AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Day 2025: ಇಂದು ವಿಶ್ವ ತಂದೆಯರ ದಿನ; ಮಕ್ಕಳ ಪಾಲಿನ ರಿಯಲ್‌ ಹೀರೋಗಳ ದಿನದ ಇತಿಹಾಸವನ್ನು ತಿಳಿಯಿರಿ

ತಾಯಿಯಂತೆ ಮಕ್ಕಳ ಜೀವನದಲ್ಲಿ ತಂದೆಯೂ ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಿ ಹಗಲಿರುಳು ದುಡಿಯುವ ಶ್ರಮಜೀವಿ ತಂದೆಯೇ ಮಕ್ಕಳ ಪಾಲಿನ ರಿಯಲ್‌ ಹೀರೋ. ಈ ರಿಯಲ್‌ ಹೀರೋಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಜೂನ್‌ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ತಿಳಿಯಿರಿ.

Father’s Day 2025: ಇಂದು ವಿಶ್ವ ತಂದೆಯರ ದಿನ; ಮಕ್ಕಳ ಪಾಲಿನ ರಿಯಲ್‌ ಹೀರೋಗಳ ದಿನದ ಇತಿಹಾಸವನ್ನು ತಿಳಿಯಿರಿ
ಅಪ್ಪಂದಿರ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 15, 2025 | 10:03 AM

Share

ನಿನ್ನಂಥ ಅಪ್ಪ ಇಲ್ಲಾ… ಒಂದೊಂದು ಮಾತು ಬೆಲ್ಲ… ಎಲ್ಲಾ ಮಕ್ಕಳ ಪಾಲಿನ ರಿಯಲ್‌ ಹೀರೋ ತಂದೆ (Father) ಎಂದ್ರೆ ತಪ್ಪಾಗಲಾರದು. ತನ್ನ ಆಸೆ ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು, ತನ್ನ ಜವಬ್ದಾರಿಗಳನ್ನು ಪೂರೈಸುತ್ತಾ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಶ್ರಮಜೀವಿ, ತನ್ನ ಇಡೀ ಜೀವನವನ್ನೇ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ  ಎಂದರೆ ಅದು ಅಪ್ಪ. ಆದ್ರೆ ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಅಪ್ಪಂದಿರ ಪ್ರೀತಿ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ ಎರಡನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ವಿಶ್ವ ಅಪ್ಪಂದಿರ ದಿನದ ಇತಿಹಾಸ:

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸುವಂತೆ  ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆ ಮೊದಲು ಅಮೆರಿಕದಲ್ಲಿ ಪ್ರಾರಂಭವಾಯಿತು. ತಂದೆಯ ದಿನವನ್ನು ಪ್ರಾರಂಭಿಸಿದ ಕೀರ್ತಿ ಅಮೆರಿಕದ ಸೋನೋರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆಗೆ ಸಲ್ಲುತ್ತದೆ. ಅವರ ತಂದೆ ಸೈನಿಕರಾಗಿದ್ದರು, ಡಾಡ್ ಮತ್ತು ಅವರ ಐವರು ಒಡಹುಟ್ಟಿದವರ ತಾಯಿ ಹೆರಿಗೆಯ ಸಮಯದಲ್ಲಿ ಮರಣ ಹೊಂದಿದಾಗ ಅವರನ್ನು ತಂದೆಯೇ ಬೆಳೆಸಿದರು. ಹಾಗಾಗಿ ಡಾಡ್‌ 1909 ರಲ್ಲಿ ತಾಯಂದಿರ ದಿನದ ಸಂದರ್ಭದಲ್ಲಿ ತಾಯಂದಿರ ದಿನವನ್ನು ಆಚರಿಸುವಂತೆಯೇ, ತಂದೆಯ ದಿನವನ್ನು ಸಹ ಅದೇ ರೀತಿಯಲ್ಲಿ ಏಕೆ ಆಚರಿಸಬಾರದು ಎಂಬ ಕಲ್ಪನೆ ಅವರಲ್ಲಿ ಮೂಡಿತು.  ನಂತರ ಸ್ಥಳೀಯ ಮುಖಂಡರು ಡಾಡ್ ಅವರ ಕಲ್ಪನೆಯನ್ನು ಬೆಂಬಲಿಸಿದರು. ಬಳಿಕ  ಮೊದಲ ಬಾರಿಗೆ  ತಂದೆಯಂದಿರ  ದಿನವನ್ನು ಜೂನ್ 19, 1910 ರಂದು ಆಚರಿಸಲಾಯಿತು. ನಂತರ 1924 ರಲ್ಲಿ, ಯುಎಸ್ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಕೂಡ ಇದಕ್ಕೆ ತಮ್ಮ ಬೆಂಬಲವನ್ನು ನೀಡಿದರು. 1966 ರಲ್ಲಿ, ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಈ ದಿನವನ್ನು ಗುರುತಿಸುವ ಘೋಷಣೆಯನ್ನು ಮಾಡಿದರು. 1972 ರಲ್ಲಿ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಜೂನ್ ಎರಡನೇ ಭಾನುವಾರವನ್ನು ತಂದೆಯ ದಿನವೆಂದು ಗೊತ್ತುಪಡಿಸುವ ಕಾನೂನಿಗೆ ಸಹಿ ಹಾಕಿದರು. ಅಂದಿನಿಂದ ಪ್ರತಿವರ್ಷ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಪೋಷಕರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು; ಜಾಗತಿಕ ಪೋಷಕರ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಇದನ್ನೂ ಓದಿ
Image
ವಿಶ್ವ ವಾಯು ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ಪ್ರಕೃತಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ
Image
ಪರಿಸರ, ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಸೈಕಲ್‌ ಸವಾರಿ
Image
ಪೋಷಕರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು

ತಂದೆಯ ದಿನದ ಮಹತ್ವವೇನು?

ತಂದೆ ಮಕ್ಕಳ ಬೆನ್ನೆಲುಬು, ಮೊದಲ ಸ್ನೇಹಿತ ಕೂಡಾ ಹೌದು. ಮಕ್ಕಳಿಗೆ ಪ್ರತಿಯೊಂದು ವಿಷಯದಲ್ಲೂ ಬೆಂಬಲ ನೀಡುವವರು ಅದು ತಂದೆ. ತಾನು ನೋವುಂಡರು ಮಕ್ಕಳು ಮಾತ್ರ ಖುಷಿಯಾಗಿರಬೇಕೆಂದು ಬಯಸುವ ಜೀವವೆಂದರೆ ಅದು ಅಪ್ಪ. ಇಂತಹ ಹೀರೋಗಳಿಗೆ ಗೌರ ಸಲ್ಲಿಸಲೆಂದೇ ವಿಶ್ವ ತಂದೆಯಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ತಂದೆಯಂದಿರ ತ್ಯಾಗ ಮತ್ತು ಪ್ರೀತಿಯನ್ನು ಎತ್ತಿ ಹಿಡಯುವ ದಿನವಾಗಿದೆ.

ಮುದ್ದಿನ ಅಪ್ಪನಿಗೆ ಉಡುಗೊರೆಗಳನ್ನು ನೀಡುವ ಮೂಲಕ ಅವರಿಷ್ಟದ ತಿನಿಸುಗಳನ್ನು ಮಾಡಿ ಬಡಿಸುವ ಮೂಲಕ ನೀವು ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ