ಬೆಂಗಳೂರಿನಲ್ಲಿ ಗಂಧದ ಚೋರರ ಮಾಫಿಯಾ: ತಮಿಳುನಾಡಿನ ಗ್ಯಾಂಗ್ಲೀಡರ್ ಅರೆಸ್ಟ್! 10 ಪ್ರಕರಣ ಪತ್ತೆ
Sandalwood smugglers: ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಕಳ್ಳತನ ಮಾಡುತಿದ್ದ ಸ್ಟೈಲ್ ಕೇಳಿದ ಪೊಲೀಸರೇ ಶಾಕ್ ಆಗಿ ಹೊಗಿದ್ದಾರೆ.. ಪಕ್ಕ ಪ್ರೊಫೆಷನಲ್ ಆಗಿ ಮರಗಳ್ಳತನವನ್ನು ಕಳೆದ ಕೆಲ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ..
ಶ್ರೀಗಂಧದ ಸುವಾಸನೆಗೆ ಮಾರು ಹೋಗದವರು ಯಾರಿಲ್ಲ ಹೇಳಿ.. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಲೂ ಸಹ ಶ್ರೀಗಂಧ ತೈಲಗೆ ಬಹುಬೇಡಿಕೆ ಇದ್ದೇ ಇದೆ.. ಓದುಗರೇ ನಿಮಗೆ ಆಶ್ಚರ್ಯವಾಗಬಹುದು.. ಬೆಂಗಳೂರು ನಗರದ ಹೃದಯ ಭಾಗದಲ್ಲಿ ಈಗಲೂ ಕೂಡ ಸಾಕಷ್ಟು ಶ್ರೀಗಂಧದ ಮರಗಳನ್ನು ನಾವು ಕಾಣಬಹುದು.. ದಶಕಗಳ ಪೂರೈಸಿರುವ ಈ ಶ್ರೀಗಂಧದ ಮರಗಳು ಬಹುತೇಕ ಸರ್ಕಾರಿ ಆವರಣಗಳಲ್ಲಿವೆ.
ವಿಧಾನಸೌಧ ಸುತ್ತಮುತ್ತ, ಮುಖ್ಯ ಕಾರ್ಯದರ್ಶಿಗಳ ಮನೆ ಆವರಣ, ಮುಖ್ಯ ನ್ಯಾಯಮೂರ್ತಿಗಳ ನಿವಾಸ, ಮುಖ್ಯಮಂತ್ರಿಗಳು ಸೇರಿದಂತೆ ಸಚಿವರ ಗೆಸ್ಟ್ ಹೌಸ್, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಗಾಲ್ಫ್ ಕೊರ್ಸ್ ಹೀಗೆ ಸಾಕಷ್ಟು ಕಡೆ ಶ್ರೀಗಂಧದ ಮರಗಳನ್ನು ನಾವು ಕಾಣಬಹುದು.. ಆಗಾಗ ತಮಿಳುನಾಡು, ಆಂಧ್ರ, ಕೇರಳ ಮೂಲದ ಶ್ರೀಗಂಧದ ಮರಗಳ್ಳರು ನಗರಕ್ಕೆ ಆಗಮಿಸಿ ರಾತ್ರೋರಾತ್ರಿ ಮರಗಳನ್ನು ಅಲ್ಲೊಬ್ಬ ಇಲ್ಲೊಬ್ಬ ಕಳವು ಮಾಡುವಂತದ್ದು, ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೊಗುವುದು ನೋಡುತ್ತಿದ್ದೆವು..
ಬಹುತೇಕ ಶ್ರೀಗಂಧದ ಮರಗಳ ಕಳ್ಳತನ ಮಳೆಗಾಲದಲ್ಲೇ ನಡೆಯುತಿತ್ತು.. ರಾತ್ರಿ ವೇಳೆ ಜನರ ಓಡಾಟ, ಪೊಲೀಸರ ಗಸ್ತು ಕಡಿಮೆ ಜೊತೆಗೆ ಮಳೆ ಬೀಳುತಿದ್ದಾಗ ಸಾಕಷ್ಟು ಮರಗಳು ಬಿದ್ದಾಗ ಯಾರ ಗಮನಕ್ಕೂ ಬರುತ್ತಿರಲಿಲ್ಲ.. ಈ ಎಲ್ಲಾ ಅಂಶಗಳನ್ನು ಬಳಸಿಕೊಂಡು ಪಕ್ಕಾ ಪ್ರೊಫೆಷನಲ್ ಮರಗಳ್ಳರ ಗ್ಯಾಂಗ್ ವೊಂದು ಶ್ರೀಗಂಧದ ಮರಗಳನ್ನು ಕಳವು ಮಾಡುತಿದ್ದು, ಪೊಲೀಸರಿಗೆ ಯಾವುದೇ ಸಾಕ್ಷ್ಯ ಬಿಡುತ್ತಿರಲಿಲ್ಲ.
ಇನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಗಾಲ್ಫ್ ಕ್ಲಬ್ ಹೀಗೆ ಸಾಕಷ್ಟು ಕಡೆಗಳಲ್ಲಿ ಶ್ರೀಗಂಧದ ಮರಗಳನ್ನ ಬುಡಸಮೇತ ದೊಚಿದ್ದರು.. ಬೆಂಗಳೂರು ನಗರದ ಹೈಗ್ರೌಂಡ್ಸ್ ಪೊಲೀಸರು ಕುಖ್ಯಾತ ಶ್ರೀಗಂಧ ಕಳವು ಮಾಡುವಂತಹ ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.. ಆಗಸ್ಟ್ 1ರಂದು ಗಾಲ್ಫ್ ಆವರಣದಲ್ಲಿ ಎರಡು ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿತ್ತು.. ಒಂದು ಮರವನ್ನು ಕಡಿದು ಸಾಗಿಸಲಾಗಿತ್ತು.. ಆದ್ರೆ ಮತ್ತೊಂದು ಮರವನ್ನು ಕಡಿದು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ ಪೆಕ್ಟರ್ ಶಿವಸ್ವಾಮಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು..
ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರ ತಂಡ ಯಾರು ಕೃತ್ಯ ಎಸಗಿರಬಹುದೆಂಬ ಲೆಕ್ಕಾಚಾರ ಹಾಕಿದ್ದರು.. ಈ ಹಿಂದೆ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿ ಜೈಲಿಗೆ ಹೊಗಿ ವಾಪಾಸ್ ಬಂದ ಆಸಾಮಿಗಳ ವಿಚಾರಣೆಗೊಳಪಡಿಸಿದ್ದಾರೆ.. ನಂತರ ಆ ವ್ಯಕ್ತಿಗಳನ್ನೇ ಕರೆತಂದು ಮರಗಳನ್ನು ಕಡಿದ ಸ್ಟೈಲ್ ಯಾರದ್ದು ಎನ್ನುವ ಬಗ್ಗೆ ಮಾಹಿತಿ ಕೇಳಿದಾಗ ಆಸಾಮಿಗಳು ತಾವು ಕಂಡಂತ ನಾಲ್ಕೈದು ಮರಗಳ್ಳರ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಶಿವಸ್ವಾಮಿ ತಮಿಳುನಾಡಿನ ಗೊವಿಂದ ಸ್ವಾಮಿ ಅಂಡ್ ಟೀಮ್ ಬೆಂಗಳೂರಿಗೆ ಆಗಸ್ಟ್ 1ರಂದು ಬಂದು ಹೊದ ಬಗ್ಗೆ ಮೊಬೈಲ್ ನ ಟೆಕ್ನಿಕಲ್ ಮಾಹಿತಿಯಿಂದ ಪಕ್ಕ ಮಾಡಿಕೊಳ್ಳುತ್ತಾರೆ. ನಂತರ ಗೊವಿಂದಸ್ವಾಮಿ ಸೇರಿದಂತೆ ಆ ಗ್ಯಾಂಗ್ ನ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಈ ಗ್ಯಾಂಗ್ ನ ಪ್ರಮುಖರಾದ ಗೊವಿಂದಸ್ವಾಮಿ, ಮಾದ, ವೆಂಕಟೇಶ, ರಾಮಚಂದ್ರ, ವಾಸೀಂ ಬೇಗ್, ವರದರಾಜು, ರಾಮಚಂದ್ರಪ್ಪ ಹಾಗೂ ನಂಜೇಗೌಡನನ್ನು ಬಂಧಿಸಿ ಸುಮಾರು 3 ಕೋಟಿ ಮೌಲ್ಯದ 147 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಹಾಗೂ 730 ಕೆ.ಜಿ. ಶ್ರೀಗಂಧದ ಮರದ ತುಂಡನ್ನು ವಶಕ್ಕೆ ಪಡೆದುಕೊಂಡಿದ್ದಾರೆ.. ಸದ್ಯ ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10 ಪ್ರಕರಣಗಳು ಪತ್ತೆಯಾಗಿವೆ..
ಈ ಆರೋಪಿಗಳು ನಗರದಲ್ಲಿ ಅಷ್ಟೇ ಅಲ್ಲದೇ, ಕಾಡಿನಲ್ಲೂ ತಮ್ಮ ಕೃತ್ಯಗಳನ್ನು ಎಸಗಿರೊದು ಪತ್ತೆಯಾಗಿದೆ.. ಬನ್ನೇರುಘಟ್ಟ ಅರಣ್ಯಕ್ಕೆ ತೆರಳುತಿದ್ದ ಈ ಗ್ಯಾಂಗ್ ಒಂದು ವಾರ ಉಳಿದು ಕೊಂಡು ಮರಗಳನ್ನು ಟಾರ್ಗೆಟ್ ಮಾಡಿ ಕಡಿಯುವ ಕೆಲಸ ಮಾಡುತಿದ್ದರು.. ತನಿಖೆ ವೇಳೆ ಕಾಡಿನಲ್ಲಿ ಈವರೆಗೂ ಸಾವಿರಾರು ಮರಗಳನ್ನು ಕಳವು ಮಾಡಿರೊ ಬಗ್ಗೆ ಮಾಹಿತಿ ಸಿಕ್ಕಿವೆ.. ಇನ್ನು ಇವರ ಕೈಚಳಕ ಎಷ್ಟರ ಮಟ್ಟಿಗಿತ್ತು ಅಂದ್ರೆ, ಒಂದು ಮರದ ಮೇಲೆ ಕಣ್ಣು ಬಿದ್ದರೆ ಆ ಮರವನ್ನು ಕ್ಷಣ ಮಾತ್ರದಲ್ಲಿ ವ್ಯವಸ್ಥಿತವಾಗಿ, ಯಾವುದೇ ಶಬ್ದವಾಗದ ರೀತಿ ಕಟ್ ಮಾಡೊದ್ರ ಜೊತೆಗೆ ಪ್ಯಾಕ್ ಮಾಡಿ ಇಡುತಿದ್ದರು..
ಇನ್ನು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಕಳ್ಳತನ ಮಾಡುತಿದ್ದ ಸ್ಟೈಲ್ ಕೇಳಿದ ಪೊಲೀಸರೇ ಶಾಕ್ ಆಗಿ ಹೊಗಿದ್ದಾರೆ.. ಪಕ್ಕ ಪ್ರೊಫೆಷನಲ್ ಆಗಿ ಮರಗಳ್ಳತನವನ್ನು ಕಳೆದ ಕೆಲ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ..
ವ್ಯವಸ್ಥಿತವಾಗಿ ತಂಡ ಶ್ರೀಗಂಧದ ಮರಗಳನ್ನು ನಾಲ್ಕು ವರ್ಷದಿಂದ ಕಳವು ಮಾಡುತಿದ್ದರು.. ಈ ಗ್ಯಾಂಗ್ ನಾಲ್ಕು ಹಂತದಲ್ಲಿ ಕೆಲಸ ಮಾಡುತಿತ್ತು..
ಟೀಮ್ 1: ರೆಕಿ.. ಮೊದಲಿಗೆ ಒಂದು ಟೀಮ್ ಹಗಲು ಸಮಯದಲ್ಲಿ ಎಲ್ಲೆಲ್ಲಿ ಶ್ರೀಗಂಧದ ಮರಗಳಿವೆ.. ಅದರ ಭದ್ರತೆ ಹೇಗೆ ಇದೆ.. ಶ್ರೀಗಂಧದ ಮರ ಕಟ್ ಮಾಡಿದ ಬಳಿಕ ಯಾವ ಮಾರ್ಗ ಬಳಸಿ ಎಸ್ಕೇಪ್ ಆಗಬಹುದು.. ನಂತರ ಮರದ ಮಾರಾಟದಿಂದ ತಮಗೆ ಬರುವ ಲಾಭವನ್ನು ಲೆಕ್ಕ ಹಾಕುತ್ತಾರೆ..
ಟೀಮ್ 2: ಮರ ಕಟರ್ಸ್.. ಟೀಮ್ ಓನ್ ಕೊಟ್ಟ ಮಾಹಿತಿ ಮೇಲೆ ಸಂಪೂರ್ಣ ಸಲಕರಣೆಗಳಾದ ಹಗ್ಗ, ಗುದ್ದಲಿ, ಮರ ಉರುಳಿಸುವ ಮಿಷಿನ್ ಗಳ ಸಮೇತ ನಿಗದಿತ ಸಂಜೆಯ ಸಮಯಕ್ಕೆ ತಮಿಳುನಾಡಿನಿಂದ ಬರುವ ಈ ತಂಡ ಸರ್ಕಾರಿ ಸಂಸ್ಥೆಗಳ ಆವರಗಳಲ್ಲಿರುವ, ಗುರುತಿಸಿದ ಮರಗಳ ಕೆಳಗೆ ಬಂದು ಮಲಗುತಿದ್ದರು.. ಬಳಿಕ ಸಮಯ ನೊಡಿ ಕಡಿಯುತ್ತಿದ್ದರು .. ನಂತರ ಅದನ್ನು ತುಂಡುಗಳನ್ನಾಗಿ ಮಾಡಿ ಚೀಲದಲ್ಲಿ ತುಂಬಿಕೊಂಡು ಎಸ್ಕೇಪ್ ಆಗುತಿದ್ದರು..
ಟೀಮ್ 3: ಟೀಮ್ 2 ತರುವ ಮರಗಳಿಗೆ ದರ ನಿಗದಿ ಮಾಡಿ.. ಅದರ ಗಾತ್ರ, ಅದರಿಂದ ತೆಗೆಯಲ್ಪಡುವ ಶ್ರೀಗಂಧ ತೈಲದ ಲೆಕ್ಕಾಚಾರದಲ್ಲಿ ಖರೀದಿ ಪ್ರಕ್ರಿಯೆ ಮಾಡುತಿದ್ದರು..
ಟೀಮ್ 4: ಖರೀದಿ ಮಾಡಿ ತಂದ ಮರದ ತುಂಡುಗಳನ್ನು ಚೆಕ್ಕೆಗಳನ್ನಾಗಿ ಪರಿವರ್ತಿಸಿ ಆಂಧ್ರ ಪ್ರದೇಶದ ರೋಲಾನಲ್ಲಿ ಸಾಮಿಲ್ ಎಂಬ ಗೋಡಾನಿನಲ್ಲಿಟ್ಟುಕೊಂಡು ಪ್ರೊಸಿಜರ್ ನಂತೆ ಎಣ್ಣೆ ತಯಾರು ಮಾಡುತಿದ್ದರು.. ನಂತರ ಶ್ರೀಗಂಧದ ಎಣ್ಣೆಯನ್ನು ಕೆಜಿಗೆ 3 ರಿಂದ 4 ಲಕ್ಷಕ್ಕೆ ನಿಗದಿ ಮಾಡಿ ಮಾರಾಟ ಮಾಡುತಿದ್ದರು.. ಕೊನೆಗೆ ಬಂದ ಹಣವನ್ನು ಅವರವರ ಕೆಲಸಕ್ಕೆ ತಕ್ಕಂತೆ ಹಂಚಿಕೊಳ್ಳುತಿದ್ದರು..
ಸದ್ಯಕ್ಕೆ ಆರೋಪಿಗಳ ಬಂಧನವಾಗಿದೆ ಅಂತ ಪೊಲೀಸರು ಈಗೇನೂ ಕೈಕಟ್ಟಿ ಕೂರುವಂತಿಲ್ಲ.. ಶ್ರೀಗಂಧದ ವಾಸನೆಯ ಗಮ್ಮತ್ತಿಗೆ ಮತ್ತೊಂದು ತಂಡ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದ್ದು, ಪೊಲೀಸರು ಈ ಬಗ್ಗೆ ನಿಗಾವಹಿಸುವ ಅವಶ್ಯಕತೆ ಇದೆ.. – ಕಿರಣ್ ಎಚ್ ವಿ