AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snake Plants: ಮನೆಯಲ್ಲಿ ಈ 5 ಗಿಡಗಳಿದ್ದರೆ ಹಾವು ಅಪ್ಪಿತಪ್ಪಿಯೂ ಬರುವುದಿಲ್ಲ

ಇದ್ದಕ್ಕಿದ್ದಂತೆ ಮನೆ ಮುಂದೆ ಹಾವು ಕಾಣಿಸಿಕೊಂಡರೆ, ಯಾರಿಗಾದರೂ ಭಯವಾಗುವುದು ಸಹಜ. ಎಷ್ಟೇ ಪ್ರಾಣಿ ಪ್ರೀಯರಿಗೂ ಮನೆಗೆ ಹಾವು ಬರುವುದು ಇಷ್ಟವಿರುವುದಿಲ್ಲ. ಎಲ್ಲರೂ ಹಾವಿಗೆ ಹೆದರುತ್ತಾರೆ. ಈಗಂತೂ ಮಳೆಗಾಲ ಆರಂಭವಾಗಿದ್ದು ಹಾವುಗಳು ಅಲ್ಲಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಇವು ಮನೆಯೊಳಗೂ ಬರುತ್ತದೆ. ಆದರೆ ಈ ರೀತಿ ಮನೆಯ ಸುತ್ತಮುತ್ತ ಹಾವು ಬರುವುದನ್ನು ತಡೆಯಲು ಸರಳ ಪರಿಹಾರವಿದೆ. ಈ ರೀತಿ ಮಾಡಿದರೆ ನಿಮ್ಮ ಮನೆಯ ಹತ್ತಿರ ಅಪ್ಪಿತಪ್ಪಿಯೂ ಹಾವುಗಳು ಬರುವುದಿಲ್ಲ. ಏನಿಲ್ಲಾ ಕೇವಲ ಈ ಗಿಡ ನೆಡಿ ಸಾಕು ಹಾವು ಬರದಂತೆ ತಡೆಯಬಹುದು. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.

Snake Plants: ಮನೆಯಲ್ಲಿ ಈ 5 ಗಿಡಗಳಿದ್ದರೆ ಹಾವು ಅಪ್ಪಿತಪ್ಪಿಯೂ ಬರುವುದಿಲ್ಲ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
|

Updated on: Jun 15, 2025 | 4:30 PM

Share

ಮಳೆಗಾಲ (Rainy season) ಆರಂಭವಾಗಿದೆ. ಈ ಸಮಯದಲ್ಲಿ ಮನೆಯ ಸುತ್ತ ಮುತ್ತ ಕ್ರಿಮಿ – ಕೀಟಗಳು ಬರುವುದು ಸಾಮಾನ್ಯ. ಅದರ ಜೊತೆ ಜೊತೆಗೆ ಹಾವು (Snake), ಅವುಗಳ ಮರಿ ಬಂದೆ ಬರುತ್ತದೆ. ಯಾರಿಗೂ ಅವರ ಮನೆಗೆ ಹಾವು ಬರುವುದು ಇಷ್ಟವಿರುವುದಿಲ್ಲ. ಆದರೆ ಮರ, ಗಿಡ ಅಥವಾ ಆಹಾರ ಸಿಗುವ ಪ್ರದೇಶಗಳಲ್ಲಿ ಅವು ಬರುವುದು ಸರ್ವೇ ಸಾಮಾನ್ಯ. ಈ ಋತುವಿನಲ್ಲಿ, ಹಾವುಗಳು ಬರುವುದನ್ನು ತಡೆಯಲು ಮನೆಯ ಕುಂಡಗಳಲ್ಲಿ ಕೆಲವು ವಿಶೇಷ ಸಸ್ಯಗಳನ್ನು (Snake-Repellent Plants) ನೆಡಬಹುದು. ಈ ರೀತಿ ಮಾಡುವುದರಿಂದ ಅವುಗಳ ಪರಿಮಳಕ್ಕೆ ಹಾವುಗಳು ನಿಮ್ಮ ಮನೆಯ ಹತ್ತಿರಕ್ಕೂ ಬರುವುದಿಲ್ಲ. ಈ ರೀತಿ ಗಿಡ ನೆಡುವ ಮೂಲಕ ಹಾವು ಬರದಂತೆ ತಡೆಯಬಹುದು. ಹಾಗಾದರೆ ಮನೆಯ ಸುತ್ತ ಮುತ್ತ ಯಾವ ಗಿಡ ನೆಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಚೆಂಡು ಹೂ

ಸಾಮಾನ್ಯವಾಗಿ ಜನರು ತಮ್ಮ ಮನೆಗಳಲ್ಲಿ ಪರಿಮಳ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಚೆಂಡು ಹೂಗಳನ್ನು ನೆಡುತ್ತಾರೆ. ಆದರೆ ಚೆಂಡು ಹೂಗಳು ಹೆಚ್ಚಾಗಿರುವ ಕಡೆ ಹಾವುಗಳು ಬರುವುದಿಲ್ಲ. ಏಕೆಂದರೆ ಹಾವು ಇವುಗಳಿಂದ ಬರುವ ವಾಸನೆಯನ್ನು ಇಷ್ಟಪಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಬಹುದು.

ವರ್ಮ್‌ವುಡ್‌ ಸಸ್ಯ

ಈ ವರ್ಮ್‌ವುಡ್‌ ಸಸ್ಯಗಳನ್ನು ಕನ್ನಡದಲ್ಲಿ ಕಹಿ ಗಿಡ ಎಂದು ಕರೆಯಲಾಗುತ್ತದೆ. ಇವುಗಳನ್ನು ಅಂಗಳ ಅಥವಾ ನಿಮ್ಮ ಮನೆಯ ವನ, ತೋಟದ ಸುತ್ತಮುತ್ತ ಬೆಳೆಸಬಹುದು. ಏಕೆಂದರೆ ಹಾವುಗಳು ಎಲ್ಲಿಬೇಕಾದರೂ ಅವಿತುಕೊಳ್ಳಬಹುದು. ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತ ಹಿಂಡಿನ ಪ್ರದೇಶವಿದ್ದರೆ ಅಲ್ಲಿ ಈ ಗಿಡ ನೆಡಿ. ಆದರೆ ದೊಡ್ಡ ದೊಡ್ಡ ತೋಟಗಳಲ್ಲಿ ಅಥವಾ ಹಾವಿನ ಉಪಟಳ ಹೆಚ್ಚಾಗಿ ಇರುವಲ್ಲಿ ಈ ಗಿಡವನ್ನು ತಪ್ಪದೇ ಬೆಳೆಸಬೇಕು. ಈ ಸಸ್ಯದಿಂದ ಬರುವ ಪರಿಮಳಕ್ಕೆ ಹಾವುಗಳು ನಿಮ್ಮ ಪರಿಸರದ ಸುತ್ತ ಸುಳಿಯಲು ಭಯ ಪಡುತ್ತವೆ. ಎರಡರಿಂದ ಮೂರು ಅಡಿ ಎತ್ತರ ಬೆಳೆಯುವ ಈ ಸಸ್ಯಗಳು ಜೇನುನೊಣಗಳು ಕೂಡ ಮನೆಯ ಬಳಿ ಸುಳಿಯುವುದನ್ನೂ ತಪ್ಪಿಸುತ್ತವೆ. ಇದನ್ನು ಅಂಗಳ ಅಥವಾ ಮನೆಯ ಮುಖ್ಯ ದ್ವಾರದ ಬಳಿ ನೆಡಬಹುದು.

ಇದನ್ನೂ ಓದಿ
Image
ಬಿ12 ಅಂಶ ಕಡಿಮೆ ಆಗಿದ್ಯಾ? ಈ ಒಂದು ಹಣ್ಣನ್ನು ಸೇವನೆ ಮಾಡಿ
Image
ನಗುವಾಗ ಡಿಂಪಲ್ ಬೀಳೋದು ಅದೃಷ್ಟ ಅಲ್ಲ, ಇದಕ್ಕೆ ಈ ಆರೋಗ್ಯ ಸಮಸ್ಯೆಯೇ ಕಾರಣ
Image
ಪ್ರೀತಿಸಿ ಮದುವೆಯಾಗುವವರಿಗೆ ಬರುವ ಎಲ್ಲ ಅಡೆತಡೆ ನಿವಾರಿಸುತ್ತಾಳೆ ಪದ್ಮಾವತಿ
Image
ಜಡೆ ಹೆಣೆದುಕೊಳ್ಳುವುದು ನಿಮ್ಮ ಕೂದಲಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು!

ಸರ್ಪ ಬೇರು

ನೀವು ಎಂದಾದರೂ ಸರ್ಪ ಬೇರಿನ ಸಸ್ಯದ ಬಗ್ಗೆ ಕೇಳಿದ್ದೀರಾ? ಸಾಮಾನ್ಯವಾಗಿ ಈ ಸಸ್ಯವು ತುಂಬಾ ವಿಚಿತ್ರವಾದ ವಾಸನೆಯನ್ನು ಹೊಂದಿರುತ್ತದೆ. ಹಾವುಗಳು ಈ ವಾಸನೆಗೆ ತಕ್ಷಣ ಓಡಿಹೋಗುತ್ತವೆ. ನೈಸರ್ಗಿಕ ಗುಣಲಕ್ಷಣಗಳಿಂದ ತುಂಬಿರುವ ಈ ಸಸ್ಯವು ಹಳದಿ ಮತ್ತು ಕಂದು ಬಣ್ಣದ ಕಾಂಡಗಳನ್ನು ಹೊಂದಿದ್ದು. ಇದನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಹಾವುಗಲು ಬರುವುದನ್ನು ತಡೆಯಬಹುದು.

ಕಳ್ಳಿ ಸಸ್ಯ

ಮುಳ್ಳಿನ ಕಳ್ಳಿ ಸಸ್ಯಗಳನ್ನು ನೀವು ನೋಡಿರಬಹುದು. ಇವು ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಇದನ್ನು ಅಲಂಕಾರಿಕ ಸಸ್ಯವಾಗಿ ಬಳಸಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ಪರಿಮಳವಿಲ್ಲ. ಇದರ ಮುಳ್ಳಿನ ಸ್ವಭಾವದಿಂದಾಗಿ, ಹಾವುಗಳು ಇದರ ಸುತ್ತ ಚಲಿಸುವುದಿಲ್ಲ ಹಾಗಾಗಿ ಇವುಗಳನ್ನು ಕಾಂಪೋಂಡ್‌ ಬಳಿ ಬೆಳೆಸುವುದು ಬಹಳ ಸೂಕ್ತ.

ಇದನ್ನೂ ಓದಿ: ಈ ಗಿಡಗಳು ನಿಮ್ಮ ಮನೆಯ ಹತ್ತಿರ ಇದ್ದರೆ ಹಾವುಗಳು ಬರೋದು ಗ್ಯಾರಂಟಿ

ನಿಂಬೆಹುಲ್ಲು

ಸಾಮಾನ್ಯವಾಗಿ ಹಾವುಗಳು ನಿಂಬೆಹುಲ್ಲಿನ ಪರಿಮಳವವನ್ನು ಇಷ್ಟ ಪಡುವುದಿಲ್ಲ. ಹಾಗಾಗಿ ಇವುಗಳನ್ನು ನೆಟ್ಟ ಜಾಗದಲ್ಲಿ ಹಾವುಗಳು ಬರುವುದಿಲ್ಲ. ಇವುಗಳು ನೋಡುವುದಕ್ಕೂ ತುಂಬಾ ಚೆನ್ನಾಗಿ ಕಾಣುತ್ತದೆ. ಅಲ್ಲದೆ ಇವುಗಳನ್ನು ಸರಿಯಾಗಿ ಬಳಕೆ ಮಾಡುವುದರಿಂದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ