
ಇಂದಿನ ಈ ವೇಗದ ಜಗತ್ತಿನಲ್ಲಿ ಎಲ್ಲರೂ ಬಯಸೋದು ಒತ್ತಡ ಮುಕ್ತ ಮತ್ತು ಶಾಂತಿ, ಸಂತೋಷದಾಯಕ ಜೀವನ (happy life). ಆದರೆ ಕೆಲಸದ ಒತ್ತಡ, ಒಂದಷ್ಟು ಜವಾಬ್ದಾರಿ ಇವೆಲ್ಲದರ ಕಾರಣದಿಂದ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಈ ಒತ್ತಡದಿಂದಾಗಿ ಅನೇಕರ ಜೀವನದಲ್ಲಿ ಸಂತೋಷವೇ ಇಲ್ಲದಾಗಿದೆ. ಹೀಗಾಗಿ ಜನ ಒತ್ತಡಮುಕ್ತ ಮತ್ತು ಸಂತೋಷದಾಯಕ ಜೀವನ ನಡೆಸಲು ಹಾತೊರೆಯುತ್ತಿದ್ದಾರೆ. ಹೀಗೆ ನಿಮಗೂ ಕೂಡ ಜೀವನದಲ್ಲಿ ಸಂತೋಷ ಬೇಕೆ? ಹಾಗಾದ್ದರೆ ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರ ಒತ್ತಡಮುಕ್ತ ಜೀವನಕ್ಕೆ ಸಂಬಂಧಿಸಿದ ಈ ಒಂದಷ್ಟು ಸಲಹೆಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.
ಆಗಿಹೋದ ಸಂಗತಿಗಳಿಗೆ ವಿಷಾದಿಸಬೇಡಿ: ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆಯಂತೆ, ಆಗಿ ಹೋದ ವಿಷಯಗಳಿಗೆ ವಿಷಾದಿಸುವುದು ಕೂಡ ವ್ಯರ್ಥ. ಈ ರೀತಿ ಭೂತಕಾಲದ ವಿಷಯಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ವರ್ತಮಾನದಲ್ಲಿ ಜೀವಿಸುವುದನ್ನು ಅಭ್ಯಾಸ ಮಾಡಿ. ಇದರಿಂದ ಒತ್ತಡವೂ ಇರಲ್ಲ, ಸಂತೋಷವೂ ನೆಲೆಸುತ್ತದೆ.
ದುರಾಸೆಯಿಂದ ದೂರವಿರಿ: ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ದುರಾಸೆಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಎಲ್ಲವೂ ನನಗೆ ಬೇಕು, ಎಲ್ಲವೂ ನನ್ನದಾಗಬೇಕೆಂಬ ದುರಾಸೆ, ಇರುವುದರಲ್ಲಿ ತೃಪ್ತಿಯನ್ನು ಪಡದೆ ಯಾವಾಗಲೂ ಅತೃಪ್ತಿಯಿಂದ ಇರುವ ಜನರು ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ದುರಾಸೆಯನ್ನು ಬಿಟ್ಟು ಇರುವುದರಲ್ಲಿ ತೃಪ್ತಿಯನ್ನು ಕಾಣಿ, ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುವುದು ಖಂಡಿತ.
ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು
ಸಾಲದಿಂದ ದೂರವಿರಿ: ಸಾಲ ತೆಗೆದುಕೊಳ್ಳುವ ಅಭ್ಯಾಸದಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಸಾಲ ತೆಗೆದುಕೊಳ್ಳುವುದು ಮತ್ತು ಆ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸದಿರುವುದು ಇಂತಹ ಸಾಲದ ಹೊರೆ ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೆ ಸಾಲದಿಂದ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹ ಸಾಧ್ಯವಿಲ್ಲ. ಆದ್ದರಿಂದ ಒತ್ತಡಮುಕ್ತ ಜೀವನ ನಿಮ್ಮದಾಗಲು ಸಾಲದಿಂದ ದೂರವಿರಿ.
ಕೆಟ್ಟವರ ಸಹವಾಸದಿಂದ ದೂರವಿರಿ: ನಮ್ಮ ಸುತ್ತಮುತ್ತಲಿರುವ ಜನರು ಸಹ ನಮ್ಮ ವ್ಯಕ್ತಿತ್ವ ಮತ್ತು ಮಾನಸಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಕೆಟ್ಟ ಮನಸ್ಥಿತಿಯ ಜನರಿಂದ ದೂರವಿದ್ದು, ಸಕಾರಾತ್ಮಕ ಮನಸ್ಥಿತಿಯ ಜನರೊಂದಿಗಿರಿ. ಇವರ ಸಹವಾಸವು ಜೀವನದಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ