾರ ಮೂಲದ ಗೌತಮ್, ಮಂಡಿಲ್, ಮಹಿಳೆ ಸೋನಿ ಎಂಬುವರಿಗೆ ಗಾಯವಾಗಿದೆ. ಇಬ್ಬರು ಸೆಕ್ಯೂರಿಟಿ ಕೆಲಸ ಮಾಡ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಎಸ್ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದರು.
ಸುಲಿಗೆ ಮಾಡುತ್ತಿದ್ದ ಇಬ್ಬರ ಬಂಧನ
ವಿಜಯನಗರ: ಬೈಕ್ ಅಡ್ಡಗಟ್ಟು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಗಳೂರು ತಾಲೂಕಿನ ಬಿಳಿಚೋಡು ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಮಂಜುನಾಥ್(32), ಮನೋಜ್(40) ಬಂಧಿತ ಆರೋಪಿಗಳು. ಬಂಧಿತ ಇಬ್ಬರು ಆರೋಪಿಗಳಿಂದ 50 ಗ್ರಾಂ ಚಿನ್ನಾಭರಣ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಕೂಡ್ಲಗಿ ತಾಲೂಕಿನ ರಮೇಶ್-ಸುಷ್ಮಾ ದಂಪತಿ ಬೈಕ್ನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಚಿನ್ನ ದೋಚಿದ್ದರು.
ಇದನ್ನೂ ಓದಿ: ಅನುಮಾನಸ್ಪದ ಸಾವು ಪ್ರಕರಣ: ಆಕೆ ಬೇರೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ಯುವಕನಿಂದ ಕೊಲೆ
ಈಜಲು ಹೋಗಿ ಹೊಂಡದಲ್ಲಿ ಮುಳುಗಿ ಯುವಕ ಸಾವು
ದಾವಣಗೆರೆ: ಈಜಲು ಹೋಗಿ ಹೊಂಡದಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವಂತಹ ಘಟನೆ ನಗರದ ರಾಜಾ ಮದಕರಿನಾಯಕ ವೃತ್ತದಲ್ಲಿ ನಡೆದಿದೆ. ಶಂಕರ (17) ಸಾವನ್ನಪ್ಪಿದ ಯುವಕ. ದಾವಣಗೆರೆ ಎಪಿಎಂಸಿಯಲ್ಲಿಹಮಾಲಿ ಆಗಿರುವ ಅಂಜಿನಪ್ಪ ಎಂಬುವರ ಪುತ್ರ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್, ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧನ
ಕಲಬುರಗಿ: ನಗರದಲ್ಲಿ ಮೊಬೈಲ್, ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾತ್ಮ ಬಸವೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಸತ್ಯವೇಲು, ಕಲಬುರಗಿಯ ಖಾಜಾ ಕಾಲೋನಿ ನಿವಾಸಿ ಮೊಹಮ್ಮದ್ ಅಸ್ಪಾಕ್ ಬಂಧಿತರು. ಆರೋಪಿಗಳಿಂದ 17 ಮೊಬೈಲ್ಗಳು, 8 ಬೈಕ್ಗಳು ಜಪ್ತಿ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:37 am, Sat, 3 September 22