Father’s Day 2025: ಅಪ್ಪಂದಿರ ಈ ಶುಭ ದಿನದಂದು ನಿಮ್ಮ ತಂದೆಗೆ ಉಡುಗೊರೆಗಳನ್ನು ನೀಡಿ, ಈ ದಿನವನ್ನು ಸ್ಮರಣೀಯವಾಗಿಸಿ
ಇಂದು ವಿಶ್ವ ತಂದೆಯರ ದಿನ. ಮಕ್ಕಳ ಸುಖ ಸಂತೋಷಕ್ಕಾಗಿ, ಮಕ್ಕಳ ಭವಿಷ್ಯವನ್ನು ರೂಪಿಸಲು ತಂದೆ ಹಗಲಿರುಳು ದುಡಿಯುತ್ತಾರೆ. ಇಂತಹ ತಂದೆಯ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ಸಲುವಾಗಿ ಈ ವಿಶ್ವ ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಫಾದರ್ಸ್ ಡೇ ಯ ಈ ಶುಭ ದಿನದಂದು ನಿಮ್ಮ ತಂದೆಗೆ ಈ ಕೆಲವು ಉಡುಗೊರೆಗಳನ್ನು ನೀಡುವ ಮೂಲಕ ಅವರ ದಿನವನ್ನು ವಿಶೇಷವಾಗಿ ಆಚರಿಸಿ.

ತನ್ನ ಆಸೆ ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು, ತನ್ನ ಜವಬ್ದಾರಿಗಳನ್ನು ಪೂರೈಸುತ್ತಾ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಶ್ರಮಜೀವಿ, ತನ್ನ ಇಡೀ ಜೀವನವನ್ನೇ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ ಎಂದರೆ ಅದು ಅಪ್ಪ (Father). ಮಕ್ಕಳ ಸುಖ ಸಂತೋಷಕ್ಕಾಗಿ, ಭವಿಷ್ಯಕ್ಕಾಗಿ, ಕುಟುಂಬಕ್ಕಾಗಿ ಶ್ರಮಿಸುವ ತಂದೆಯಂದಿರಿಗೆ ಗೌರವ ಸಲ್ಲಿಸುವ ಸಲುವಾಗಿ ತಾಯಂದಿರ ದಿನವನ್ನು ಆಚರಿಸುವಂತೆ ಜೂನ್ ತಿಂಗಳಲ್ಲಿ ತಂದೆಯಂದಿರ ದಿನವನ್ನು ಸಹ ಆಚರಿಸಲಾಗುತ್ತದೆ. ಈ ಬಾರಿ ಜೂನ್ 15 ಅಂದರೆ ಇಂದು ವಿಶ್ವ ತಂದೆಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ಶುಭ ದಿನದಂದು ನಿಮ್ಮ ಪ್ರೀತಿಯ ಅಪ್ಪನಿಗೆ ಈ ಕೆಲವೊಂದು ಸ್ಪೆಷಲ್ ಉಡುಗೊರೆಗಳನ್ನು (Father’s Day Gift Idea) ನೀಡುವ ಮೂಲಕ ಫಾದರ್ಸ್ ಡೇಯನ್ನು ಬಹಳ ವಿಶೇಷವಾಗಿ ಆಚರಿಸಿ.
ತಂದೆಯರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಕೆಲವು ಉಡುಗೊರೆಗಳನ್ನು ನೀಡಿ:
ಹೆಲ್ತ್ ಗ್ಯಾಜೆಟ್: ತಂದೆಯ ಆರೋಗ್ಯವನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿದೆ. ಹೀಗಿರುವಾಗ ನೀವು ಈ ಶುಭ ದಿನದಂದು ನಿಮ್ಮ ತಂದೆಗೆ ಸ್ಮಾರ್ಟ್ ವಾಚ್, ಫಿಟ್ನೆಸ್ ಬ್ಯಾಂಡ್ ಅಥವಾ ರಕ್ತದೊತ್ತಡ ಮಾನಿಟರ್‌ನಂತಹ ಆರೋಗ್ಯ ಗ್ಯಾಜೆಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಅಲ್ಲದೆ ಆರೋಗ್ಯ ವಿಮೆಯನ್ನು ಸಹ ಮಾಡಿಸಬಹುದು.
ಪುಸ್ತಕ: ನಿಮ್ಮ ತಂದೆಗೆ ಓದುವ ಹವ್ಯಾಸವಿದ್ದರೆ, ಅವರಿಗೆ ಒಳ್ಳೆಯ ಪುಸ್ತಕವನ್ನು ಉಡುಗೊರೆಯಾಗಿ ನೀಡಿ. ಈ ನಿಮ್ಮ ಪುಟ್ಟ ಉಡುಗೊರೆ ಖಂಡಿತವಾಗಿಯೂ ಅವರ ದಿನವನ್ನು ತುಂಬಾನೇ ವಿಶೇಷವಾಗಿಸುತ್ತದೆ.
ಶೂಗಳು: ನೀವು ನಿಮ್ಮ ತಂದೆಗೆ ಶೂಗಳನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ತಂದೆಯ ಆಯ್ಕೆ ಮತ್ತು ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಶೂಗಳನ್ನು ಖರೀದಿಸಬಹುದು. ಶೂ ಕೊಡಿಸುವ ನೆಪದಲ್ಲಿ ನಿಮ್ಮ ತಂದೆಯನ್ನು ಹೊರಗೆ ಕರೆದುಕೊಂಡು ಹೋಗುವ ಮೂಲಕ ಅವರೊಂದಿಗೆ ಒಂದೊಳ್ಳೆ ಸಮಯ ಕಳೆಯಬಹುದು.
ಶೇವಿಂಗ್ ಸೆಟ್: ನೀವು ಶೇವಿಂಗ್ ಸೆಟ್‌ಗಳನ್ನು ಸಹ ಉಡುಗೊರೆಯಾಗಿ ನೀಡುವುದು. ಈ ಉಡುಗೊರೆಗಳು ಕೂಡಾ ಖಂಡಿತವಾಗಿಯೂ ನಿಮ್ಮ ತಂದೆಗೆ ಇಷ್ಟವಾಗುತ್ತದೆ. ಇದಲ್ಲದೆ ನಿಮ್ಮ ತಂದೆಗೆ ಸ್ವತಃ ಶೇವಿಂಗ್ ಮಾಡಿಕೊಳ್ಳುವ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೆ, ನೀವು ಅವರಿಗೆ ಟ್ರಿಮ್ಮರ್ ಉಡುಗೊರೆಯಾಗಿ ನೀಡಬಹುದು.
ಇದನ್ನೂ ಓದಿ: ಇಂದು ವಿಶ್ವ ತಂದೆಯರ ದಿನ; ಮಕ್ಕಳ ಪಾಲಿನ ರಿಯಲ್ ಹೀರೋಗಳ ದಿನದ ಇತಿಹಾಸವನ್ನು ತಿಳಿಯಿರಿ
ಸುಗಂಧ ದ್ರವ್ಯ: ನಿಮ್ಮ ತಂದೆಗೆ ಪರ್ಫ್ಯೂಮ್ ತುಂಬಾನೇ ಇಷ್ಟ ಎಂದಾದರೆ ಅವರಿಗೆ ಪರ್ಫ್ಯೂಮ್ ಉಡುಗೊರೆಯಾಗಿ ನೀಡುವ ಮೂಲಕ ತಂದೆಯರ ದಿನವನ್ನು ವಿಶೇಷವಾಗಿ ಆಚರಿಸಿ.
ಬಟ್ಟೆ: ತಂದೆಯರ ಈ ದಿನದಂದು ನಿಮ್ಮ ತಂದೆಯನ್ನು ಸ್ವತಃ ನೀವೇ ಶಾಪಿಂಗ್‌ಗೆ ಕರೆದುಕೊಂಡು ಹೋಗುವ ಮೂಲಕ ಅವರಿಗೆ ಬಟ್ಟೆ, ಅವರ ನೆಚ್ಚಿನ ವಸ್ತುಗಳನ್ನು ಕೊಡಿಸಿ. ಹೀಗೆ ಒಟ್ಟಿಗೆ ಹೋಗುವುದರಿಂದ ಶಾಪಿಂಗ್ ಮಾಡುವುದರ ಜೊತೆಗೆ ತಂದೆಯ ಜೊತೆ ಒಂದೊಳ್ಳೆ ಸಮಯವನ್ನೂ ಕಳೆದಂತಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Sun, 15 June 25








