ಸಕಾರಾತ್ಮಕ ಯೋಚನೆ ಜತೆಗೆ ಜೀವನದಲ್ಲಿ ಹೆಚ್ಚು ಆಶಾವಾದಿಯಾಗಿರಲು ಇಲ್ಲಿವೆ 5 ಸಲಹೆಗಳು
ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಮೊದಲು ತಾಳ್ಮೆ ಅಗತ್ಯ. ಆದರೆ ಈ ತಜ್ಞರು ಸೂಚಿಸಿದ 5 ಸರಳ ವಿಧಾನಗಳೊಂದಿಗೆ ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಬಹುದು. ಹೇಗೆ? ಇಲ್ಲಿದೆ ಮಾಹಿತಿ.
ಜೀವನದಲ್ಲಿ ಪ್ರತಿ ನಿತ್ಯ ನಾವು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾದ ಮಾಹಿತಿ ನಮಗೆ ದೊರೆಯುತ್ತದೆ ಅದು ಯಾವ ವಿಷಯವಾದರೂ ಅಥವಾ ಎಲ್ಲಿಂದಲಾದರೂ ಆಗಿರಬಹುದು ಅವೆಲ್ಲವೂ ನಿಮ್ಮ ಮನಸ್ಸನ್ನು ಚಂಚಲ ಮಾಡಬಹುದು ಎಂಬುದರ ಬಗ್ಗೆ ನಿಮಗೆ ಅರಿವಿರಬಹುದು. ಇಂತಹ ವಿಷಯಗಳು ನಮನ್ನು ಸುಲಭವಾಗಿ ನಿರಾಶೆಗೆ ತಳ್ಳಿಬಿಡುತ್ತದೆ. ಅದರಿಂದ ನಾವು ಯೋಚನೆ ಮಾಡುವ ರೀತಿ, ನೀತಿ ಎಲ್ಲವೂ ಬದಲಾಗುತ್ತದೆ. ಇದರಿಂದ ನಮ್ಮ ಬದುಕಿನ ದೀರ್ಘಕಾಲಿನ ಅಥವಾ ಅಲ್ಪಾವಧಿಯ ಗುರಿಗಳನ್ನು ನಾವು ಮರೆತುಬಿಡುತ್ತೇವೆ. ಬದುಕಿನ ಸುಧಾರಣೆಗೆ ಯಾವುದೇ ಆಶಾವಾದ ಬೆಳೆಸಿಕೊಳ್ಳುವುದಕ್ಕೂ ನಮಗೆ ಕಷ್ಟಕರವೆನಿಸಬಹುದು. ಆದರೆ ಸಕಾರಾತ್ಮಕ ಮನಸ್ಥಿತಿ ಮತ್ತು ಮನೋಭಾವ ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ನಮ್ಮನ್ನು ಮುನ್ನೆಡೆಸುತ್ತದೆ. ಕೆಲಸದಲ್ಲಿ ನಮ್ಮ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಸಕಾರಾತ್ಮಕ ಯೋಚನೆಗಳು, ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ದೈನಂದಿನ ಸವಾಲುಗಳನ್ನು ಎದುರಿಸಲು ಅಡಿಪಾಯವಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಸಕಾರಾತ್ಮಕ ಚಿಂತನೆ ಏಕೆ ಮುಖ್ಯ, ಯಾವ ರೀತಿ ಯೋಚನೆ ಮಾಡಬೇಕು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಸಕಾರಾತ್ಮಕವಾಗಿ ಹೇಗೆ ಯೋಚಿಸಬೇಕು ಎಂಬುದನ್ನು ಅರ್ಥಮಾಡಿಸಲು ಹಿರಿಯ ಮನೋವೈದ್ಯೆ ಡಾ. ಜ್ಯೋತಿ ಕಪೂರ್ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಹೇಗೆ?
ಆಶಾವಾದಿ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಒಂದು ದಿನದ ಕೆಲಸವಲ್ಲ. ಇದು ಎಲ್ಲಾ ಸವಾಲುಗಳ ನಡುವೆ ನಾವು ಮಾಡುವ ದೈನಂದಿನ ಆಯ್ಕೆಯಾಗಿದೆ. ಅದರ ಜೊತೆಗೆ ತಾಳ್ಮೆಯಿಂದ, ಪ್ರಸ್ತುತ ಪರಿಸ್ಥಿತಿ ಅನುಕೂಲಕರವಾಗಿಲ್ಲದಿದ್ದರೂ ಸಹ ನೀವು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಮಾನಸಿಕವಾಗಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡಲು ತಜ್ಞರು ಸೂಚಿಸಿದ ಕೆಲವು ಮಾರ್ಗಗಳು ಇಲ್ಲಿವೆ.
1. ಕೃತಜ್ಞತೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ; ಕೃತಜ್ಞತೆಯು ಸಂತೋಷಕ್ಕೆ ಅತ್ಯಂತ ಶಕ್ತಿಯುತ ಔಷಧಿಗಳಲ್ಲಿ ಒಂದಾಗಿದೆ. ಪ್ರತಿದಿನ ಕೃತಜ್ಞತೆ ತಿಳಿಸುವುದನ್ನು ಅಭ್ಯಾಸ ಮಾಡಲು ಪ್ರಯತ್ನ ಮಾಡುವುದು ಒಳ್ಳೆಯದು. ನೀವು ಕೃತಜ್ಞರಾಗಿರುವ ಕನಿಷ್ಠ ಮೂರು ವಿಷಯಗಳನ್ನು ಪ್ರತಿದಿನ ಪಟ್ಟಿ ಮಾಡಿಕೊಳ್ಳಿ. ಜೊತೆಗೆ ನೀವು ಇಷ್ಟು ದಿನ ಕಳೆದ ಸಂತೋಷದ ಘಳಿಗೆಯನ್ನು ನೆನಪು ಮಾಡಿಕೊಳ್ಳಿ. ಇವೆಲ್ಲವೂ ನಿಮ್ಮನ್ನು ಶಾಂತ ಮತ್ತು ಸಂತೃಪ್ತಿಯಿಂದ ಇರಲು ಸಹಾಯ ಮಾಡುತ್ತದೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ನೀಡುವುದರ ಜೊತೆಗೆ ನಿಮ್ಮನ್ನು ಹುರಿದುಂಬಿಸುತ್ತದೆ. “ಇದು ನಿಮ್ಮ ಗಮನವನ್ನು ನಕಾರಾತ್ಮಕ ಅಂಶಗಳಿಂದ ಸಕಾರಾತ್ಮಕ ಯೋಚನಾ ರೀತಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದು ತಜ್ಞರು ಹೇಳುತ್ತಾರೆ.
2. ನಿಮ್ಮನ್ನು ಸಕಾರಾತ್ಮಕತೆಯಿಂದ ಸುತ್ತುವರೆದುಕೊಳ್ಳಿ: ನಿಮ್ಮ ಮನೆ ಅಥವಾ ಕಂಪನಿ ನಿಮಗೆ ಬಹಳಷ್ಟು ಮುಖ್ಯವಾಗಿದೆ ಮತ್ತು ನಿಮ್ಮ ಜೀವನದ ಪಥವನ್ನು ನಿರ್ಧರಿಸುತ್ತದೆ. ಹಾಗಾಗಿ ನಿಮ್ಮನ್ನು ಉತ್ತೇಜಿಸುವ, ಪ್ರೇರೇಪಿಸುವ ಮತ್ತು ಸಕಾರಾತ್ಮಕ ಯೋಚನಾ ಶಕ್ತಿಯನ್ನು ಬೆಂಬಲಿಸುವ ಜನರೊಂದಿಗೆ ನಿಮ್ಮನ್ನು ಸುತ್ತುವರೆದುಕೊಳ್ಳಿ. ನಕಾರಾತ್ಮಕ ಸುದ್ದಿ ಅಥವಾ ವಿಷಕಾರಿ ವ್ಯಕ್ತಿಗಳಂತಹ ನಕಾರಾತ್ಮಕ ಪ್ರಭಾವಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ ಎಂದು ತಜ್ಞರು ಸೂಚಿಸುತ್ತಾರೆ.
ಇದನ್ನೂ ಓದಿ:ಅಂತರಾಷ್ಟ್ರೀಯ ಚೆಸ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಮಹತ್ವವೇನು?
3. ನಕಾರಾತ್ಮಕ ಆಲೋಚನೆಗಳಿಗೆ ಸವಾಲು ಹಾಕಿ: ತಜ್ಞರ ಪ್ರಕಾರ, ಸರಾಸರಿ ಮಾನವ ಮನಸ್ಸು ಒಂದು ದಿನದಲ್ಲಿ 60,000 ರಿಂದ 80,000 ಭಾರಿ ನಕಾರಾತ್ಮಕವಾಗಿ ಆಲೋಚನೆಗಳನ್ನು ಮಾಡುತ್ತದೆ. ಆದ್ದರಿಂದ, ನೀವು ನಕಾರಾತ್ಮಕವಾಗಿ ಯೋಚಿಸಲು ಆಯ್ದುಕೊಂಡರೆ, ಪ್ರತಿ ನಕಾರಾತ್ಮಕ ಆಲೋಚನೆಯು ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂದು ಊಹಿಸಿಕೊಳ್ಳಿ. ನಾವು ಎಂದಿಗೂ ನಮ್ಮ ಆಲೋಚನೆಗಳ ಸುಳಿಯಲ್ಲಿ ಬೀಳಬಾರದು. ಬಿದ್ದರೆ, ಹಿಂತಿರುಗುವುದಿಲ್ಲ. ನಿಮ್ಮ ಎಲ್ಲಾ ನಕಾರಾತ್ಮಕ ಚಿಂತೆಗಳಿಗೆ ಸವಾಲು ಮಾಡಿ, ನಿಮ್ಮನ್ನು ಆರೋಗ್ಯಕರ ಮನಸ್ಥಿತಿಯಲ್ಲಿಡಲು ಅಗತ್ಯವಾದ ಕೆಲಸಗಳನ್ನು ಮಾಡಿ. “ಆದಷ್ಟು ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಸಕಾರಾತ್ಮಕ ಮತ್ತು ಸಶಕ್ತ ಆಲೋಚನೆಗಳೊಂದಿಗೆ ಬದಲಿಸಿ. ಸಮಸ್ಯೆಗಳು ಅಥವಾ ಹಿನ್ನಡೆಗಳ ಬಗ್ಗೆ ಗಮನ ಹರಿಸುವ ಬದಲು ಸಾಧ್ಯತೆಗಳು ಮತ್ತು ಪರಿಹಾರಗಳತ್ತ ಗಮನ ಹರಿಸಿ” ಎಂದು ತಜ್ಞರು ಹೇಳುತ್ತಾರೆ.
4. ಸ್ವಯಂ ಆರೈಕೆ ಮಾಡಿಕೊಳ್ಳಿ: ನಿಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿ. ವ್ಯಾಯಾಮ, ನಿಮ್ಮ ಹವ್ಯಾಸಗಳನ್ನು ಅನುಸರಿಸುವುದು ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯುವುದರ ಜೊತೆಗೆ ನಿಮಗೆ ಸಂತೋಷ ಮತ್ತು ವಿಶ್ರಾಂತಿಯನ್ನು ಕೊಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ಸ್ವಯಂ ಆರೈಕೆ ನಿಮ್ಮ ಆದ್ಯತೆಯಾಗಲಿ ಎಂಬುದು ತಜ್ಞರ ಸಲಹೆಯಾಗಿದೆ.
5. ವಾಸ್ತವಿಕ ಗುರಿಗಳನ್ನು ನಿಗದಿಪಡಿಸಿಕೊಳ್ಳಿ: ಸಾಧಿಸಬಹುದಾದ ಗುರಿಗಳನ್ನು ನಿಮಗಾಗಿ ನಿಗದಿಪಡಿಸಿಕೊಳ್ಳಿ ಮತ್ತು ಅವುಗಳ ಬಗ್ಗೆ ಕೆಲಸ ಮಾಡಿ. ನಿಮ್ಮ ಯಶಸ್ಸನ್ನು ಯಾರೂ ಬೇಕಾದರೂ, ಎಷ್ಟೇ ಕ್ಷುಲ್ಲಕವಾಗಿ ಕಂಡರೂ ಅದರ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು, ಆತ್ಮವಿಶ್ವಾಸವನ್ನು ಹೆಚ್ಚುಮಾಡಿಕೊಳ್ಳಿ ಇವು ನಿಮ್ಮ ಸಕಾರಾತ್ಮಕ ಮನಸ್ಥಿತಿಯನ್ನು ಬಲಪಡಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:09 am, Thu, 20 July 23