AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Chess Day 2023: ಅಂತರಾಷ್ಟ್ರೀಯ ಚೆಸ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಮಹತ್ವವೇನು?

ಚೆಸ್ ಬುದ್ಧಿವಂತಿಕೆ ಮತ್ತು ತಂತ್ರಗಾರಿಕಾ ಕೌಶಲ್ಯದ ಆಟವಾಗಿದೆ. ಮೆದುಳಿಗೆ ವ್ಯಾಯಾಮ ನೀಡುವ ಈ ಆಟವು ಇಂದು ಪ್ರಪಂಚದಾದ್ಯಂತ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಪ್ರತಿವರ್ಷ ಜುಲೈ 20 ರಂದು ವಿಶ್ವದಾತ್ಯಂತ ಅಂತರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಚೆಸ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಹಾಗೂ ಅದರ ಪ್ರಾಮುಖ್ಯತೆಯ ಕುರಿತ ಮಾಹಿತಿ ಇಲ್ಲಿದೆ.

International Chess Day 2023: ಅಂತರಾಷ್ಟ್ರೀಯ ಚೆಸ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಮಹತ್ವವೇನು?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 20, 2023 | 6:38 AM

Share

ಸುಮಾರು ಒಂದುವರೆ ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಚೆಸ್ ಆಟವು ಭಾರತೀಯ ಮೂಲದ ಆಟವಾಗಿದೆ. ಇದನ್ನು ಚದುರಂಗದ ಆಟ ಎಂದು ಕೂಡ ಕರೆಯಲಾಗುತ್ತದೆ. ಚೆಸ್ ಎನ್ನುವುದು ಇಬ್ಬರು ಆಟಗಾರರು ಸೇರಿ ಆಡುವ ಬುದ್ಧಿವಂತಿಕೆಯ ಮತ್ತು ಮನರಂಜನೆಯ ಆಟವಾಗಿದೆ. ಈ ಆಟವು ಬುದ್ಧಿವಂತಿಕೆ ಮತ್ತು ಕೌಶಲ್ಯದ ಸಂಕೇತವಾಗಿದೆ. ಚೆಸ್ ಆಟವನ್ನು ಆಡುವುದರಿಂದ ಮೆದುಳಿಗೆ ಸಾಕಷ್ಟು ವ್ಯಾಯಾಮ ದೊರೆಯುತ್ತದೆ ಆದ್ದರಿಂದ ಇದನ್ನು ‘ಮೈಂಡ್ ಗೇಮ್’ ಎಂದೂ ಕರೆಯುತ್ತಾರೆ. ಚೆಸ್ ಇಂದು ಪ್ರಪಂಚದಾತ್ಯಂತ ಜನಪ್ರಿಯವಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಚೆಸ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಮತ್ತು ಅದರ ಪ್ರಾಮುಖ್ಯತೆ ಏನೆಂಬುದನ್ನು ತಿಳಿಯೋಣಾ.

ಅಂತರಾಷ್ಟ್ರೀಯ ಚೆಸ್ ದಿನದ ಇತಿಹಾಸ:

1924ರ, ಜುಲೈ 20 ರಂದು ಫ್ರಾನ್ಸ್​​ನ ಪ್ಯಾರಿಸ್ ನಗರದಲ್ಲಿ ನಡೆದ ಎಂಟನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ‘ವಿಶ್ವ ಚೆಸ್ ಫೌಂಡೇಷನ್’ ನ್ನು ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ಗೌರವಾರ್ಥವಾಗಿ ಜುಲೈ 20 ರಂದು ವಿಶ್ವ ಚೆಸ್ ದಿನವನ್ನು ಆಚರಿಸಲು ಪ್ರಸ್ತಾಪಿಸಲಾಯಿತು. ಇದಾದ ಬಳಿಕ ಮೊದಲ ವಿಶ್ವ ಚೆಸ್ ದಿನವನ್ನು ಜುಲೈ 20, 1966 ರಂದು ಆಚರಿಸಲಾಯಿತು. ಇದಾದ ಸುಮಾರು ವರ್ಷಗಳ ಬಳಿಕ ಅಂದರೆ 2019ರ ಡಿಸೆಂಬರ್ 12ನೇ ತಾರೀಕಿನಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 20 ರಂದು ವಿಶ್ವ ಚೆಸ್ ದಿನವೆಂದು ಅಧೀಕೃತವಾಗಿ ಘೋಷಿಸಿತು.

ವಿಶ್ವ ಚೆಸ್ ದಿನದ ಮಹತ್ವ:

ಚೆಸ್ ಬುದ್ಧಿವಂತಿಕೆಯ ಆಟವಾಗಿದ್ದು, ಇದು ಉನ್ನತ ಮಟ್ಟದ ಚಿಂತನೆ, ತ್ವರಿತ ನಿರ್ಧಾರ ತಗೆದುಕೊಳ್ಳುವ ಕೌಶಲ್ಯ, ಕೈಚಳಕ ಮತ್ತು ಉತ್ತಮ ತಂತ್ರಗಾರಿಕೆಯನ್ನು ಒಳಗೊಂಡಿರುತ್ತದೆ. ಭಾಷೆ ಮತ್ತು ಸಮುದಾಯದ ಗಡಿಗಳನ್ನು ದಾಟಿ ಪ್ರಪಂಚದಾದ್ಯಂತ ಚದುರಂಗದ ಆಟವನ್ನು ಆಡಲಾಗುತ್ತದೆ. ವಿಶ್ವ ಚೆಸ್ ದಿನದ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಜಾಗತಿಕ ಕ್ರೀಡೆಯು ಜನರಲ್ಲಿ ನ್ಯಾಯಸಮ್ಮತತೆ, ಒಗ್ಗೂಡುವಿಕೆ ಮತ್ತು ಪರಸ್ಪರ ಗೌರವದ ಭಾವನೆಯನ್ನು ಉತ್ತೇಜಿಸುತ್ತದೆ.

ವಿಶ್ವ ಚೆಸ್ ದಿನದ ಆಚರಣೆಯ ಉದ್ದೇಶ:

ಈ ದಿನವನ್ನು ಆಚರಿಸುವ ಉದ್ದೇಶವೆಂದರೆ ಅಂತರಾಷ್ಟ್ರೀಯ ಚೆಸ್ ಫೆಡರೇಷನ್​​​ನ್ನು ಉತ್ತೇಜಿಸುವುದು ಮತ್ತು ಅಂತರಾಷ್ಟ್ರೀಯ ಚೆಸ್ ಫೆಡರೇಷನ್ ಹಾಗೂ ಚೆಸ್ ಆಟದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ.

ಇದನ್ನೂ ಓದಿ:  ಅಂತರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನದ ಇತಿಹಾಸ, ಮಹತ್ವ ಇಲ್ಲಿದೆ

ಚೆಸ್ ಆಡುವುದರಿಂದ ಲಭಿಸುವ ಪ್ರಯೋಜನ:

ಮೆದುಳಿಗೆ ವ್ಯಾಯಾಮ:

ಚೆಸ್ ಆಟವು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ಪರಿಣಾಮಕಾರಿ ವ್ಯಾಯಾಮವಾಗಿದೆ.

ಆಲ್ಝೆಮರ್ ಕಾಯಿಲೆಯನ್ನು ಬಾರದಂತೆ ತಡೆಯುತ್ತದೆ:

ಚದುರಂಗದ ಆಟವನ್ನು ಆಡುವುದರಿಂದ ಬುದ್ಧಿಮಾಂದ್ಯತೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಚೆಸ್ ನಂತಹ ಮೆದುಳಿಗೆ ಕೆಲಸ ನೀಡುವ ಆಟಗಳು ಅಲ್ಝೆಮರ್ ಕಾಯಿಲೆಯ ಅಪಾಯವನ್ನು ಮತ್ತು ಖಿನ್ನತೆ, ಆತಂಕವನ್ನು ಕೂಡ ಕಡಿಮೆ ಮಾಡುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸುತ್ತದೆ:

ಚೆಸ್ ಆಡುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ. ಈ ಆಟದಲ್ಲಿ ತೊಡಗಿರುವ ಜನರು ಇತರ ಜನರಿಗಿಂತ ಹೆಚ್ಚು ಏಕಾಗ್ರತೆಯನ್ನು ಹೊಂದಿರುತ್ತಾರೆ. ಇದಲ್ಲದೆ ಚದುರಂಗದ ಆಟವು ನಿಮಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸಹ ಕಲಿಸುತ್ತದೆ.

ಚೆಸ್ ಆಟವು ನಮಗೆ ಆತ್ಮವಿಶ್ವಾಸ, ಶಿಸ್ತನ್ನು ಕಲಿಸುತ್ತದೆ. ಚೆಸ್ ಆಡುವ ಮಕ್ಕಳು ಗಣಿತ ಮತ್ತು ವಿಜ್ಞಾನದಂತಹ ಕಠಿಣ ವಿಷಯಗಳ ಮೇಲೆ ಉತ್ತಮ ಹಿಡಿತವನ್ನು ಸಾಧಿಸಬಹುದು. ಇದಲ್ಲದೆ ಚೆಸ್ ಆಳವಾಗಿ ಯೋಚಿಸುವ ಮತ್ತು ಅನ್ವೇಷಿಸುವ ಪ್ರವೃತ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್