ಪ್ರತಿದಿನ ವಾಕಿಂಗ್, ಜಾಗಿಂಗ್ ಬದಲು ಕೇವಲ 15 ನಿಮಿಷ ಸ್ಕಿಪ್ಪಿಂಗ್ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ
ವ್ಯಾಯಾಮ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ವಾಕಿಂಗ್, ಜಾಗಿಂಗ್, ಜಿಮ್, ಈಜು ಮುಂತಾದ ವ್ಯಾಯಾಮಗಳ ಜೊತೆಗೆ, ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಆಹಾರ ಪದ್ಧತಿ ಕೂಡ ಬಹಳ ಮುಖ್ಯವಾಗುತ್ತದೆ. ಊಟ, ನಿದ್ದೆ, ವ್ಯಾಯಾಮ ಹೀಗೆ ಒಂದಷ್ಟು ದೇಹದ ದಂಡನೆ ದಿನನಿತ್ಯದ ಜೀವನಕ್ಕೆ ಅಗತ್ಯವಾಗಿರುತ್ತದೆ. ಆದರೆ ಗಂಟೆಗಳ ಕಾಲ ವ್ಯಾಯಾಮ ಮಾಡುವ ಮೊದಲು ಕೇವಲ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ಈ ಲೇಖನದ ಮೂಲಕ ತಿಳಿದುಕೊಳ್ಳಿ.

ನಾವು ಆರೋಗ್ಯವಾಗಿರಲು ಪ್ರತಿನಿತ್ಯ ವ್ಯಾಯಾಮ (Exercise) ಮಾಡುವುದು ಬಹಳ ಮುಖ್ಯ. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿ ಕೂಡ ಅನಾರೋಗ್ಯದಿಂದ ದೂರವಿರಲು ಮತ್ತು ಒಟ್ಟಾರೆ ಆರೋಗ್ಯ (Health) ಮತ್ತು ದೈಹಿಕ ಸದೃಢತೆಗಾಗಿ ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ವಾಕಿಂಗ್, ಜಾಗಿಂಗ್, ಜಿಮ್ ಮತ್ತು ಈಜು ಮುಂತಾದ ವ್ಯಾಯಾಮಗಳ ಜೊತೆಗೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಸರಿಯಾದ ಊಟ, ನಿದ್ದೆ, ವ್ಯಾಯಾಮ ಪ್ರತೀ ಆರೋಗ್ಯಯುತ ವ್ಯಕ್ತಿಯ ಗುಟ್ಟು ಎಂದೇ ಹೇಳಬಹುದು. ಹೀಗಾಗಿ ಒಂದಷ್ಟು ದೇಹದ ದಂಡನೆ ದಿನನಿತ್ಯದ ಜೀವನಕ್ಕೆ ಅಗತ್ಯವಾಗಿರುತ್ತದೆ. ಆದರೆ ತಾಸುಗಟ್ಟಲೆ ವ್ಯಾಯಾಮ ಮಾಡುವುದಕ್ಕಿಂತ ದಿನಕ್ಕೆ ಕೇವಲ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ (Skipping) ಮಾಡುವುದರಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಸ್ಕಿಪ್ಪಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಸ್ಕಿಪ್ಪಿಂಗ್ ಮಾಡುವುದರಿಂದ ಸಿಗುವ ಪ್ರಯೋಜನಗಳೇನು?
- ಪ್ರತಿದಿನ 15 ನಿಮಿಷ ಸ್ಕಿಪ್ಪಿಂಗ್ ಅಥವಾ ಜಿಗಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯ ಸಂಬಂಧಿತ ಸಮಸ್ಯೆಗಳು ಬರದಂತೆ ತಡೆಯುತ್ತದೆ.
- ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ಮೆದುಳಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಎಚ್ಚರಿಕೆಯಿಂದ ಜಿಗಿಯಲು ಮೆದುಳು ನಮಗೆ ಸಂಕೇತಗಳನ್ನು ಕಳುಹಿಸುತ್ತದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಗಟ್ಟಿಯಾಗುತ್ತವೆ. ಇದು ಆಸ್ಟಿಯೊಪೊರೋಸಿಸ್‌ನಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಸ್ಕಿಪ್ಪಿಂಗ್ ಮಾಡುವುದರಿಂದ ಕಾಲು, ತೋಳುಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ, ಇದರಿಂದ ದೇಹವು ಫಿಟ್ ಆಗಿ ಕಾಣುವುದಲ್ಲದೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅಲ್ಲದೆ ತೂಕ ಇಳಿಸಿಕೊಳ್ಳಲು ಕೂಡ ಇದು ಸಹಾಯ ಮಾಡುತ್ತದೆ.
- ಪ್ರತಿದಿನ ಸ್ವಲ್ಪ ಹೊತ್ತು ಸ್ಕಿಪ್ಪಿಂಗ್ ಅಭ್ಯಾಸ ಮಾಡುವುದರಿಂದ ದೇಹದ ಸಮತೋಲನ ಸುಧಾರಿಸುತ್ತದೆ. ನಡೆಯುವಾಗ ದೇಹವು ಸ್ಥಿರವಾಗಿದ್ದು ತೂಗಾಡುವಂತಹ ಯಾವುದೇ ಸಮಸ್ಯೆಗಳಿರುವುದಿಲ್ಲ.
- ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ನಿಮ್ಮ ತ್ರಾಣ ಕೂಡ ದ್ವಿಗುಣಗೊಳ್ಳುತ್ತದೆ. ಹೀಗಾಗಿ, ದೈಹಿಕ ಕೆಲಸಗಳನ್ನು ಮಾಡುವ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ, ಫಿಟ್‌ನೆಸ್ ಹೆಚ್ಚುತ್ತದೆ.
- ಸ್ಕಿಪ್ಪಿಂಗ್ ಮಾಡುವುದರಿಂದ ಎಂಡಾರ್ಫಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ಉತ್ತಮ ಮನಸ್ಥಿತಿ ದೊರೆಯುತ್ತದೆ.
- ಹಗ್ಗ ಜಿಗಿಯುವಾಗ ಮೆದುಳು ಕೆಲಸ ಮಾಡುವ ಮಾಡುವ ಮೂಲಕ, ನಮ್ಮ ಏಕಾಗ್ರತೆ ಹೆಚ್ಚುತ್ತದೆ. ಜೊತೆಗೆ ಆ ಸಮಯದಲ್ಲಿ ನಾವು ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೊಡುವುದರಿಂದ ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.
ಸ್ಕಿಪ್ಪಿಂಗ್ ನಲ್ಲಿ ಹಲವಾರು ವಿಧಗಳಿದ್ದು, ಇದನ್ನು ಆರಂಭ ಮಾಡುವಾಗ ನಿಧಾನವಾಗಿ ಹಗ್ಗದಿಂದ ಹಾರುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಎತ್ತರಕ್ಕೆ ಸರಿಯಾಗಿ ಹೊಂದುವ, ಕೈಗೆ ಬಿಗಿ ಹಿಡತವಿರುವ ಹಗ್ಗವನ್ನು ಆಯ್ಕೆ ಮಾಡಿಕೊಳ್ಳಿ. ಇದು ನಿಮಗೆ ಬೇಗನೆ ಸ್ಕಿಪ್ಪಿಂಗ್ ಕಲಿಯಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ