Personality Test: ನಿಮ್ಮ ಕಿವಿಯ ಆಕಾರವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸಬಹುದು

|

Updated on: Jul 20, 2023 | 1:27 PM

ನಿಮ್ಮ ಕಿವಿಯ ಆಕಾರಕ್ಕನುಗುಣವಾಗಿ ನೀವು ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂಬುದನ್ನು ಒಮ್ಮೆ ಪರೀಕ್ಷಿಸಿ ನೋಡಿ.

Personality Test: ನಿಮ್ಮ ಕಿವಿಯ ಆಕಾರವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸಬಹುದು
Personality Test
Image Credit source: The sun
Follow us on

ನಿಮ್ಮ ಕಿವಿಯ ಆಕಾರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಕಿವಿಯ ಆಕಾರವು ಬೇರೆ ಬೇರೆಯಾಗಿರುತ್ತದೆ. ಕಿವಿಯ ಆಕಾರವು ದೊಡ್ಡ, ಸಣ್ಣ ಅಥವಾ ಮೊನಚಾಗಿಯೂ ಇರುತ್ತದೆ. ಆದ್ದರಿಂದ ನಿಮ್ಮ ಕಿವಿಯ ಆಕಾರಕ್ಕನುಗುಣವಾಗಿ ನೀವು ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂಬುದನ್ನು ಒಮ್ಮೆ ಪರೀಕ್ಷಿಸಿ ನೋಡಿ.

ಕಿವಿಯ ಆಕಾರಕ್ಕನುಗುಣವಾಗಿ  ವ್ಯಕ್ತಿತ್ವದ ಲಕ್ಷಣಗಳು:

1. ದೊಡ್ಡ ಕಿವಿಗಳು:

ನೀವು ದೊಡ್ಡ ಆಕಾರದ ಕಿವಿಗಳನ್ನು ಹೊಂದಿದ್ದರೆ, ನೀವು ಯಾವಾಗಲೂ ನಿಮ್ಮ ಜೀವನದ ಯಾವುದೇ ಸಂದರ್ಭಗಳನ್ನು ಶಾಂತವಾಗಿ ಮತ್ತು ಸ್ಥಿರವಾಗಿ ನಡೆಸಿಕೊಂಡು ಹೋಗುತ್ತೀರಿ ಎಂಬುದನ್ನು ಬಹಿರಂಗಪಡಿಸುತ್ತದೆ. ಜೊತೆಗೆ ನೀವು ಸುಲಭವಾಗಿ ಯಾವುದನ್ನು ಬಿಟ್ಟುಕೊಡುವುದಿಲ್ಲ ಅಥವಾ ನಿರಾಶೆಗೊಳ್ಳುವುದಿಲ್ಲ. ನೀವು ಸ್ವಾವಲಂಬಿಯಾಗಿದ್ದೀರಿ ಮತ್ತು ನಿಮ್ಮದೇ ಆದ ಕಠಿಣ ಸಂದರ್ಭಗಳನ್ನು ನಿಭಾಯಿಸಲು ಸಮರ್ಥರಾಗಿದ್ದು, ಭವಿಷ್ಯದ ಬಗ್ಗೆ ಕಡಿಮೆ ಚಿಂತಿಸುವ ವ್ಯಕ್ತಿತ್ವದವರು.

2. ಸಣ್ಣ ಕಿವಿಗಳು:

ಸಣ್ಣ ಕಿವಿಯ ಆಕಾರವನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಸಂಕೋಚ ಮತ್ತು ಅಂತರ್ಮುಖಿಯ ಕಡೆಗೆ ವಾಲುತ್ತಾರೆ. ನೀವು ಏಕಾಂಗಿಯಾಗಿ, ಕುಟುಂಬದೊಂದಿಗೆ ಅಥವಾ ನಿಕಟ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ಆನಂದಿಸುತ್ತೀರಿ. ನೀವು ಸೃಜನಶೀಲರು, ಗಮನಿಸುವವರು ಮತ್ತು ಇತರರಿಂದ ನಿಮ್ಮ ಬಗ್ಗೆ ಯಾವುದೇ ದೃಢೀಕರಣವನ್ನು ಬಯಸುವುದಿಲ್ಲ.

ಇದನ್ನೂ ಓದಿ: ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು

3. ರೌಂಡ್​​ ಕಿವಿಗಳು:

ಅಂದರೆ ಕಿವಿಯ ತುದಿ ಭಾಗದಲ್ಲಿ ಯಾವುದೇ ಆಕಾರ ಇರದೇ ಚರ್ಮಕ್ಕೆ ಅಂಟಿಕೊಂಡಂತೆ ಇದ್ದರೆ ಇವರು ಭಾವನಾತ್ಮಕವಾಗಿ ಶಕ್ತಿಯುತ ವ್ಯಕ್ತಿಗಳಾಗಿರುತ್ತಾರೆ. ನೀವು ಸಹಾನುಭೂತಿ ಮತ್ತು ತಿಳುವಳಿಕೆಯ ವ್ಯಕ್ತಿತ್ವವನ್ನು ಹೊಂದಿದ್ದೀರಿ, ಭಾವನೆಗಳಿಂದ ತೂಗಾಡುವ ಬದಲು ತರ್ಕ ಮತ್ತು ಕಾರಣದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

4. ಮೊನಚಾದ ಕಿವಿಗಳು:

ಮೊನಚಾದ ಕಿವಿಗಳನ್ನು ಹೊಂದಿರುವ ವ್ಯಕ್ತಿಗಳು ಅರ್ಥಗರ್ಭಿತ ಮತ್ತು ಕಾಲ್ಪನಿಕವಾಗಿರುತ್ತಾರೆ. ನೀವು ಜಗತ್ತನ್ನು ನೋಡುವ ವಿಶಿಷ್ಟ ವಿಧಾನವನ್ನು ಹೊಂದಿದ್ದೀರಿ ಮತ್ತು ಉತ್ತಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿದ್ದೀರಿ. ನೀವು ಬೌದ್ಧಿಕ, ಮಹತ್ವಾಕಾಂಕ್ಷೆಯ ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: