Monsoon Vegetable Gardening: ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳ ಯಾವುವು?

ನೀವು ಮನೆಯಲ್ಲಿ ತರಕಾರಿ ಗಿಡಗಳನ್ನು ಬೆಳೆಯಲು ಯೋಚಿಸಿದ್ದರೆ, ಈ ಮಳೆಗಾಲದಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುವ ಹಲವು ತರಕಾರಿಗಳನ್ನು ಬೆಳೆಯಬಹುದು. ಇವುಗಳಿಗೆ ಹೆಚ್ಚು ಸ್ಥಳಾವಕಾಶದ ಅವಶ್ಯಕತೆಯಿಲ್ಲ. ಮನೆಯ ಹಿತ್ತಲು ಹಾಗೂ ಟೆರೆಸ್ ಮೇಲೆ ಇವುಗಳನ್ನು ಬೆಳೆಯಬಹುದು. ಮಳೆಗಾಲದಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳು ಯಾವುದು ಎಂಬುದು ಇಲ್ಲಿದೆ.

Monsoon Vegetable Gardening: ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳ ಯಾವುವು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 30, 2023 | 7:26 AM

ಮಳೆಗಾಲ ಬಂತೆಂದರೆ ಸಾಕು ನಮ್ಮ ಸುತ್ತ ಮುತ್ತಲಿನ ಪ್ರಕೃತಿಯು ಹಚ್ಚಹಸಿರಿನಿಂದ ಕೂಡಿರುತ್ತವೆ. ಬೇಸಿಗೆಯಲ್ಲಿ ಬಿಸಿಯ ತಾಪಕ್ಕೆ ಬೇಸತ್ತು ಹೋದ ಮರ ಗಿಡಗಳು ಮಳೆಗಾಲದಲ್ಲಿ ಮರುಜೀವವವನ್ನು ಪಡಯುತ್ತವೆ. ಮಾತ್ರವಲ್ಲದೆ ಈ ಸಮಯ ಬೀಜ ಬಿತ್ತನೆಗೆ ಹಾಗೂ ಸಸಿಗಳನ್ನು ನೆಡಲು ಸೂಕ್ತವಾದ ಸಮಯವಾಗಿದೆ. ಇನ್ನೂ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದವರು ಮನೆಯಲ್ಲಿ ವಿವಿಧ ಬಗೆಯ ಹೂವು, ಹಣ್ಣು ಹಾಗೂ ತರಕಾರಿಯ ಗಿಡಗಳನ್ನು ಈ ಸಯದಲ್ಲಿ ನೆಡುತ್ತಾರೆ. ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಮೇಲೆ ಅತಿಯಾದ ಕೀಟನಾಶಕಗಳ ಬಳಕೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಹಾಗಾಗಿ ನೀವು ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಯಬಹುದು. ಈ ಮಳೆಗಾಲವು ತರಕಾರಿಗಳನ್ನು ಬೆಳೆಯಲು ಉತ್ತಮ ಸಮಯವಾಗಿದೆ. ಈ ಕೆಲವೊಂದು ತರಕಾರಿಗಳನ್ನು ಬೆಳೆಯಲು ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ. ಮನೆಯ ತಾರಸಿ ಹಾಗೂ ಹಿತ್ತಲಿಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಹಾಗೂ ಸವಯವ ವಿಧಾನದಲ್ಲಿ ತರಕಾರಿ ನಾಟಿಯನ್ನು ಮಾಡುವ ಮೂಲಕ ರಾಸಾಯನಿಕ ಮುಕ್ತವಾದ ತರಕಾರಿಗಳನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದು.

ಮಳೆಗಾಲದಲ್ಲಿ ಮನೆಯ ಹಿತ್ತಲಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿಗಳು:

ಟೊಮೆಟೊ:

ಮಳೆಗಾಲದ ಸಂದರ್ಭದಲ್ಲಿ ಚೆರ್ರಿ ಟೊಮೆಟೊವನ್ನು ಬೆಳೆಯಬಹುದು. ಟೊಮೆಟೊ ಸಸ್ಯಗಳು 6 ರಿಂದ 7 ಗಂಟೆಗಳ ಸೂರ್ಯನ ಬೆಳಕು ಮತ್ತು ತೇವಾಂಶವುಳ್ಳ ಮಣ್ಣಿನಲ್ಲಿ ಬೆಳೆಯುವುದರಿಂದ ಅವುಗಳು ವೇಗವಾಗಿ ಬೆಳೆಯುತ್ತವೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಟೊಮೆಟೊ ಗಿಡಗಳು ಬಿತ್ತನೆ ಮಾಡಿದ 60 ದಿನಗಳ ನಂತರ ಫಲ ನೀಡಲು ಪ್ರಾರಂಭಿಸುತ್ತದೆ. ನೀವು ಈ ಬೆಳೆಯನ್ನು ಸುಲಭವಾಗಿ ಮನೆಯ ಟೆರೆಸ್ ಮೇಲೆ ಬೆಳೆಯಬಹುದು.

ಹಸಿರುಎಲೆ ತರಕಾರಿಗಳು:

ಪಾಲಕ್, ಮೆಂತ್ಯಯಂತಹ ಸೊಪ್ಪು ತರಕಾರಿಗಳನ್ನು ಬೆಳೆಯಲು ಮಳೆಗಾಲವು ಸೂಕ್ತವಾದ ಸಮಯವಾಗಿದೆ. ಇವುಗಳು ಬೇಗನೆ ಬೆಳೆಯುತ್ತವೆ ಮತ್ತು ಒಂದೇ ಋತುವಿನಲ್ಲಿ ಹಲವು ಬಾರಿ ಕೊಯ್ಲು ಮಾಡಬಹುದು. ಮಳೆಗಾಲದಲ್ಲಿ ಮನೆಯ ಹಿತ್ತಲಿನಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಯುವ ಮೂಲಕ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ತರಕಾರಿಗಳನ್ನು ನೀವು ಸೇವನೆ ಮಾಡಬಹುದು.

ಬೆಂಡೆಕಾಯಿ:

ಇದು ಮಳೆಗಾಲದಲ್ಲಿ ಬೆಳೆಯಲು ಯೋಗ್ಯವಾದ ತರಕಾರಿಯಾಗಿದೆ. ತ್ವರಿತವಾಗಿ ಬೆಳವಣಿಗೆ ಹೊಂದುವ ಈ ಸಸ್ಯಗಳು ಹಲವಾರು ದೊಡ್ಡ ಹೂವುಗಳನ್ನು ಏಕಕಾಲಕ್ಕೆ ಉತ್ಪಾದಿಸುತ್ತವೆ. ಅವಗಳು ನೋಡಲು ಸುಂದರವಾಗಿರುತ್ತವೆ. ಹಾಗೂ ಒಂದು ಗಿಡದಲ್ಲಿ ಅನೇಕ ಫಲವನ್ನು ನೀಡುತ್ತವೆ. ಇವುಗಳನ್ನು ನೇರವಾಗಿ ಮಣ್ಣಿನಲ್ಲಿ ಬೆಳೆಯಬಹುದು ಅಥವಾ ಕುಂಡಗಳಲ್ಲಿ ಅಥವಾ ಬಕೆಟ್ ಗಳಲ್ಲಿ ಮನೆಯ ಟೆರೆಸ್ ಮೇಲೆಯೂ ಬೆಳೆಯಬಹುದು.

ಇದನ್ನೂ ಓದಿ:Monsoon 2023: ಮಳೆಗಾಲದಲ್ಲಿ ಕೂದಲು ಉದುರುವಿಕೆಯನ್ನು ತಡೆಯುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಸೌತೆಕಾಯಿ:

ಸೂಕ್ತವಾದ ಮಣ್ಣು ಮತ್ತು ಸಾಕಷ್ಟು ತೇವಾಂಶವಿರುವ ಮಣ್ಣು ಸೌತೆಕಾಯಿ ಬೆಳೆಯಲು ಸೂಕ್ತವಾಗಿದೆ. ಇದರ ಕೃಷಿಯು ತುಂಬಾ ಸುಲಭವಾಗಿದೆ. ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಅವುಗಳನ್ನು ನೆಡಬೇಕು. ಇದು ಸುಲಭವಾಗಿ ಸಣ್ಣ ಜಾಗದಲ್ಲಿಯೂ ಬೆಳೆಯುತ್ತವೆ. ಉತ್ತಮ ಫಸಲಿಗಾಗಿ ಸೌತೆಕಾಯಿ ಬೀಜಗಳನ್ನು 1 ಇಂಚು ಆಳ ಮತ್ತು 2 ರಿಂದ 3 ಇಂಚುಗಳಷ್ಟು ಅಂತರದಲ್ಲಿ ನೆಡಬೇಕು.

ಬೀನ್ಸ್:

ಮನೆಯಲ್ಲಿಯೇ ತೋಟಗಾರಿಕೆ ಮಾಡುವವರು ಬೀನ್ಸ್ ಸಸಿಯನ್ನು ಬೆಳೆಯಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಇವುಗಳು ಮಾನ್ಸೂನ್ ನಲ್ಲಿ ಬೆಳೆಯಲು ಸೂಕ್ತವಾದ ಸಸ್ಯಗಳಾಗಿವೆ. ಇದು ನವೆಂಬರ್ ನಿಂದ ಡಿಸೆಂಬರ್ ವರೆಗೆ ಹೂ ಬಿಡಲು ಆರಂಭಿಸಿ ಜನವರಿಯಿಂದ ಫೆಬ್ರವರಿಯವರೆಗೆ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಇವುಗಳು ವಿವಿಧ ಬಗೆಯ ಮಣ್ಣಿನಲ್ಲಿ ಬೆಳೆದರೂ ಕೂಡಾ, ಜೇಡಿ ಮಣ್ಣಿನಲ್ಲಿ ಬೆಳೆಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತವೆ.

ಮೂಲಂಗಿ:

ಮೂಲಂಗಿಗಳು ತ್ವರಿತವಾಗಿ ಬೆಳೆಯುವ ತರಕಾರಿಗಳಾಗಿವೆ. ಇವುಗಳನ್ನು ಮಳೆಗಾಲ ಸಮಯದಲ್ಲಿ ನೇರವಾಗಿ ಮಣ್ಣಿನಲ್ಲಿ ಬಿತ್ತಬಹುದು. ಇವುಗಳಿಗೆ ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ ಮತ್ತು ಕೆಲವೇ ವಾರಗಳಲ್ಲಿ ಕೊಯ್ಲು ಮಾಡಬಹುದು.

ಮಾತ್ರವಲ್ಲದೆ ಕರಿಬೇವು, ಕ್ಯಾರೆಟ್, ಬೀಟ್ರೂಟ್, ಸೋರೆಕಾಯಿ, ಹಸಿಮೆಣಸಿನಕಾಯಿ, ಪುದೀನಾ, ಬದನೆಕಾಯಿ ಮುಂತಾದ ತರಕಾರಿ ಗಿಡಗಳನ್ನು ಕೂಡಾ ಈ ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್