ಮಳೆಗಾಲದಲ್ಲಿ ಇರುವೆಗಳು ಬರದಂತೆ ಮಾಡಲು ಇಲ್ಲಿವೆ 6 ಮನೆಮದ್ದುಗಳು

ಇರುವೆ ಬರದಂತೆ ತಡೆಯಲು ಹಲವಾರು ಔಷಧಗಳಿದ್ದರೂ ಅವುಗಳಿಂದ ಅಡ್ಡ ಪರಿಣಾಮಗಳು ಇರುತ್ತವೆ ಆದರೆ ಮನೆ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಿಲ್ಲದೆ, ಇರುವೆ ಬರದಂತೆ ನೋಡಿಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಇರುವೆಗಳು ಬರದಂತೆ ಮಾಡಲು ಇಲ್ಲಿವೆ 6 ಮನೆಮದ್ದುಗಳು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Jun 30, 2023 | 11:22 AM

ಮಳೆಗಾಲದಲ್ಲಿ ಇರುವೆಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕಾಣಿಸಿಕೊಳ್ಳುತ್ತವೆ. ಜೊತೆಗೆ ಆಹಾರ ಪದಾರ್ಥಗಳನ್ನು ಇಟ್ಟು ಸ್ವಲ್ಪ ಹೊತ್ತಿನಲ್ಲಿಯೇ ಅದಕ್ಕೆ ಮುತ್ತಿಕೊಳ್ಳುತ್ತೇವೆ, ಇರುವೆ ಬರದಂತೆ ತಡೆಯಲು ಹಲವಾರು ಔಷಧಗಳಿದ್ದರೂ ಅವುಗಳಿಂದ ಅಡ್ಡ ಪರಿಣಾಮಗಳು ಇರುತ್ತವೆ ಆದರೆ ಮನೆ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಿಲ್ಲದೆ ಇರುವೆ ಬರದಂತೆ ನೋಡಿಕೊಳ್ಳಬಹುದು.

ಮಳೆ ಬಿಳುತ್ತಿದ್ದಂತೆ, ಇರುವೆಗಳು ತಂಪಾದ ಸ್ಥಳಗಳನ್ನು ಹುಡುಕುತ್ತವೆ, ಸಾಮನ್ಯವಾಗಿ ಮನೆಯ ಅಡುಗೆಮನೆ ಮತ್ತು ವಾಶ್ ರೂಮ್ ನಂತಹ ಸ್ಥಳಗಳನ್ನು ಇವು ಆಕ್ರಮಿಸಿಕೊಳ್ಳುತ್ತವೆ. ಇವು ಸಣ್ಣ ಸಣ್ಣ ಗೂಡುಗಳನ್ನು ಮಾಡಿಕೊಳ್ಳುವ ಮೂಲಕ ಮುತ್ತಿಗೆ ಹಾಕುತ್ತವೆ ಅದಲ್ಲದೆ ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತವೆ. ಹಾಗಾಗಿ ಅವುಗಳನ್ನು ದೂರವಿರಿಸಲು ಕೆಲವು ಸುಲಭ ಸಲಹೆಗಳು ಇಲ್ಲಿವೆ.

ಇದನ್ನೂ ಓದಿ: Monsoon Vegetable Gardening: ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳ ಯಾವುವು?

ನಿಮ್ಮ ಮನೆಯನ್ನು ಇರುವೆ ಮುಕ್ತ ವಲಯವನ್ನಾಗಿ ಮಾಡಲು ಇಲ್ಲಿವೆ ಮನೆ ಮದ್ದುಗಳು:

-ಸುಣ್ಣ, ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಹೊಂದಿರುತ್ತದೆ. ಇದು ಇರುವೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಇರುವೆಗಳ ಪ್ರವೇಶ ದ್ವಾರಗಳಲ್ಲಿ ಸ್ವಲ್ಪ ಸುಣ್ಣದ ಪುಡಿಯನ್ನು ಸಿಂಪಡಿಸಿ ಅಥವಾ ಅದರಲ್ಲಿಯೇ ಗೆರೆಯನ್ನು ಎಳೆಯಿರಿ.

-ಇರುವೆಗಳು ಬರುವ ಜಾಗದಲ್ಲಿ ನಿಂಬೆ ರಸವನ್ನು ಹಿಂಡಿ ಅಥವಾ ಕೆಲವು ನಿಂಬೆಯ ಸಿಪ್ಪೆಗಳನ್ನು ತುಂಡು ಮಾಡಿ ಇರಿಸಿ. ಇರುವೆಗಳು ನಿಂಬೆಯ ವಾಸನೆಯನ್ನು ಇಷ್ಟಪಡದ ಕಾರಣ ಇರುವೆಗಳು ಬರುವುದಿಲ್ಲ.ಅಥವಾ ನೀವು ನೆಲವನ್ನು ಒರೆಸುವ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿಯೂ ನೆಲವನ್ನು ಒರೆಸಬಹುದು.

-ಇರುವೆಗಳು ಸಕ್ಕರೆಯನ್ನು ಪ್ರೀತಿಸುತ್ತವೆ ಆದರೆ ಮೆಣಸನ್ನಲ್ಲ. ಆದ್ದರಿಂದ, ನಿಮ್ಮ ಮನೆಯ ಇರುವೆ ಬರುವ ಸ್ಥಳಗಳಲ್ಲಿ ಸ್ವಲ್ಪ ಮೆಣಸನ್ನು ಅಥವಾ ಮೆಣಸಿನ ಹುಡಿಯನ್ನು ಸಿಂಪಡಿಸಿ.

-ಬಿಳಿ ವಿನೆಗರ್, ನೀರಿನ ದ್ರಾವಣವನ್ನು ತಯಾರಿಸಿ ಮತ್ತು ಅದಕ್ಕೆ ಕೆಲವು ಸಾರಭೂತ ತೈಲಗಳನ್ನು ಸೇರಿಸಿ. ಇರುವೆಗಳು ಪ್ರವೇಶಿಸುವ ಜಾಗದಲ್ಲಿ ಪ್ರತಿದಿನ ಈ ದ್ರಾವಣವನ್ನು ಸಿಂಪಡಿಸಿ.

-ಪುದೀನಾ, ಕೀಟ ನಿವಾರಕವಾಗಿದೆ ಏಕೆಂದರೆ ಇದು ಬಲವಾದ ಪರಿಮಳವನ್ನು ಹೊಂದಿದ್ದು, ಅಂತಹ ಪರಿಮಳಗಳನ್ನು ಇರುವೆಗಳು ಸಹಿಸಿಕೊಳ್ಳುವುದಿಲ್ಲ. ಇರುವೆಗಳು ಬರುವ ಸ್ಥಳಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸುವುದರಿಂದ ಇರುವೆಗಳು ಬರುವುದಿಲ್ಲ.

-ಇರುವೆಗಳನ್ನು ನೈಸರ್ಗಿಕವಾಗಿ ತೊಡೆದು ಹಾಕಲು ಉಪ್ಪು ಅತ್ಯುತ್ತಮ ಮತ್ತು ಅಗ್ಗದ ಮಾರ್ಗವಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ನೀರನ್ನು ಕುದಿಸಿ ಮತ್ತು ನೀರಿಗಿಂತ ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇರಿಸಿ. ನಂತರ ಅಗತ್ಯವಿರುವ ಕಡೆಗಳಲ್ಲಿ ಸಿಂಪಡಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:45 am, Fri, 30 June 23

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್