ಚಿರಂಜೀವಿಗಾಗಿ ಬಂದಿದ್ದ ಹಾಲಿವುಡ್ ನಿರ್ದೇಶಕ-ನಿರ್ಮಾಪಕ, ಸಿನಿಮಾ ಏನಾಯ್ತು?
Megastar Chiranjeevi: ಹಿರಿಯ ನಿರ್ದೇಶಕ ಕೆ ಬಾಲಚಂದರ್ ಅಂಥಹವರೇ ‘ಕಮಲ್ ಹಾಸನ್ ಹಾಗೂ ರಜನೀಕಾಂತ್ ಇಬ್ಬರ ಸಂಗಮ ಚಿರಂಜೀವಿ’ ಎಂದಿದ್ದರು. ಚಿರಂಜೀವಿ ಆಗ ಅದೆಷ್ಟು ದೊಡ್ಡ ನಟರಾಗಿದ್ದರು ಎಂದರೆ ಹಾಲಿವುಡ್ ನಿರ್ದೇಶಕರೊಬ್ಬರು ಚಿರಂಜೀವಿ ಜೊತೆಗೆ ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆಯನ್ನು ಹಾಗೂ ದೊಡ್ಡ ತಂಡವನ್ನೇ ಕಟ್ಟಿಕೊಂಡು ಬಂದಿದ್ದರು.

ಮೆಗಾಸ್ಟಾರ್ ಚಿರಂಜೀವಿ (Chiranjeevi), ತೆಲುಗು ಚಿತ್ರರಂಗದ ಹಿರಿಯ ನಟ. ಈಗಿನ ಹೊಸ ಪ್ಯಾನ್ ಇಂಡಿಯಾ ಅಲೆಯಲ್ಲಿ ತುಸು ಹಿಂದಕ್ಕೆ ಸರಿದಿದ್ದಾರೆ. ಆದರೆ ಒಂದು ಸಮಯದಲ್ಲಿ ಚಿರಂಜೀವಿಗೆ ಸರಿ ಸಾಟಿ ಆಗುವವರು ಯಾರೊಬ್ಬರೂ ಇದ್ದಿದ್ದಿಲ್ಲ. ಬಾಲಿವುಡ್ನ ಬಾದ್ಶಾ ಅಮಿತಾಬ್ ಬಚ್ಚನ್ ಅವರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಚಿರಂಜೀವಿ ಭಾರತದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಹಿರಿಯ ನಿರ್ದೇಶಕ ಕೆ ಬಾಲಚಂದರ್ ಅಂಥಹವರೇ ‘ಕಮಲ್ ಹಾಸನ್ ಹಾಗೂ ರಜನೀಕಾಂತ್ ಇಬ್ಬರ ಸಂಗಮ ಚಿರಂಜೀವಿ’ ಎಂದಿದ್ದರು. ಚಿರಂಜೀವಿ ಆಗ ಅದೆಷ್ಟು ದೊಡ್ಡ ನಟರಾಗಿದ್ದರು ಎಂದರೆ ಹಾಲಿವುಡ್ ನಿರ್ದೇಶಕರೊಬ್ಬರು ಚಿರಂಜೀವಿ ಜೊತೆಗೆ ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆಯನ್ನು ಹಾಗೂ ದೊಡ್ಡ ತಂಡವನ್ನೇ ಕಟ್ಟಿಕೊಂಡು ಬಂದಿದ್ದರು.
90ರ ದಶಕದಲ್ಲಿ ಚಿರಂಜೀವಿಗೆ ಎದುರು ನಿಲ್ಲುವವರೇ ಇರಲಿಲ್ಲ. ಯಾವ ಸಿನಿಮಾ ಆದರೂ ಸರಿ ಚಿರಂಜೀವಿ ಇದ್ದಾರೆಂದರೆ ಸಾಕು ಸೂಪರ್ ಹಿಟ್ ಆಗಿ ಬಿಡುತ್ತಿದ್ದ ಸಮಯವದು. ಅದೇ ಸಮಯದಲ್ಲಿ ಚಿರಂಜೀವಿ ಅವರ ಜೊತೆಗೆ ಸಿನಿಮಾ ಮಾಡಲು ಹಾಲಿವುಡ್ನಿಂದ ಖ್ಯಾತ ನಿರ್ದೇಶಕರೊಬ್ಬರು ಬಂದಿದ್ದರು. ಅವರ ಬೆನ್ನಿಗೆ ದೊಡ್ಡ ಹಾಲಿವುಡ್ ನಿರ್ಮಾಣ ಸಂಸ್ಥೆಯೇ ಇತ್ತು.
ಈ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಜೋಡಿ ಪುಷ್ಕರ್ ಗಾಯತ್ರಿ, ಆ ಸಿನಿಮಾದ ಬೃಹತ್ತತೆಯ ಬಗ್ಗೆ ಮಾತನಾಡಿದ್ದಾರೆ. 90ರ ದಶಕಲ್ಲಿಯೇ ಆ ಸಿನಿಮಾಕ್ಕೆ ಸುಮಾರು 40 ಕೋಟಿ ಖರ್ಚು ಮಾಡಲು ರೆಡಿ ಆಗಿದ್ದರು. ಸಿನಿಮಾದ ನಿರ್ದೇಶಕರ ತಂಡದಲ್ಲಿ ಗಾಯತ್ರಿ ಸೇರಿಕೊಂಡರೆ ಕ್ಯಾಮೆರಾ ತಂಡದಲ್ಲಿ ನಾನು (ಪುಷ್ಕರ್) ಸೇರಿಕೊಂಡಿದ್ದೆ. ಆ ತಂಡದಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್ ಇಂದ ಹಲವು ಪ್ರತಿಭಾವಂತರು, ಖ್ಯಾತ ನಾಮ ತಂತ್ರಜ್ಞರು ಬಂದಿದ್ದರು. ಸಿನಿಮಾಕ್ಕೆ ‘ದಿ ರಿಟರ್ನ್ ಆಫ್ ಥೀಫ್ ಆಫ್ ಬಾಗ್ದಾದ್’ ಎಂದು ಹೆಸರಿಡಲಾಗಿತ್ತು’ ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬಾಕ್ಸ್ ಆಫೀಸ್‌ನಲ್ಲಿ ಮೆಗಾ ಫೈಟ್; ರಜನಿಕಾಂತ್ ಜೈಲರ್ ಜೊತೆ ಚಿರಂಜೀವಿ ವಿಶ್ವಂಭರ; ಕ್ಲ್ಯಾಶ್?
ಚಿರಂಜೀವಿ ಅವರು ಆ ಸಿನಿಮಾದ ನಾಯಕನಾಗಿದ್ದರು. ಸಿನಿಮಾಕ್ಕೆ ಆಗಿನ ಕಾಲದ ಅತ್ಯುತ್ತಮ ಕ್ಯಾಮೆರಾಗಳನ್ನು ಬಳಲಾಗಿತ್ತು. ಸುಮಾರು ಮೂರು-ನಾಲ್ಕು ತಿಂಗಳು ನಾವು ಶೂಟ್ ಮಾಡಿದೆವು. ಅಜಂತಾ-ಎಲ್ಲೋರ, ರಾಜಸ್ಥಾನ, ಜೈಸ್ಮೆಲ್ಲರ್, ಜೈಪುರ ಇನ್ನೂ ಕೆಲವು ಕಡೆಗಳಲ್ಲೆಲ್ಲ ನಾವು ಶೂಟಿಂಗ್ ಮಾಡಿದ್ದೆವು. ಆ ಸಿನಿಮಾಕ್ಕೆ ಇಬ್ಬರು ನಿರ್ದೇಶಕರಿದ್ದರು. ಭಾರತದ ನಿರ್ದೇಶಕರಾಗಿ ಸುರೇಶ್ ಕೃಷ್ಣ ಮತ್ತು ಒಬ್ಬರು ಹಾಲಿವುಡ್ ನಿರ್ದೇಶಕರು ಸಹ ಇದ್ದರು. ಆರಂಭದಲ್ಲಿ ಚಿತ್ರೀಕರಣ ಚೆನ್ನಾಗಿ ಸಾಗಿತ್ತು. ಆದರೆ ಆ ಸಿನಿಮಾವನ್ನು ಬಳಿಕ ನಿಲ್ಲಿಸಲಾಯ್ತು’ ಎಂದಿದ್ದಾರು ಪುಷ್ಕರ್ ಮತ್ತು ಗಾಯತ್ರಿ.
ಪುಷ್ಕರ್ ಮತ್ತು ಗಾಯತ್ರಿ ಅವರದ್ದು ಬಲು ಜನಪ್ರಿಯ ನಿರ್ದೇಶಕ ಜೋಡಿ. ಬ್ಲಾಕ್ ಬಸ್ಟರ್ ಎನಿಸಿಕೊಂಡಿರುವ ವಿಜಯ್ ಸೇತುಪತಿ, ಆರ್ ಮಾಧವನ್ ನಟನೆಯ ‘ವಿಕ್ರಂ ವೇದ’ ಸಿನಿಮಾ ನಿರ್ದೇಶಿಸಿದ್ದು ಇವರೆ. ದಶಕಗಳಿಂದಲೂ ಇವರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




