AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ

Big investor Ramdeo Agrawal makes big prediction on Indian equity market: ಭಾರತದ ಷೇರು ಬಜಾರು ಮುಂದಿನ ಐದು ವರ್ಷದವರೆಗೆ ಹೂಡಿಕೆದಾರರಿಗೆ ವಾರ್ಷಿಕ ಶೇ. 15ರಷ್ಟು ಲಾಭ ತರಬಹುದು ಎಂದು ಹಣಕಾಸು ತಜ್ಞ ರಾಮದೇವ್ ಅಗರ್ವಾಲ್ ಹೇಳಿದ್ದಾರೆ. ಭಾರತದ ಆರ್ಥಿಕತೆ ಈ ಅವಧಿಯಲ್ಲಿ ಶೇ. 7.5ರಿಂದ 8.5ರಂತೆ ಬೆಳೆಯುತ್ತದೆ. ಕಾರ್ಪೊರೇಟ್ ಗಳಿಕೆ ಶೇ. 13-14ರಷ್ಟಿರುತ್ತೆ. ಇಂಡೆಕ್ಸ್ ಫಂಡ್​​ಗಳೇ ಶೇ. 14ರಷ್ಟು ರಿಟರ್ನ್ ನೀಡಬಹುದು ಎನ್ನುತ್ತಾರೆ ಅಗರ್ವಾಲ್.

ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 19, 2026 | 5:33 PM

Share

ನವದೆಹಲಿ, ಆಗಸ್ಟ್ 19: ಭಾರತದ ಈಕ್ವಿಟಿ ಮಾರುಕಟ್ಟೆ (stock market) ಕಳೆದ ಒಂದು ಒಂದೂವರೆ ವರ್ಷದಿಂದ ಆಮೆಯಂತೆ ಸಾಗುತ್ತಿದೆಯಾದರೂ ದಶಕಗಳಿಂದ ಇದು ಹೂಡಿಕೆದಾರರ ಪಾಲಿಗೆ ಸೂಪರ್ ಫಾಸ್ಟ್ ಕುದುರೆಯಾಗಿದೆ. ಮುಂದಿನ ದಿನಗಳಲ್ಲೂ ಭಾರತದ ಮಾರುಕಟ್ಟೆ ಅದ್ವಿತೀಯವಾಗಿ ಹೆಚ್ಚಬಹುದು ಎಂದು ಅನೇಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್‌ನ ಸಹ-ಸ್ಥಾಪಕ ರಾಮ್‌ದೇವ್ ಅಗರ್‌ವಾಲ್ (Ramdeo Agrawal) ಅವರು ಈಕ್ವಿಟಿ ಮಾರುಕಟ್ಟೆಯ ಭವಿಷ್ಯದ ಬಗ್ಗೆ ಬಹಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ 5 ವರ್ಷಗಳಲ್ಲಿ ಈಕ್ವಿಟಿ ಹೂಡಿಕೆಗಳು ಸುಮಾರು 15% ರಷ್ಟು ವಾರ್ಷಿಕ ಆದಾಯವನ್ನು (CAGR) ನೀಡಬಹುದು ಎಂದು ರಾಮದೇವ್ ಅಗರ್ವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಆರ್ಥಿಕತೆಯ ಬೆಳವಣಿಗೆ: ಭಾರತದ ಆರ್ಥಿಕತೆಯು ದೃಢವಾಗಿ ಬೆಳೆಯುತ್ತಿದೆ. ಮುಂದಿನ ಐದು ವರ್ಷದಲ್ಲಿ ಜಿಡಿಪಿ ಶೇ. 7.50-8.50 ರ ವಾರ್ಷಿಕ ದರದಲ್ಲಿ ಬೆಳೆಯಲಿದೆ. ಮತ್ತು ಇದು ಮಾರುಕಟ್ಟೆಯ ಬೆಳವಣಿಗೆಗೆ ಬಲವಾದ ಬೆಂಬಲವನ್ನು ನೀಡುತ್ತದೆ ಎಂಬುದು ಅವರ ವಿಶ್ಲೇಷಣೆ.

ಕಾರ್ಪೊರೇಟ್ ಗಳಿಕೆ (Earnings): ಭಾರತದ ಕಾರ್ಪೊರೇಟ್ ಕಂಪನಿಗಳ ಆದಾಯ ಮತ್ತು ಲಾಭದ ಬೆಳವಣಿಗೆಯು ಮಾರುಕಟ್ಟೆಯ ಏರಿಕೆಗೆ ಮುಖ್ಯ ಚಾಲಕವಾಗಲಿದೆ ಎಂದು ಅವರು ನಂಬಿದ್ದಾರೆ. ಅವರ ಪ್ರಕಾರ, ಕಾರ್ಪೊರೇಟ್ ಕಂಪನಿಗಳ ಸರಾಸರಿ ವಾರ್ಷಿಕ ಆದಾಯ ಬೆಳವಣಿಗೆ ಶೇ. 13-14ರಷ್ಟಿರಬಹುದು.

ಇದನ್ನೂ ಓದಿ: ಪರಿಸರಸ್ನೇಹಿ ಇಂಧನದ ಕಮರ್ಷಿಯಲ್ ವಾಹನಗಳಿಗೆ ವಯೋಮಿತಿ 5 ವರ್ಷ ಹೆಚ್ಚಿಸಲು ಸರ್ಕಾರ ಪ್ರಸ್ತಾಪ

ಭಾರತದ ಈಕ್ವಿಟಿ ಮಾರುಕಟ್ಟೆಯು ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇ 15ರಷ್ಟು ಲಾಭ ತರಬಹುದು. ಇಂಡೆಕ್ಸ್ ಫಂಡ್​ಗಳೇ ಕಡಿಮೆ ಎಂದರೂ ಶೇ. 12-14ರಷ್ಟು ರಿಟರ್ನ್ ತರಬಹುದು ಎನ್ನುವುದು ರಾಮದೇವ್ ಅಗರ್ವಾಲ್ ಅವರ ಅನಿಸಿಕೆ.

2035ರೊಳಗೆ ನಿಫ್ಟಿ 50,000 ಗಡಿಯಾಚೆ?

ರಾಮದೇವ್ ಅಗರ್ವಾಲ್ ಮತ್ತೊಂದು ಪ್ರಮುಖ ಅಂದಾಜು ಮಾಡಿದ್ದಾರೆ. 24,000 ಅಂಕಗಳ ಆಸುಪಾಸಿನಲ್ಲಿ ಹೊಯ್ದಾಡುತ್ತಿರುವ ನಿಫ್ಟಿ ಇಂಡೆಕ್ಸ್ ಮುಂದಿನ 9 ವರ್ಷದಲ್ಲಿ ಕನಿಷ್ಠವೆಂದರೂ ಎರಡು ಪಟ್ಟು ಹೆಚ್ಚಾಗಲಿದೆಯಂತೆ. ಅವರ ಪ್ರಕಾರ, 2035ರೊಳಗೆಯೇ ನಿಫ್ಟಿ 50,000 ಅಂಕಗಳ ಗಡಿ ಮುಟ್ಟಲಿದೆ.

ಇಂಡೆಕ್ಸ್ ಫಂಡ್​ಗಳಲ್ಲಿ 5 ವರ್ಷ ಹೂಡಿಕೆ ಮಾಡಿದರೆ?

ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಬಹಳ ಸುರಕ್ಷಿತ ಮಾರ್ಗವೆಂದರೆ ಇಂಡೆಕ್ಸ್ ಫಂಡ್​ಗಳು. ರಾಮದೇವ್ ಅಗರ್ವಾಲ್ ಹೇಳಿದಂತೆ ಈ ಇಂಡೆಕ್ಸ್ ಫಂಡ್ ಶೇ. 14ರಷ್ಟು ವಾರ್ಷಿಕ ರಿಟರ್ನ್ಸ್ ತರಬಲ್ಲುದು ಎಂದು ಭಾವಿಸೋಣ. ಇದರಲ್ಲಿ 10 ಲಕ್ಷ ರೂ ಹಣವನ್ನು 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಅದರ ಲಾಭದ ಲೆಕ್ಕಾಚಾರ ಹೀಗಿದೆ:

  • ಹೂಡಿಕೆ ಅವಧಿ: 5 ವರ್ಷ
  • ವಾರ್ಷಿಕ ಲಾಭ: ಶೇ. 14
  • ಹೂಡಿಕೆ ಮೊತ್ತ: 10 ಲಕ್ಷ ರೂ

ಐದು ವರ್ಷದ ನಂತರ ಈ ಹತ್ತು ಲಕ್ಷ ರೂ ಹೂಡಿಕೆಯು 19-20 ಲಕ್ಷ ರೂ ಆಗಿರುತ್ತದೆ. ಐದು ವರ್ಷದಲ್ಲಿ ಹಣ ಡಬಲ್ ಆಗುತ್ತದೆ.

ಇದನ್ನೂ ಓದಿ: ಆರ್​ಬಿಐ ಹೊಸ ನಿಯಮಗಳ ಪ್ರಸ್ತಾಪ; ಸಾಲಗಳ ಇಎಂಐ ಮೇಲಾಗುವ ಪರಿಣಾಮಗಳೇನು?

ಹೂಡಿಕೆ ಮಾಡುವವರು ಗಮನಿಸಬೇಕಾದ ಅಂಶಗಳು

  • ದೀರ್ಘಾವಧಿಯ ಹೂಡಿಕೆ: ಅಲ್ಪಾವಧಿಯ ಏರಿಳಿತಗಳಿಗೆ ಹೆದರದೆ, ಮಾರುಕಟ್ಟೆಯಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದು ಲಾಭದಾಯಕ.
  • ಗುಣಮಟ್ಟದ ಷೇರುಗಳು: ಕಂಪನಿಗಳ ಬೆಳವಣಿಗೆಯ ಸಾಮರ್ಥ್ಯವನ್ನು ಗಮನಿಸಿ, ಬಲವಾದ ಅಡಿಪಾಯವಿರುವ ಗುಣಮಟ್ಟದ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ.

ಗಮನಿಸಿ: ಈಕ್ವಿಟಿ ಮಾರುಕಟ್ಟೆಯು ಯಾವಾಗಲೂ ಅಪಾಯಗಳಿಗೆ ಒಳಪಟ್ಟಿರುತ್ತದೆ. ಮಾರುಕಟ್ಟೆಯ ತಜ್ಞರು ನೀಡುವ ಇಂತಹ ಅಂದಾಜುಗಳು ಕೇವಲ ಭವಿಷ್ಯದ ನಿರೀಕ್ಷೆಗಳಾಗಿರುತ್ತವೆ, ಖಚಿತವಾದ ಆದಾಯದ ಭರವಸೆಯಲ್ಲ. ಹೂಡಿಕೆ ಮಾಡುವ ಮುನ್ನ ನಿಮ್ಮ ಸ್ವಂತ ಆರ್ಥಿಕ ಗುರಿಗಳು ಮತ್ತು ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು (Risk Appetite) ಪರಿಗಣಿಸಿ, ಅಗತ್ಯವಿದ್ದರೆ ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರತಿಭಟನಾ ಮೆರವಣಿಗೆ ವೇಳೆ ತೇಜಸ್ವಿ ಯಾದವ್ ಪೊಲೀಸ್ ವಶಕ್ಕೆ
ಪ್ರತಿಭಟನಾ ಮೆರವಣಿಗೆ ವೇಳೆ ತೇಜಸ್ವಿ ಯಾದವ್ ಪೊಲೀಸ್ ವಶಕ್ಕೆ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?