AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು

ಶ್ರೀಮಂತಿಕೆಯನ್ನು ಗಳಿಸಿ, ಒಂದೊಳ್ಳೆ ಜೀವನವನ್ನು ಸಾಗಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಇದಕ್ಕಾಗಿ ಏನು ಮಾಡಬೇಕು ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ಇನ್ನೂ ಅನೇಕರಿಗೆ ಈ ಕುರಿತು ಸಲಹೆ ನೀಡುವವರಿಲ್ಲ. ಹೀಗಿರುವಾಗ ಆಚಾರ್ಯ ಚಾಣಕ್ಯರು ತಿಳಿಸಿರುವ ಈ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಶ್ರೀಮಂತಿಕೆಯನ್ನು ಗಳಿಸಬಹುದು. ನಿಮಗೂ ಕೂಡ ರಿಚ್‌ ಆಗಿ ಬಾಳಬೇಕು ಎಂಬ ಆಸೆಯಿದ್ದರೆ ಚಾಣಕ್ಯರ ಈ ಸಲಹೆಗಳನ್ನು ತಪ್ಪದೇ ಪಾಲಿಸಿ.

Chanakya Niti: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Jul 08, 2026 | 8:18 PM

Share

ನಮ್ಮ ಜೀವನವನ್ನು ಸರಳ ಮತ್ತು ಸುಲಭಗೊಳಿಸುವಲ್ಲಿ ಹಣ (money) ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಹಣವನ್ನು ಗಳಿಸಬೇಕು, ಶ್ರೀಮಂತಿಕೆಯನ್ನು ಪಡೆಯಬೇಕು ಎಂದು ಪ್ರತಿಯೊಬ್ಬರೂ ಬಯಸೋದು. ಶ್ರೀಮಂತಿಕೆ ಗಳಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಅದಕ್ಕಾಗಿ ಏನು ಮಾಡಬೇಕು ಎಂಬ ಮಾಹಿತಿ, ಮಾರ್ಗದರ್ಶನ ಹೆಚ್ಚಿನವರಿಗೆ ಇರೋದೇ ಇಲ್ಲ. ಹೀಗಿರುವಾಗ ಆಚಾರ್ಯ ಚಾಣಕ್ಯರು ಹೇಳಿರುವ ಈ ಕೆಲವು ಸಲಹೆಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ನೀವು ಸಹ ಸಾಕಷ್ಟು ಹಣ, ಶ್ರೀಮಂತಿಕೆಯನ್ನು ಗಳಿಸಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಶ್ರೀಮಂತಿಕೆ ಗಳಿಸಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ:

ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಳ್ಳಿ:  ಜೀವನದಲ್ಲಿ ಯಶಸ್ವಿಯಾಗಲು, ಪ್ರಬಲ ಗುರಿ ಇರಬೇಕು. ಹೆಚ್ಚು ಹೆಚ್ಚು ಹಣ ಗಳಿಸಲು ನಿರಂತರವಾಗಿ ಶ್ರಮ ಪಡುತ್ತಲೇ ಇರಬೇಕು. ತನ್ನ ಗುರಿಯನ್ನು ಹೊಂದಿಸಲು ಸಾಧ್ಯವಾಗದ ವ್ಯಕ್ತಿ ಎಂದಿಗೂ ಯಶಸ್ವಿಯಾಗಲು ಅಥವಾ ಶ್ರೀಮಂತನಾಗಲು ಸಾಧ್ಯವಿಲ್ಲ. ಹಾಗಾಗಿ ದೃಢ ನಿರ್ಧಾರ, ಸಾಕಷ್ಟು ಹಣ ಗಳಿಸುವ ಮಹತ್ವಾಕಂಕ್ಷೆಯನ್ನು ಬೆಳೆಸಿಕೊಳ್ಳಿ. ಈ ನಿಮ್ಮ ಛಲ ಖಂಡಿತವಾಗಿಯೂ ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಹಾಯ ಮಾಡುತ್ತದೆ.

ಒಳ್ಳೆಯ ಸ್ಥಳದಲ್ಲಿ ವಾಸಿಸಿ:  ನೀವು ಶ್ರೀಮಂತರಾಗಲು ಅಥವಾ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಬಯಸಿದರೆ, ನೀವು ಶ್ರೀಮಂತರು, ವ್ಯಾಪಾರಿಗಳು, ವಿದ್ವಾಂಸರು ಇತ್ಯಾದಿ ಬಲಿಷ್ಠ ಜನರಿರುವ ಬಳಿ ವಾಸಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಂತಹ ಜನರೊಂದಿಗಿನ ಒಡನಾಟ ನಿಮ್ಮ ಆರ್ಥಿಕ  ಜ್ಞಾನವನ್ನು ಹೆಚ್ಚಿಸುತ್ತದೆ.

ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬೇಡಿ: ಉಳಿತಾಯದ ಜೊತೆಗೆ ಸರಿಯಾದ ಹುಡಿಕೆಯತ್ತ ಗಮನ ಹರಿಸಿದರೆ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ ಎಂದಿದ್ದಾರೆ ಚಾಣಕ್ಯ. ಹಾಗಾಗಿ ಏನೇನೋ ವಸ್ತುಗಳನ್ನು ಖರೀದಿಸಲು ವ್ಯರ್ಥ ಖರ್ಚನ್ನು ಮಾಡುವ ಬದಲು, ಆ ಹಣವನ್ನು ಉಳಿತಾಯ ಮಾಡಿ ಮತ್ತು ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದು ಸಹ ಮುಖ್ಯ.

ಒಳ್ಳೆಯವರ ಸಹವಾಸ ಮಾಡಿ: ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಲು ಬಯಸಿದರೆ ಸಜ್ಜನರ ಸಹವಾಸ ಮಾಡಬೇಕು ಎಂದಿದ್ದಾರೆ ಚಾಣಕ್ಯ. ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಾಗಿರುವ ಜನರ ಸಹವಾಸ ಮಾಡಿದರೆ, ಅವರ ಸಕಾರಾತ್ಮಕ ಅಂಶಗಳು ನಿಮ್ಮನ್ನೂ ಆಕರ್ಷಿಸುತ್ತವೆ. ಇದು ನಿಮ್ಮ ನಡವಳಿಕೆ ಮತ್ತು ನಿರ್ಧಾರಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಜನರಿಂದ ದೂರವಿದ್ದು, ಉತ್ತಮರ ಸಹವಾಸ ಮಾಡಿ.

ಇದನ್ನೂ ಓದಿ: ಪ್ರತಿಯೊಬ್ಬ ಪುರುಷನು ಈ ವಿಚಾರಗಳನ್ನು ತನ್ನ ಹೆಂಡತಿಯಿಂದ ಮರೆಮಾಡಲೇಬೇಕು ಎನ್ನುತ್ತಾರೆ ಚಾಣಕ್ಯ

ಬಹು ಆದಾಯದ ಮೂಲಗಳನ್ನು ರಚಿಸಿ: ಒಬ್ಬ ವ್ಯಕ್ತಿ ಕೇವಲ ಒಂದು ಆದಾಯದ ಮೂಲವನ್ನು ಮಾತ್ರ ಅವಲಂಬಿಸಬಾರದು. ಒಂದೇ ಆದಾಯದ ಮೂಲವಿದ್ದರೆ ಉಳಿತಾಯ ಮಾಡಲು ಅಲ್ಲಿ ಏನು ಉಳಿಯುವುದಿಲ್ಲ. ಹಾಗಾಗಿ ಬಹು ಆದಾಯದ ಮೂಲಗಳನ್ನು ರಚಿಸಬೇಕು. ಬಹು ಆದಾಯದ ಮೂಲಗಳು ನಿಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ. ಚಿಕ್ಕ ವಯಸ್ಸಿನಿಂದಲೇ ಈ ದಿಕ್ಕಿನಲ್ಲಿ ಶ್ರಮಿಸುವವರು ಭವಿಷ್ಯದಲ್ಲಿ ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಸೋಮರಿತನವನ್ನು ಬಿಟ್ಟುಬಿಡಿ: ಎಂದರೆ ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮ ಹೊಂದಿರುವ ವ್ಯಕ್ತಿಗಳು ಶ್ರೀಮಂತರಾಗುತ್ತಾರೆ. ಅದೇ ಇಂದಿನ ಕೆಲಸಗಳನ್ನು ನಾಳೆಯವರೆಗೆ ಮುಂದೂಡಿ ಸೋಮಾರಿತನವನ್ನು ತೋರುವವರು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಸೋಮಾರಿತನವನ್ನು ಬಿಟ್ಟು, ಕೆಲಸದ ಮೇಲೆ ಗಮನಹರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Wed, 8 July 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ