ತಮಿಳುನಾಡಿಗೆ ಕೆಆರ್ಎಸ್ನಿಂದ ನೀರು ಹರಿಸಲಾಗ್ತಿದ್ಯಾ?: ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?
Cauvery Water Dispute: ಕೆಆರ್ ಎಸ್‌ನಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣೆ ನಮ್ಮ ಪ್ರಮುಖ ಜವಾಬ್ದಾರಿ ಎಂದು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮಂಡ್ಯ ಹಾಗೂ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಹಿತವನ್ನು ಕಾಯುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 19: ನೆರೆ ರಾಜ್ಯ ತಮಿಳುನಾಡಿಗೆ ಕೆಆರ್ಎಸ್ನಿಂದ ನೀರು ಬಿಟ್ಟಿದ್ದಾರೆಂದು ಬಿಜೆಪಿ ಆರೋಪ ವಿಚಾರ ಸಂಬಂಧ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ಅವರು ಹೇಳಲಿ ತೊಂದರೆ ಇಲ್ಲ. ಮಂಡ್ಯ, ಕಾವೇರಿ ಅಚ್ಚುಕಟ್ಟು ನನ್ನದು. ಪರಿಸರ, ಪ್ರಕೃತಿ ಜೊತೆ ನಾವು ಆಟ ಆಡುವುದಕ್ಕೆ ಆಗುವುದಿಲ್ಲ. ಗೋರೂರು ಹಾಗೂ ಕಬಿನಿಯಿಂದ ಜಮೀನಿಗೆ ನೀರು ಬಿಟ್ಟಿದ್ದೇವೆ. ಹಾರಂಗಿ ಜಲಾಶಯದಿಂದಲೂ ನೀರು ಬಿಡಲು ಹೇಳಿದ್ದೇವೆ. ರೈತರ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿ. CWMA, CWRC ಸಭೆ ಬಗ್ಗೆ ಲೀಗಲ್ ಟೀಂ ಜತೆ ಮಾತನಾಡಿದ್ದೇನೆ. ಸಮಾಧಾನವಾಗಿ ಹೋಗಿ ರಾಜ್ಯದ ರೈತರಿಗೆ ಒಳ್ಳೆಯದು ಮಾಡಬೇಕು ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

