ಬಡವರ ಸೇವೆ ಮಾಡಬೇಕು, ಮಠಮಾನ್ಯಗಳಿಗೆ ನೆರವಾಗಬೇಕು ಅಂತ ಅಂಜನಾದ್ರಿ ಆಂಜನೇಯನ ಇಚ್ಛೆಯಾಗಿತ್ತು: ಜನಾರ್ಧನ ರೆಡ್ಡಿ
ತನ್ನ ವಿರುದ್ಧ ಮಾಡಿದ ಅಕ್ರಮ ಗಣಿಗಾರಿಕೆ ಆರೋಪಗಳು ಸುಳ್ಳು, ಅವು ಸತ್ಯಕ್ಕೆ ದೂರ ಅನ್ನೋದು ಈಗಾಗಲೇ ಸಾಬೀತಾಗಿದೆ, ಲೈಸೆನ್ಸ್ ಪಡೆದ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದೆ, ತನಗೆ ನ್ಯಾಯದೇವತೆ ಮೇಲೆ ವಿಶ್ವಾಸವಿದೆ, ಈ ಪ್ರಕರಣದಲ್ಲಿಯೂ ಅರೋಪಮುಕ್ತನಾಗಿ ಬರುವ ವಿಶ್ವಾಸ ತನಗಿದೆ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಕೊಪ್ಪಳ, ಜೂನ್ 16: ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ತಮ್ಮ ಕ್ಷೇತ್ರ ಗಂಗಾವತಿಗೆ ವಾಪಸ್ಸಾಗಿದ್ದಾರೆ. ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮೊದಲ ಬಾರಿಯ ಜೈಲುವಾಸದ ಬಳಿಕ ತಾನು ಪುನಃ ಸಾರ್ವಜನಿಕ ಬದುಕಿಗೆ ವಾಪಸ್ಸಾಗಿ ಗಂಗಾವತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಅಂಜನಾದ್ರಿ ಆಂಜನೇಯ ಕೃಪೆ ಮತ್ತು ಆಶೀರ್ವಾದ ಎಂದು ಹೇಳಿದರು. ಅಂಜನಾದ್ರಿ ಕ್ಷೇತ್ರದಲ್ಲಿ ಬಡವರಿಗೆ ಸಹಾಯ ಮಾಡುತ್ತ ಮಠನಮಾನ್ಯಗಳಿಗೆ ನೆರವಾಗಬೇಕೆನ್ನುವುದು ಭಗವಂತನ ಇಚ್ಛೆಯಾಗಿತ್ತು, ಹಾಗಾಗೇ ಹೈಕೋರ್ಟ್ನಿಂದ ತನಗೆ ತಡೆಯಾಜ್ಞೆ ಸಿಕ್ಕಿದೆ ಮತ್ತು ಶಾಸಕ ಸ್ಥಾನವೂ ಅಭಾದಿತವಾಗಿ ಉಳಿದಿದೆ ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಮೊದಲ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ