ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ ನಿರ್ಧಾರ
ಸಾಲುಮರದ ತಿಮ್ಮಕ್ಕ ಅವರ ಬದುಕಿನ ಕುರಿತು ಸಿನಿಮಾ ಮಾಡಲು ತಯಾರಿ ನಡೆದಿದೆ. ಆದರೆ ಈ ಚಿತ್ರ ಮಾಡಬಾರದು ಎಂದು ಸ್ವತಃ ಸಾಲುಮರದ ತಿಮ್ಮಕ್ಕ ಆಕ್ಷೇಪ ಎತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಅವರು ದೂರು ಕೊಟ್ಟಿದ್ದಾರೆ. ಈ ಕುರಿತು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಮಾತನಾಡಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರ ಜೀವನದ ಬಗ್ಗೆ ಸಿನಿಮಾ (Saalumarada Thimmakka Biopic) ಮಾಡಲು ತಯಾರಿ ನಡೆದಿತ್ತು. ಆದರೆ ಈ ಸಿನಿಮಾ ಮಾಡಬಾರದು ಎಂದು ಸ್ವತಃ ಸಾಲುಮರದ ತಿಮ್ಮಕ್ಕ ಅವರು ಆಕ್ಷೇಪ ಎತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ಬಂದು ಅವರು ದೂರು ನೀಡಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ಮಾತನಾಡಿದ್ದಾರೆ. ‘ಸಾಲುಮರದ ತಿಮ್ಮಕ್ಕ (Saalumarada Thimmakka) ಅವರು ಚೇಬಂರ್ಗೆ ಬಂದು ದೂರು ನೀಡಿದ್ದು, ಸಿನಿಮಾಗೆ ತಡೆ ನೀಡಬೇಕು ಎಂದಿದ್ದಾರೆ. ಅವರ ಅನುಮತಿ ಇಲ್ಲದೇ ಸಿನಿಮಾ ಮಾಡುವುದು ತಪ್ಪು. ಯಾವುದೇ ಕಾರಣಕ್ಕೂ ಸಿನಿಮಾ ಮಾಡೋಕೆ ಆಗಲ್ಲ. ನಾವು ಕೂಡ ಅನುಮತಿ ನೀಡಲ್ಲ. ವೃಕ್ಷಮಾತೆ ಎಂಬ ಟೈಟಲ್ ನಮ್ಮಲ್ಲಿ ನೋಂದಣಿ ಆಗಿಲ್ಲ’ ಎಂದು ನರಸಿಂಹಲು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.