AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ಹೊಸ ನಿಯಮಗಳ ಪ್ರಸ್ತಾಪ; ಸಾಲಗಳ ಇಎಂಐ ಮೇಲಾಗುವ ಪರಿಣಾಮಗಳೇನು?

New RBI Rules, How Your Home, Personal Loan EMIs Will Change In 2027: ಭಾರತೀಯ ರಿಸರ್ವ್ ಬ್ಯಾಂಕ್ ಫ್ಲೋಟಿಂಗ್ ರೇಟ್ ಸಾಲಗಳ ನಿಯಮದಲ್ಲಿ ಬದಲಾವಣೆ ತರುವ ನಿಯಮ ರೂಪಿಸಿದೆ. ಇದು ಇನ್ನೂ ಪ್ರಸ್ತಾಪಿತ ಹಂತದಲ್ಲಿದ್ದು, ಈ ಕರಡು ನಿಯಮಕ್ಕೆ ಸಮ್ಮತಿ ಸಿಕ್ಕರೆ ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುತ್ತದೆ. ಹೋಮ್ ಲೋನ್, ಪರ್ಸನಲ್ ಲೋನ್, ಗೋಲ್ಡ್ ಲೋನ್​ಗಳ ಪೈಕಿ ಯಾವುದಕ್ಕೆ ಈ ನಿಯಮ ಅನ್ವಯ ಆಗುತ್ತದೆ?

ಆರ್​ಬಿಐ ಹೊಸ ನಿಯಮಗಳ ಪ್ರಸ್ತಾಪ; ಸಾಲಗಳ ಇಎಂಐ ಮೇಲಾಗುವ ಪರಿಣಾಮಗಳೇನು?
ಸಾಲImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 19, 2026 | 1:55 PM

Share

ನವದೆಹಲಿ, ಆಗಸ್ಟ್ 19: ಬ್ಯಾಂಕ್ ಇಎಂಐಗಳ ಮೇಲೆ ಪರಿಣಾಮ ಬೀರಬಹುದಾದಂತಹ ಒಂದು ನಿಯಮ ಬದಲಾವಣೆಯನ್ನು ಆರ್‌ಬಿಐ (RBI) ಮಾಡಲು ಹೊರಟಿದೆ. ಬಡ್ಡಿದರ ಬದಲಾವಣೆ ಎಷ್ಟು ವೇಗವಾಗಿ ಆಗುತ್ತದೆ ಎನ್ನುವುದು ಈ ಪ್ರಸ್ತಾಪಿತ ನಿಯಮವು ಹೇಳುತ್ತದೆ. ಫ್ಲೋಟಿಂಗ್-ರೇಟ್ (Floating-rate) ಸಾಲಗಳ (ಗೃಹ ಸಾಲ) ಬಡ್ಡಿ ದರಗಳ ಬದಲಾವಣೆ ಗ್ರಾಹಕರಿಗೆ ಶೀಘ್ರವಾಗಿ ತಲುಪುವಂತೆ ಮಾಡಲು ಹೊಸ ಕರಡು ನಿಯಮಾವಳಿಯನ್ನು (Draft Framework) ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದೆ. ಸದ್ಯ ಇದು ಇನ್ನೂ ಪ್ರಸ್ತಾಪಿತ ಹಂತದಲ್ಲಿದೆ. ಇದು ಜಾರಿಯಾಗಲು ಐದಾರು ತಿಂಗಳಾದರೂ ಆಗಬಹುದು.

ಮೂರು ತಿಂಗಳಿಗೊಮ್ಮೆ ಬಡ್ಡಿದರ ಬದಲಾವಣೆ

ಪ್ರಸ್ತುತ ಹೆಚ್ಚಿನ ಫ್ಲೋಟಿಂಗ್-ರೇಟ್ ಗೃಹ ಸಾಲಗಳ ಬಡ್ಡಿದರವನ್ನು ವರ್ಷಕ್ಕೊಮ್ಮೆ ಮಾತ್ರ ಬ್ಯಾಂಕುಗಳು ಪರಿಶೀಲಿಸಿ ಬದಲಾಯಿಸುತ್ತವೆ (Reset). ಇದರಿಂದ ಆರ್‌ಬಿಐ ರೆಪೋ ದರ ಇಳಿಸಿದರೂ ಅದರ ಲಾಭ ಗ್ರಾಹಕರಿಗೆ ಸಿಗಲು ತಿಂಗಳುಗಳೇ ಕಾಯಬೇಕಾಗುತ್ತದೆ. ಪ್ರಸ್ತಾಪಿಸಲಾಗಿರುವ ಹೊಸ ನಿಯಮದ ಪ್ರಕಾರ, ಫ್ಲೋಟಿಂಗ್-ರೇಟ್ ಸಾಲಗಳ ಬಡ್ಡಿದರವನ್ನು ಗರಿಷ್ಠ 3 ತಿಂಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಇದರಿಂದ ಆರ್‌ಬಿಐ ರೆಪೋ ದರ ಇಳಿಸಿದಾಗ ಅಥವಾ ಹೆಚ್ಚಿಸಿದಾಗ, ಸಾಲಗಾರರ EMI ಮೇಲಾಗುವ ಪರಿಣಾಮ ತಕ್ಷಣವೇ ಸಿಗಲಿದೆ.

ಈ ಪ್ರಸ್ತಾವನೆಗೆ ಸಲಹೆ ಮತ್ತು ಅಭಿಪ್ರಾಯ ನೀಡಲು 2026ರ ಸೆಪ್ಟೆಂಬರ್ 11 ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂತಿಮಗೊಂಡ ನಂತರ, ಈ ನಿಯಮಗಳು 2027ರ ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.

ಇದನ್ನೂ ಓದಿ: ನಿಮ್ಮ ಸಂಬಳದ ಎಷ್ಟು ಮೊತ್ತವನ್ನು ಗೃಹ ಸಾಲಕ್ಕೆ ಮೀಸಲಿಡುವುದು ಸೂಕ್ತ

ಫ್ಲೋಟಿಂಗ್ ರೇಟ್ ಎಂದರೇನು?

ಸಾಲದ ಬಡ್ಡಿಯಲ್ಲಿ ಎರಡು ವಿಧ ಇರುತ್ತದೆ. ಫ್ಲೋಟಿಂಗ್ ರೇಟ್ ಮತ್ತು ಫಿಕ್ಸೆಡ್ ರೇಟ್. ಫಿಕ್ಸೆಡ್ ರೇಟ್​ನಲ್ಲಿ ಸಾಲಕ್ಕೆ ಪೂರ್ವನಿಗದಿತ ಬಡ್ಡಿದರ ಇರುತ್ತದೆ. ಸಾಲದ ಪೂರ್ಣ ಅವಧಿಯಾದ್ಯಂತ ಇದೇ ದರ ಇರುತ್ತದೆ. ಫ್ಲೋಟಿಂಗ್ ರೇಟ್ ಎಂದರೆ ಮಧ್ಯೆ ಮಧ್ಯೆ ದರ ಬದಲಾವಣೆಗೆ ಅವಕಾಶ ಇರುತ್ತದೆ. ಆರ್​ಬಿಐ ರೆಪೋ ದರ ಬದಲಾಯಿಸಿದಾಗ ಬ್ಯಾಂಕುಗಳೂ ತಮ್ಮ ಬೆಂಚ್​ಮಾರ್ಕ್ ರೇಟ್​ಗಳನ್ನು ಬದಲಾಯಿಸಬಹುದು. ಆಗ ಬಡ್ಡಿದರ ಪರಿಷ್ಕರಣೆ ಆಗುತ್ತದೆ. ಗೃಹ ಸಾಲಗಳಲ್ಲಿ ಈ ಎರಡು ಆಯ್ಕೆಗಳು ಇರುತ್ತವೆ.

ವೈಯಕ್ತಿಕ ಮತ್ತು ವಾಹನ ಸಾಲಗಳ ಮೇಲಾಗುವ ಪರಿಣಾಮ

ವೈಯಕ್ತಿಕ ಸಾಲ (Personal Loan) ಮತ್ತು ವಾಹನ ಸಾಲಗಳು (Auto Loan) ಹೆಚ್ಚಾಗಿ ಸ್ಥಿರ ಬಡ್ಡಿದರ (Fixed-rate) ಹೊಂದಿರುತ್ತವೆ. ಆದ್ದರಿಂದ, ಚಾಲ್ತಿಯಲ್ಲಿರುವ ವೈಯಕ್ತಿಕ ಸಾಲಗಳ EMI ಗಳ ಮೇಲೆ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಹೊಸ ಸಾಲ ಪಡೆಯುವವರಿಗೆ ಬ್ಯಾಂಕುಗಳು ಬೆಂಚ್‌ಮಾರ್ಕ್ ದರ ಮತ್ತು ಮರುಹೊಂದಿಕೆ ದಿನಾಂಕಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಾಗುತ್ತದೆ.

ಇದನ್ನೂ ಓದಿ: Income Tax Dept: ಸಂಶಯಾಸ್ಪದ ವಿದೇಶಿ ಹಣ ರವಾನೆ: ದೇಶಾದ್ಯಂತ ಪರಿಶೀಲನೆ ಆರಂಭಿಸಿದ ಆದಾಯ ತೆರಿಗೆ ಇಲಾಖೆ

ಹಾಲಿ ಗೃಹ ಸಾಲಗಾರರಿಗೆ ಏನೆಲ್ಲಾ ಬದಲಾವಣೆ?

ಪ್ರಸ್ತುತ ಗೃಹ ಸಾಲ ಹೊಂದಿರುವವರಿಗೆ ಏನೂ ಪರಿಣಾಮ ಇಲ್ಲ. ಬ್ಯಾಂಕುಗಳು ಹಾಲಿ ಸಾಲಗಳನ್ನು 2029ರ ಏಪ್ರಿಲ್ 1 ರೊಳಗೆ ಗ್ರಾಹಕರ ಒಪ್ಪಿಗೆಯೊಂದಿಗೆ ಹೊಸ ನಿಯಮಾವಳಿಗೆ ಬದಲಾಯಿಸಲಾಗುತ್ತದೆ (Migrate). ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಬ್ಯಾಂಕುಗಳು ವಿಧಿಸುವಂತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ