Neem Leaves Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆ ಜಗಿಯುವುದರಿಂದ ಲಭಿಸುತ್ತೇ ಹಲವು ಆರೋಗ್ಯ ಪ್ರಯೋಜನಗಳು

| Updated By: ಅಕ್ಷತಾ ವರ್ಕಾಡಿ

Updated on: Sep 07, 2023 | 6:16 AM

ಬೇವಿನ ರುಚಿ ಕಹಿಯಾಗಿದ್ದರೂ, ಬೇವಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯುರ್ವೇದದ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವನ್ನು ಸೇವಿಸಿದರೆ ದೇಹದ ಅರ್ಧದಷ್ಟು ಕಾಯಿಲೆಗಳು ಗುಣವಾಗುತ್ತದೆ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಯನ್ನು ತಿನ್ನುವುದರಿಂದ ಲಭಿಸುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

Neem Leaves Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆ ಜಗಿಯುವುದರಿಂದ ಲಭಿಸುತ್ತೇ ಹಲವು ಆರೋಗ್ಯ ಪ್ರಯೋಜನಗಳು
Chewing neem leaves
Image Credit source: Pinterest
Follow us on

ಬೇವಿನ ಔಷಧೀಯ ಗುಣಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಇದರ ಬೀಜಗಳಿಂದ ಹಿಡಿದು, ಎಲೆಗಳು, ಬೇರು, ತೊಗಟೆ ಈ ಎಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೇವು ರುಚಿಯಲ್ಲಿ ಕಹಿಯಾಗಿದ್ದರೂ ಸಹ, ಅದು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಆಯುರ್ವೇದ ಮತ್ತು ಮನೆಮದ್ದುಗಳಲ್ಲಿ ನೂರಾರು ವರ್ಷಗಳಿಂದಲೂ ಬಳಸಲಾಗುತ್ತಿದೆ. ಆಯಾಸ, ಕೆಮ್ಮು, ಜ್ವರ, ಹಸಿವಾಗದಿರುವುದು, ಸೋಂಕು ಮುಂತಾದ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಕೆಮ್ಮು, ವಾಂತಿ, ಚರ್ಮ ರೋಗ ಮುಂತಾದ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ. ಹಾಗಿದ್ದರೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಯನ್ನು ಜಗಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ.

ಖಾಲಿ ಹೊಟ್ಟೆಯಲ್ಲಿ ಬೇವು ಜಗಿಯುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:

ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ:

ಕಳಪೆ ಮಟ್ಟದ ಜೀವನಶೈಲಿಯ ಕಾರಣದಿಂದಾಗಿ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತಿದೆ. ಹಲವು ಜನರು ಈ ಸಮಸ್ಯೆಗೆ ನಿರಂತರವಾಗಿ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಇದರ ಹೊರತಾಗಿ ಮನೆಮದ್ದುಗಳ ಸಹಾಯದಿಂದಲೂ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಬಹುದು.. ಈ ಮನೆಮದ್ದುಗಳಲ್ಲಿ ಒಂದು ಬೇವು. ಬೇವಿನ ಸೊಪ್ಪನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಬಹುದು.

ರಕ್ತವನ್ನು ಶುದ್ಧೀಕರಿಸಲು ಸಹಕಾರಿ:

ಬೇವು ಎಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಎಂದರೆ ಅದು ರಕ್ತವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ. ಇದು ರಕ್ತದಿಂದ ವಿಷವನ್ನು ತೆಗೆದುಹಾಕುವ ಮೂಲಕ ರಕ್ತವನ್ನು ನಿರ್ವಿಷಗೊಳಿಸುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ:

ಬೇವು  ಚರ್ಮಕ್ಕೆ ಮಾತ್ರವಲ್ಲದೆ ಉದರಕ್ಕೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಲಕ್ಷಣಗಳು ಅಸಿಡಿಟಿಯನ್ನು ನಿವಾರಿಸಲು ಸಹಕಾರಿಯಾಗಿದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಎಲ್ಲಾ ಆಮ್ಲೀಯತೆ ಮತ್ತು ಹೊಟ್ಟೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಬೇವು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೊಟ್ಟೆ ಹುಣ್ಣು, ಸುಡುವ ಸಂವೇದನೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅಲ್ಲದೆ ಇದು ಮಲಬದ್ಧತೆ ಸಮಸ್ಯೆಯಿಂದಲೂ ಪರಿಹಾರವನ್ನು ಒದಗಿಸುತ್ತದೆ.

ಇದನ್ನೂ ಓದಿ: ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತದೆಯೇ? ಈ ಕಾಯಿಲೆ ಲಕ್ಷಣವಾಗಿರಬಹುದು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಯೋಜನಕಾರಿ:

ಬೇವಿನ ಎಲೆಗಳು ಅನೇಕ ವಿಧದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ.

ಕ್ಯಾನ್ಸರ್ ರೋಗ ಬಾರದಂತೆ ತಡೆಗಟ್ಟುತ್ತದೆ:

ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಒಳ್ಳೆಯದು. ಏಕೆಂದರೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗೂ ಬೇವು ದೇಹದಿಂದ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಬೇವಿನ ಎಲೆಗಳನ್ನು ಹೀಗೆ ಉಪಯೋಗಿಸಿ:

ಬೇವಿನ ಎಲೆಗಳನ್ನು ಜಜ್ಜಿ ಅದರಿಂದ ತೆಗೆದ ರಸವನ್ನು ಸೇವಿಸಲಾಗುತ್ತದೆ. ತಾಜಾ ಬೇವಿನ ಎಲೆಗಳ ರಸವನ್ನು ಯಾವಾಗಲೂ ಸೇವಿಸಿ. ಇಲ್ಲದಿದ್ದರೆ ಎಲೆಯನ್ನು ಜಗಿಯಬಹುದು. ಇದು ಹೆಚ್ಚು ಕಹಿ ಗುಣಲಕ್ಷಣವನ್ನು ಹೊಂದಿರುವ ಕಾರಣ ನೀವು ಅದನ್ನು ತಿಂದ ಬಳಿಕ ಜೀನುತುಪ್ಪವನ್ನು ಸೇವನೆ ಮಾಡಬಹುದು. ಒಂದೇ ಬಾರಿಗೆ ಹೆಚ್ಚು ಬೇವಿನ ಎಲೆಗಳನ್ನು ಸೇವಿಸಬೇಡಿ. ಯಾವಾಗಲೂ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ನಿಮಗೆ ಕಾಯಿಲೆಗಳಿದ್ದರೆ, ಬೇವನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯ ಮೇರೆಗೆ ಬೇವನ್ನು ಸೇವನೆ ಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: