
ಪ್ರತಿಯೊಬ್ಬರೂ ಸಹ ತಮ್ಮ ಆದಾಯ ಮತ್ತು ಆರ್ಥಿಕ ವಿಷಯಗಳನ್ನು (financial matters) ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತಾರೆ. ಸಂಬಳದಿಂದ ಹಿಡಿದು ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ವರೆಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ ಆದರೆ ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳನ್ನು ಬೇರೆವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅವರ ಪ್ರಕಾರ ನಾವು ಹೀಗೆ ಹಣಕಾಸಿಗೆ ಪ್ರತಿಯೊಂದು ಸೀಕ್ರೆಟ್‌ಗಳನ್ನು ಇತರರ ಬಳಿ ಹಂಚಿಕೊಂಡಾಗ, ಇದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಹಣಕಾಸಿಗೆ ಸಂಬಂಧಿಸಿ ಯಾವೆಲ್ಲಾ ವಿಷಯಗಳನ್ನು ರಹಸ್ಯವಾಗಿಟ್ಟರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.
ಆಚಾರ್ಯ ಚಾಣಕ್ಯರ ಪ್ರಕಾರ, ಸಂಬಳದ ಬಗ್ಗೆ ಎಲ್ಲರೊಂದಿಗೂ ಹಂಚಿಕೊಳ್ಳುವುದು ಸರಿಯಲ್ಲ. ವಾಸ್ತವವಾಗಿ, ಜನರು ನಿಮ್ಮ ಸಂಬಳವನ್ನು ತಿಳಿದ ನಂತರ ತಮ್ಮನ್ನು ತಾವು ನಿಮ್ಮೊಂದಿಗೆ ಹೋಲಿಸಿಕೊಳ್ಳುತ್ತಾರೆ. ಮತ್ತು ನಿಮ್ಮ ಬಗ್ಗೆ ಅಸೂಯೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ಇತರರಿಂತ ಕಡಿಮೆ ಸಂಬಳ ಪಡೆದರೆ ಅವರು ನಿಮ್ಮ ಕೀಳಾಗಿ ಕಾಣುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಸಂಬಳದ ಬಗ್ಗೆ ಯಾರಿಗೂ ಹೇಳಬೇಡಿ.
ಅನೇಕರು ಸಂಬಳದ ಜೊತೆಗೆ ಇತರ ಮೂಲಗಳಿಂದಲೂ ಹಣವನ್ನು ಸಂಪಾದನೆ ಮಾಡುತ್ತಾರೆ, ಕಂಪೆನಿಯಿಂದ ಉತ್ತಮ ಬೋನಸ್ ಪಡೆಯುತ್ತಾರೆ. ಇನ್ನೂ ಕೆಲವರು ಹಳೆಯ ಹೂಡಿಕೆಯ ಲಾಭಗಳನ್ನು ಪಡೆಯುತ್ತಾರೆ. ಕೆಲವರು ತಮ್ಮ ಕೆಲಸದ ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಹೆಚ್ಚುವರಿ ಹಣವನ್ನು ಗಳಿಸುತ್ತಾರೆ. ಇದನ್ನೆಲ್ಲಾ ಯಾರೊಂದಿಗೂ ಹಂಚಿಕೊಳ್ಳುವ ವಶ್ಯಕತೆ ಇಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಏಕೆಂದರೆ ನಿಮ್ಮ ಬಳಿ ಹೆಚ್ಚು ಹಣ ಇದೆ ಎಂದು ತಿಳಿದರೆ ಕೆಲವರು ಅದನ್ನೇ ನೆಪವಾಗಿಟ್ಟುಕೊಂಡು ನಿಮ್ಮ ಬಳಿ ಸಾಲವನ್ನು ಪಡೆಯುತ್ತಾರೆ. ಕೆಲವರು ಸಾಲ ಪಡೆದು ಅದನ್ನು ಮರು ಪಾವತಿ ಮಾಡುವುದೇ ಇಲ್ಲ. ಇದು ನಿಮ್ಮ ಆರ್ಥಿಕ ಸ್ಥಿತಿಗತಿಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.
ಇದನ್ನೂ ಓದಿ: ಹಣಕಾಸಿನ ವಿಚಾರದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು… ಎಚ್ಚರ!
ಅನೇಕ ಜನರು ತಮ್ಮ ಸಂಬಳದ ಒಂದು ಸಣ್ಣ ಮೊತ್ತವನ್ನು ಪ್ರತಿ ತಿಂಗಳು ಬ್ಯಾಂಕಿಗೆ ಜಮಾ ಮಾಡುತ್ತಾರೆ. ಈ ಉಳಿತಾಯದ ಸಂಗತಿಯನ್ನು ಯಾರಿಗೂ ಹೇಳಬೇಡಿ. ಏಕೆಂದರೆ ನಿಮ್ಮ ಬಳಿ ಹೆಚ್ಚು ಹಣ ಇದೆ ಎಂದು ತಿಳಿದರೆ ಸ್ನೇಹಿತರು, ಸಂಬಂಧಿಕರು ನಿಮ್ಮಿಂದ ಸಾಲವನ್ನು ಕೇಳುತ್ತಾರೆ. ಇನ್ನೂ ಸಾಲ ಕೇಳಿ ನೀವು ಹಣ ಕೊಡದಿದ್ದರೆ ಇದು ನಿಮ್ಮ ಸಂಬಂಧದಲ್ಲೂ ಬಿರುಕನ್ನು ಮೂಡಿಸಬಹುದು. ಹಾಗಾಗಿ ನೀವೆಷ್ಟು ಹಣ ಉಳಿತಾಯ ಮಾಡಿದ್ದೀರಿ ಎಂಬುದನ್ನು ಯಾರಿಗೂ ಹೇಳಬೇಡಿ. ಅದನ್ನು ಆದಷ್ಟು ರಹಸ್ಯವಾಗಿಡಿ.
ನೀವು ಮನೆ ಖರೀದಿಸುವ, ಹೊಸ ವ್ಯವಹಾರವನ್ನು ಪ್ರಾರಂಭಿಸುವ ಅಥವಾ ಹಣ ಹೂಡಿಕೆ ಮಾಡುವ ಯಾವುದೇ ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಚಾಣಕ್ಯ. ಇಂತಹ ಯೋಜನೆಗಳನ್ನು ಇತರರ ಬಳಿ ಹಂಚಿಕೊಂಡಾಗ, ಅವರ ಸಲಹೆಗಳನ್ನು ನೀಡಲು ಆರಂಭಿಸುತ್ತಾರೆ. ಈ ಸಲಹೆಗಳಿಂದ ಗೊಂದಲಕ್ಕೊಳಗಾಗಿ ನಾವು ತಪ್ಪು ಹೆಜ್ಜೆ ಇಡುವ ಸಾಧ್ಯತೆ ಇರುತ್ತದೆ. ಇದು ಗಣನೀಯವಾಗಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ಯಾವುದೇ ಸಂಗತಿಗಳನ್ನು ಯಾರೊಂದಿಗೂ ಶೇರ್ ಮಾಡಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ