ಮೇಕಪ್ ಮಾಡುವಾಗ ಪ್ರತೀ ಬಾರೀ ಕೆನ್ನೆಯ ಹೊಳೆಯುವಂತೆ (Cheek Blush) ಮಾಡಲು ತುಂಬಾ ಮುಖ್ಯವಾಗಿರುತ್ತದೆ. ಯಾಕೆಂದರೆ ನೀವು ಮದುವೆ ಮುಂತಾದ ಸಂಭ್ರಮಗಳಲ್ಲಿ ನಿಮ್ಮ ಕೆನ್ನೆಯನ್ನು ಹೊಳೆಯುವಂತೆ ಮಾಡುತ್ತದೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ(Social Media) ದಲ್ಲಿ ಮೇಕಪ್ ಬ್ಲಶ್ ವಿಡಿಯೋ ವೈರಲ್ ಆಗಿದೆ. ಮೇಕಪ್ ಇಷ್ಟ ಪಡುವ ಮಹಿಳೆಯರಂತೂ ಖಂಡಿತಾ ಖಂಡಿತಾ ಪ್ರಯತ್ನಿಸಿರುತ್ತಾರೆ. ಕೆನ್ನೆಯನ್ನು ಕೇವಲ ಮೂರು ವಸ್ತು ಬಳಸಿ ಹೊಳೆಯುವಂತೆ ಮಾಡಿದ ವೈರಲ್ ವಿಡಿಯೋ ಇಲ್ಲಿದೆ ನೋಡಿ.
namvo ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೆಬ್ರವರಿ 28ರಂದು ಶೇರ್ ಮಾಡಲಾದ ಈ ವಿಡಿಯೋ ಭಾರೀ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ಕಾಮೆಂಟ್ಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಕೆನ್ನೆಯನ್ನು ಹೊಳೆಯುವಂತೆ ಮಾಡಲು ಮೊದಲು ಲಿಪ್ಸ್ಟಿಕ್ ಬಳಸಿ, ಕೆನ್ನೆಯ ಮೇಲೆ ಚಿಕ್ಕ ಗೆರೆಯನ್ನು ಎಳೆಯುತ್ತಾಳೆ. ನಂತರ ಅದರ ಮೇಲೆ ಅಡ್ಡವಾಗಿ ಕನ್ಸೀಲರ್ ಹಚ್ಚುವುದನ್ನು ಕಾಣಬಹುದು. ಇದಾದ ಬಳಿಕ ಅದರ ಮೇಲೆ ವ್ಯಾಸ್ಲಿನ್ ಕ್ರೀಮ್ ಬಳಸುವುದನ್ನು ಕಾಣಬಹುದು. ನಂತರ ಬ್ರಶ್ ಬಳಸಿ ಎಲ್ಲವನ್ನು ಮುಖದ ಮೇಲೆ ಸೆಟ್ ಮಾಡಿಕೊಳ್ಳುತ್ತಾಳೆ.
ಇದನ್ನೂ ಓದಿ: ಮುಖದ ಮೇಲೆ ಒಂದೇ ಭಾಗದಲ್ಲಿ, ಪದೇ ಪದೇ ಮೊಡವೆಗಳು ಹುಟ್ಟುತ್ತಿದೆಯಾ? ಕಾರಣ ತಿಳಿದುಕೊಳ್ಳಿ
ಈ ತಂತ್ರವು ಅತ್ಯಂತ ಸುಲಭವಾದುದು ಎಂದು ಸಾಕಷ್ಟು ಜನ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಆಕೆಯ ಮೇಕ್ ಅಪ್ ಫಲಿತಾಂಶವು ಸುಂದರವಾಗಿ ಬಂದಿರುವುದನ್ನು ಕಾಣಬಹುದು. ಇನ್ನು ಕೆಲವು ಬಳಕೆದಾರರು ಮೇಕ್ಅಪ್ ಸುಂದರವಾಗಿ ಮೂಡಿಬಂದಿದೆ ಎಂದು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:26 pm, Sat, 11 March 23