AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Father’s Day 2025: ಇಂದು ವಿಶ್ವ ಅಪ್ಪಂದಿರ ದಿನ; ನಿಮ್ಮ ತಂದೆಗೆ ಈ ರೀತಿ ಶುಭಾಶಯ ತಿಳಿಸಿ

ಜೂನ್ 15ರಂದು ವಿಶ್ವ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಈ ದಿನ ಅಪ್ಪನ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ದಿನ. ಅಪ್ಪನ ಬೆಂಬಲ ಮತ್ತು ಮಾರ್ಗದರ್ಶನ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಅಪ್ಪಂದಿರ ದಿನಕ್ಕೆ ಶುಭಾಶಯಗಳನ್ನು ತಿಳಿಸುವ ವಿಧಾನಗಳನ್ನು ಮತ್ತು ಅವರ ಪ್ರಾಮುಖ್ಯತೆಯನ್ನು ಇಲ್ಲಿ ತಿಳಿದುಕೊಳ್ಳಿ.

World Father's Day 2025: ಇಂದು ವಿಶ್ವ ಅಪ್ಪಂದಿರ ದಿನ; ನಿಮ್ಮ ತಂದೆಗೆ ಈ ರೀತಿ ಶುಭಾಶಯ ತಿಳಿಸಿ
World Father's Day
ಅಕ್ಷತಾ ವರ್ಕಾಡಿ
|

Updated on: Jun 15, 2025 | 10:10 AM

Share

ಜೂನ್ 15 ರಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ತನ್ನ ಕಷ್ಟಗಳನ್ನು ಮುಚ್ಚಿಟ್ಟು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುವ ಅಪ್ಪನನ್ನು ಸಂಭ್ರಮಿಸುವ ದಿನ ಈ ಸುದಿನ. ನಮಗೆ ಎಷ್ಟೇ ವಯಸ್ಸಾದರೂ, ಕಷ್ಟಗಳು ಎದುರಾದಾಗ, ತಂದೆಯೇ ಅತ್ಯಂತ ಬಲಿಷ್ಠ ಬಂಡೆಯಾಗಿ ಕಾಣುತ್ತಾರೆ. ನೊಂದಾಗ ಭುಜದ ಮೇಲಿನ ಅವರ ಕೈ ಸಾಕು. ಆದ್ದರಿಂದ ಈ ಶುಭ ದಿನದಂದು ನಿಮ್ಮ ತಂದೆಗೆ ಈ ಸಂದೇಹಗಳ ಮೂಲಕ ಶುಭಾಶಯಗಳನ್ನು ತಿಳಿಸಿ.

  1. ನಿನ್ನ ಉಪಸ್ಥಿತಿಯೇ ನನಗೆ ಜಗತ್ತಿನ ಸಂಪತ್ತು, ನನ್ನ ಭುಜದ ಮೇಲಿನ ನಿನ್ನ ಕೈಯೇ ನನ್ನ ದೊಡ್ಡ ಧೈರ್ಯ, ಅಪ್ಪಂದಿರ ದಿನದ ಶುಭಾಶಯಗಳು ಅಪ್ಪಾ.
  2. ಅಪ್ಪ ಎಂದರೆ ಭರವಸೆ, ಅಪ್ಪ ಎಂದರೆ ಗುರಿಯತ್ತ ಸಾಗುವ ಮಾರ್ಗದರ್ಶಕ, ಅಪ್ಪ ಎಂದರೆ ನನ್ನ ರಕ್ತನಾಳಗಳಲ್ಲಿ ಹರಿಯುವ ಆತ್ಮವಿಶ್ವಾಸ, ಅಪ್ಪಂದಿರ ದಿನದ ಶುಭಾಶಯಗಳು ಅಪ್ಪಾ.
  3. ಅಪ್ಪಾ, ನಾನು ಈ ಸ್ಥಾನದಲ್ಲಿದ್ದೇನೆಂದರೆ ನೀವೇ ಮುಖ್ಯ ಕಾರಣ. ಪ್ರತಿಯೊಂದು ಕಷ್ಟವನ್ನು ಎದುರಿಸಿ ಮುಂದುವರಿಯುವುದನ್ನು ನಾನು ನಿಮ್ಮಿಂದ ಕಲಿತಿದ್ದೇನೆ, ನೀವು ನನ್ನ ಜೀವನದ ಅತಿದೊಡ್ಡ ಸ್ಫೂರ್ತಿ… ತಂದೆಯರ ದಿನದ ಶುಭಾಶಯಗಳು.
  4. ನಿಮ್ಮ ಬೈಗುಳ ಮತ್ತು ಆಶೀರ್ವಾದದಲ್ಲಿ ಅಡಗಿರುವ ಪ್ರೀತಿಯೇ ನನ್ನ ಯಶಸ್ಸಿಗೆ ಕಾರಣ. ನೀವು ನನಗೆ ಸೂಪರ್ ಹೀರೋ… ಪ್ರೀತಿಯ ಅಪ್ಪಾ, ತಂದೆಯ ದಿನದ ಶುಭಾಶಯಗಳು.
  5. ನಿಮ್ಮಿಂದ ನಾನು ಕಲಿತ ಪ್ರತಿಯೊಂದು ಪಾಠವೂ ನನ್ನ ಯಶಸ್ಸಿಗೆ ಕಾರಣವಾಯಿತು, ನೀವು ನನಗೆ ಬದುಕಲು ಸರಿಯಾದ ಮಾರ್ಗವನ್ನು ಕಲಿಸಿದ್ದೀರಿ, ನೀವು ನನ್ನ ನಿಜವಾದ ನಾಯಕ… ಅಪ್ಪಂದಿರ ದಿನದ ಶುಭಾಶಯಗಳು ಅಪ್ಪಾ.
  6. ಅಪ್ಪ ಎಂದರೆ ನಿಮ್ಮೊಂದಿಗೆ ಗಟ್ಟಿಯಾದ ಬಂಡೆಯಂತೆ ಇರುವ ನಂಬಿಕೆ, ಮೌನವಾಗಿರುವಾಗಲೂ ಅವರು ನಿಮ್ಮೊಂದಿಗೆ ಇರುತ್ತಾರೆ, ಯಾವಾಗಲೂ ನಿಮ್ಮ ಮುಖದಲ್ಲಿ ಶಾಂತಿಯನ್ನು ತರುತ್ತಾರೆ… ನನ್ನ ತಂದೆ, ತಂದೆಯರ ದಿನದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ