AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡಗೆ ಸಂಕಷ್ಟ: ತನಿಖೆಗೆ ಆದೇಶಿಸಿದ ಕೋರ್ಟ್, ಏನಿದು ಕೇಸ್?

ಮಾಜಿ ಶಾಸಕ, ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರ ವಿರುದ್ಧ ಕೇಳಿಬಂದಿದ್ದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಇದೀಗ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿಂದೆ ಅಂದರೆ 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ವೇಳೆ ಕೇಳಿಬಂದಿದ್ದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಈ ಬಗ್ಗೆ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡಗೆ ಸಂಕಷ್ಟ: ತನಿಖೆಗೆ ಆದೇಶಿಸಿದ ಕೋರ್ಟ್, ಏನಿದು ಕೇಸ್?
Preetham Gowda
ರಮೇಶ್​ ಎಮ್​.
| Edited By: |

Updated on: Aug 19, 2026 | 5:32 PM

Share

ಬೆಂಗಳೂರು, (ಆಗಸ್ಟ್ 19): ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡಗೆ (preetham gowda) ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಶಾಸಕರಾಗಿದ್ದಾಗ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ತನಿಖೆಗೆ ಕೋರ್ಟ್ ಆದೇಶಿಸಿದೆ. 2018 ಹಾಗೂ 2023ರ ಚುನಾವಣಾ ಪ್ರಮಾಣಪತ್ರ ಉಲ್ಲೇಖಿಸಿ ಕುಟುಂಬದ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಸಂದೀಪ್ ಬಿ.ಪಿ.ಸಲ್ಲಿಸಿದ್ದ ಖಾಸಗಿ ದೂರು ನೀಡಿದ್ದರು. ಇಂದು (ಆಗಸ್ಟ್ 19) ಇದನ್ನು ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ಕೊರ್ಟ್, ಎಫ್ಐಆರ್ ದಾಖಲಿಸಿ ತನಿಖಾ ವರದಿ ಸಲ್ಲಿಸಲು ಹಾಸನ ಲೋಕಾಯುಕ್ತ ಎಸ್​​ಪಿ ಸೂಚಿಸಿ ಆದೇಶ ಹೊರಡಿಸಿದೆ.

Follow Us