Vegetable prices: ತರಕಾರಿ ಬೆಲೆಯೇರಿಕೆ ಕೇವಲ ಗ್ರಾಹಕರಿಗಷ್ಟೇ ಅಲ್ಲ ವ್ಯಾಪಾರಿಗಳಿಗೂ ತಲೆಬಿಸಿ ಮಾಡಿದೆ
ಎರಡು ಮೂರು ಮೂಟೆಗಳಷ್ಟು ತರಕಾರಿ ಮಾರುತ್ತಿದ್ದವನು ಬೆಲೆಯೇರಿಕೆಯಿಂದಾಗಿ ಅರ್ಧ ಮೂಟೆ ಮಾರುವುದು ಕೂಡ ಕಷ್ಟವಾಗುತ್ತಿದೆ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಬೆಂಗಳೂರು: ತರಕಾರಿ, ಕಾಯಿಪಲ್ಯಗಳ ಬೆಲೆಯಲ್ಲಿ (vegetable price) ವಿಪರೀತ ಹೆಚ್ಚಳವಾಗಿದ್ದು ಜನಸಾಮಾನ್ಯರ ಬಜೆಟ್ ಅಸ್ತವ್ಯಸ್ತಗೊಂಡಿದೆ. ಕೊಳ್ಳುವವರು ಬಿಡಿ, ತರಕಾರಿ ಮಾರುವವರು ಸಹ ಸರ್ಕಾರವನ್ನು ಮನಬಂದಂತೆ ತೆಗಳುತ್ತಿದ್ದಾರೆ. ನಗರದ ಹೊರವಲಯಲದ ಗ್ರಾಮವೊಂದರಿಂದ ಬೆಳಗಿನ ಜಾವ 3 ಗಂಟೆಗೆ ಕೆಆರ್ ಮಾರ್ಕೆಟ್ ಗೆ (KR Market) ತರಕಾರಿ ಹೊತ್ತು ತಂದು ಸಗಟು ಬೆಲೆಯಲ್ಲಿ (wholesale price) ಮಾರುವ ಈ ರೈತ, ಯಾವ ಸರ್ಕಾರ ಬಂದರೂ ರೈತರ ಮತ್ತು ಜನಸಾಮಾನ್ಯರ ಗೋಳು ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿರುವ ಇವರು, ರೈತನನ್ನು ದೇಶದ ಬೆನ್ನೆಲುಬು, ಅನ್ನದಾತ ಅಂತ ಹೇಳಿದ್ದಷ್ಟೇ ಬಂತು, ಅವನ ಸಂಕಷ್ಟ ಸರ್ಕಾರಗಳು ಅರ್ಥಮಾಡಿಕೊಳ್ಳಲಾರವು ಎಂದು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳು ಜಾರಿಗೊಳ್ಳಬೇಕಾದರೆ ಒಂದು ವರ್ಷ ಹಿಡಿಯುತ್ತೆ ಎಂದು ಅವರು ಹೇಳುತ್ತಾರೆ. ಕೆಂಪು ಅಂಗಿ ತೊಟ್ಟು ತರಕಾರಿ ಮಾರುತ್ತಿರುವ ಈ ವ್ಯಾಪಾರಿ, ಎರಡು ಮೂರು ಮೂಟೆಗಳಷ್ಟು ತರಕಾರಿ ಮಾರುತ್ತಿದ್ದವನು ಬೆಲೆಯೇರಿಕೆಯಿಂದಾಗಿ ಅರ್ಧ ಮೂಟೆ ಮಾರುವುದು ಕೂಡ ಕಷ್ಟವಾಗುತ್ತಿದೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ