ಹುಷಾರಾಗಿರಿ! ಗೋಮೂತ್ರ ಮಾನವ ಸೇವನೆಗೆ ಅತ್ಯಂತ ಅಪಾಯಕಾರಿ

ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನವು ಗೋಮೂತ್ರದಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳಿದೆ ಎಂದು ಹೇಳಿದೆ. ಅಲ್ಲದೆ ಕನಿಷ್ಠ 14 ರೀತಿಯ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿಯಲಾಗಿದೆ ಎಂದು ತಿಳಿಸಿದೆ.

ಹುಷಾರಾಗಿರಿ! ಗೋಮೂತ್ರ ಮಾನವ ಸೇವನೆಗೆ ಅತ್ಯಂತ ಅಪಾಯಕಾರಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 12, 2023 | 2:28 PM

ಗೋಮೂತ್ರ ಶುದ್ಧತೆಯ ಪ್ರತೀಕವಾಗಿತ್ತು. ಹಿಂದೆ ಇದನ್ನು ಪ್ರತಿ ದೀನ ಬೆಳಿಗ್ಗೆ ಸೇವಿಸುತ್ತಿದ್ದರು. ಇದರಿಂದ ಎಷ್ಟೋ ಖಾಯಿಲೆ ಕಡಿಮೆಯಾಗುತ್ತದೆ ಎಂಬ ಮಾತಿತ್ತು. ಈಗಲೂ ಹಳ್ಳಿ ಕಡೆಯಲ್ಲಿ ಇದನ್ನು ಸೇವಿಸುವ ಜನರಿದ್ದಾರೆ. ಆದರೆ ಗೋಮೂತ್ರ ಉತ್ಸಾಹಿಗಳಿಗೆ ಈಗ ಶಾಕಿಂಗ್ ಸುದ್ದಿ ಕಾದಿದೆ. ಅದೆನೆಂದರೆ ಗೋಮೂತ್ರ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುವುದರಿಂದ ನೇರ ಮಾನವ ಸೇವನೆಗೆ ಸೂಕ್ತವಲ್ಲ, ಅಲ್ಲದೆ ಕನಿಷ್ಠ 14 ರೀತಿಯ ಅಪಾಯಕಾರಿ ಬ್ಯಾಕ್ಟೀರಿಯಾಗಳು ಕಂಡು ಬಂದಿದೆ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ. ರಿಸರ್ಚ್ಗೇಟ್ನಲ್ಲಿ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನದ ಪ್ರಕಾರ, ಎಸ್ ಎಪಿಡರ್ಮಿಡಿಸ್ ಮತ್ತು ಇ ರಾಪೊಂಟಿಸಿಗಾಗಿ 73 ಗೋವುಗಳ ಮೂತ್ರ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭೋಜ್ ರಾಜ್ ಸಿಂಗ್ ಮತ್ತು ಅವರ ಮೂವರು ಸಹೋದ್ಯೋಗಿಗಳು ಈ ಅಧ್ಯಯನದ ನೇತೃತ್ವ ವಹಿಸಿದ್ದು, “ಹಸು, ಎಮ್ಮೆ ಮತ್ತು ಮಾನವರ 73 ಮೂತ್ರ ಮಾದರಿಗಳ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ ಮಾಡಿದ್ದು, ಎಮ್ಮೆ ಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಿಗಿಂತ ಉತ್ತಮವಾಗಿದೆ ಎಂದು ತಿಳಿದುಬಂದಿದೆ. ಎಮ್ಮೆಯ ಮೂತ್ರವು ಎಸ್ ಎಪಿಡರ್ಮಿಡಿಸ್ ಮತ್ತು ಇ ರಾಪೊಂಟಿಸಿಯಂತಹ ಬ್ಯಾಕ್ಟೀರಿಯಾಗಳ ಮೇಲೆ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದೆ” ಎಂದು ತಿಳಿಸಿದ್ದಾರೆ.

ನಾವು ಮೂರು ರೀತಿಯ ಹಸುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಸಾಹಿವಾಲ್, ಥಾರ್ಪರ್ಕರ್ ಮತ್ತು ವಿಂದಾವಾನಿ (ಮಿಶ್ರ ತಳಿ) ಸ್ಥಳೀಯ ಡೈರಿ ಫಾರ್ಮ್​ಗಳಿಂದ ಎಮ್ಮೆಗಳು ಮತ್ತು ಮನುಷ್ಯರ ಮಾದರಿಗಳೊಂದಿಗೆ 2022 ರ ಜೂನ್ ಮತ್ತು ನವೆಂಬರ್ ನಡುವೆ ನಡೆಸಿದ ನಮ್ಮ ಅಧ್ಯಯನವು, ಆರೋಗ್ಯವಂತ ವ್ಯಕ್ತಿಗಳಿಂದ ಗಣನೀಯ ಪ್ರಮಾಣದಲ್ಲಿ ಮೂತ್ರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಇದರಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಇರುತ್ತವೆ ಎಂದು ಸಿಂಗ್ ತಿಳಿಸಿದ್ದಾರೆ.

ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ ಎಂಬ ಸಾಮಾನ್ಯ ನಂಬಿಕೆಯನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ ಎಂದು ಅವರು ಗೋಮೂತ್ರ ಸೇವನೆಯ ವಿರುದ್ಧ ಎಚ್ಚರಿಕೆ ನೀಡಿದರು. ಗೋಮೂತ್ರ ಒಂದು ಜನಪ್ರಿಯ ಆರೋಗ್ಯ ಮಿಥ್ಯೆ. ವಿಶ್ವಾದ್ಯಂತ ನಡೆಸಿದ ವಿವಿಧ ಅಧ್ಯಯನಗಳು ಇದು ವಿಷಕಾರಿ ಮತ್ತು ಮಾನವ ಸೇವನೆಗೆ ಸೂಕ್ತವಲ್ಲ ಎಂದು ಸಾಬೀತುಪಡಿಸಿದ್ದರೂ, ಗೋಮೂತ್ರವು ವಿವಿಧ ಸಂಸ್ಕೃತಿಗಳಲ್ಲಿ ಜನಪ್ರಿಯ ಪಾನೀಯವಾಗಿದೆ ಎಂದು ಹೇಳಿದ್ದು ಇದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ.

ಅಧ್ಯಯನದ ಪ್ರಕಾರ, ಕೆಲವು ಅಡ್ಡಪರಿಣಾಮಗಳು ಹೀಗಿವೆ:

-ಗೋಮೂತ್ರದ ಹಲವಾರು ಘಟಕಗಳು ವಿಷಕಾರಿ ಎಂದು ಹೇಳಲಾಗುತ್ತದೆ.

-ನಾಯಿಗಳಲ್ಲಿ ಮೂತ್ರವು, ಬ್ರಾಡಿಕಾರ್ಡಿಯಾ, ಟಾಕಿಕಾರ್ಡಿಯಾ ಮತ್ತು ರಕ್ತದೊತ್ತಡದ ಮೇಲೆ ಬೈಫಾಸಿಕ್ ಪರಿಣಾಮವನ್ನು ತೋರಿಸಿದೆ.

– ಪ್ರಾಯೋಗಿಕ ನಾಯಿಗಳಲ್ಲಿ ಸಿಯುಪಿಆರ್ ಅನ್ನು ಪುನರಾವರ್ತಿತವಾಗಿ ನೀಡಿದ ನಂತರ ಪ್ರಗತಿಶೀಲ ಹೈಪೋಟೆನ್ಷನ್ ಕೂಡ ಕಂಡುಬಂದಿದೆ.

ಸುರಕ್ಷತಾ ಸ್ಟಾಂಪ್ ಇಲ್ಲದೆ ಮಾರಾಟ

ಗೋಮೂತ್ರವನ್ನು ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಟ್ರೇಡ್ಮಾರ್ಕ್ನಲ್ಲಿ ಸರಬರಾಜು ಮಾಡಲಾಗುತ್ತದೆ. ಇದಕ್ಕೆ ಯಾವುದೇ ಸುರಕ್ಷತಾ ಸ್ಟಾಂಪ್ ಇಲ್ಲ. ಕೋವಿಡ್ -19 ಸಮಯದಲ್ಲಿ ದೇಶಾದ್ಯಂತ ಏಕಾಏಕಿ ಹಲವಾರು ಜನರು ಗೋಮೂತ್ರ ಮತ್ತು ಸಗಣಿ ಸಾರ್ಸ್-ಕೋವ್-2 ನಿಂದ ಉಂಟಾಗುವ ಸೋಂಕು ಸೇರಿದಂತೆ ಹಲವಾರು ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿದ್ದಾರೆ.

Published On - 1:31 pm, Wed, 12 April 23