Usage of Lemons: ನಿಂಬೆಹಣ್ಣಿನ ಸಮಗ್ರ ಪ್ರಯೋಜನಗಳು, ಮನೆಯಲ್ಲಿ ನಿಂಬೆಯನ್ನು ಬಳಸಬಹುದಾದ 7 ಆಶ್ಚರ್ಯಕರ ಮಾರ್ಗಗಳು ಇಲ್ಲಿವೆ

|

Updated on: Apr 27, 2023 | 4:47 PM

ದೊಡ್ಡ ಪಾತ್ರೆಯಲ್ಲಿ ನೀರನ್ನು ತುಂಬಿಸಿ ನಿಂಬೆ ಹೋಳುಗಳನ್ನು ಹಾಕಿ. ಅದನ್ನು ಕುದಿಸಿ. ನಂತರ, ಕೊಳೆ ಬಟ್ಟೆಗಳನ್ನು ಹಾಕಿ ಚೆನ್ನಾಗಿ ಒಂದು ಗಂಟೆ ನೆನೆಯಲು ಬಿಡಿ. ಅದಾದ ಮೇಲೆ ಅವುಗಳನ್ನು ಹೊರ ತೆಗೆದು, ಒಗೆದು, ಒಣಗಲು ಹಾಕಿ.

Usage of Lemons: ನಿಂಬೆಹಣ್ಣಿನ ಸಮಗ್ರ ಪ್ರಯೋಜನಗಳು, ಮನೆಯಲ್ಲಿ ನಿಂಬೆಯನ್ನು ಬಳಸಬಹುದಾದ 7 ಆಶ್ಚರ್ಯಕರ ಮಾರ್ಗಗಳು ಇಲ್ಲಿವೆ
ಮನೆಯಲ್ಲಿ ನಿಂಬೆಯನ್ನು ಬಳಸಬಹುದಾದ 7 ಆಶ್ಚರ್ಯಕರ ಮಾರ್ಗಗಳು ಇಲ್ಲಿವೆ
Follow us on

ಆಗಾಗ ಮನೆಗೆ ಯಥೇಚ್ಛವಾಗಿ ನಿಂಬೆಹಣ್ಣುಗಳನ್ನು ತರುತ್ತಿರಿ. ಅದು ಆರೋಗ್ಯಕ್ಕಷ್ಟೇ ಅಲ್ಲ ಮನೆಯನ್ನು ಸ್ವಚ್ಛಗೊಳಿಸಲೂ ಬಳಕೆಯಾಗುತ್ತದೆ. ಇನ್ನೇನು ನೀವು ಮನೆಯನ್ನು ಸ್ವಚ್ಛಗೊಳಿಸಲು (Cleaning House) ಅಣಿಯಾಗುತ್ತಿದ್ದೀರಿ ಅನ್ನುವುದಾದರೆ ಅದಕ್ಕಾಗಿ ನೀವು ವೃತ್ತಿಪರ ಮನೆಕೆಲಸದವರಿಗೆ ಹೇಳಬೇಕು ಅಂತೇನಿಲ್ಲ. ಕಾಲಕಾಲಕ್ಕೆ ನೀವೇ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ ಮನೆಯೇ ಒಂದು ಸ್ವಚ್ಛ ಭಾರತ್​​​ ನಂತಾಗಿ ಫಳಫಳಿಸುತ್ತಿರುತ್ತದೆ. ಈ ವಿಷಯದಲ್ಲಿ ನಿಂಬೆಹಣ್ಣು (Lemon) ಯಾವಾಗಲೂ ನಿಮ್ಮ ಕೈಹಿಡಿಯುತ್ತದೆ. ಏಕೆಂದರೆ ಅದರ ಗುಣಲಕ್ಷಣಗಳು ಮತ್ತು ತಾಜಾ ಪರಿಮಳವು ಅನೇಕ ಮನೆಕೆಲಸಗಳಿಗೆ ಸೂಕ್ತವಾಗಿಸುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಸೂಕ್ಷ್ಮಜೀವಿಗಳನ್ನು (Germs, Weeds) ಕೊಲ್ಲುತ್ತದೆ. ಪಾತ್ರೆಪಗಡೆ, ಅಡುಗೆಮನೆ ಕಟ್ಟೆ ಮೇಲೆ ಕಟ್ಟಿಕೊಂಡಿರುವ ಕೊಳೆಯನ್ನು ತೆಗೆದುಹಾಕುತ್ತದೆ. ಉದಾಹರಣೆಗೆ, ನಿಂಬೆ ಸಿಪ್ಪೆಯಲ್ಲಿನ ರಸವು ಗ್ರೀಸ್ ಮತ್ತು ಇತರ ಪದಾರ್ಥಗಳನ್ನು ತೊಳೆದುಹಾಕಬಲ್ಲದು.

1.  ನಿಂಬೆಯಿಂದ ಕಿಟಕಿಗಳನ್ನು ಸ್ವಚ್ಛಗೊಳಿಸಿ:

ಕಿಟಕಿಗಳು ಮತ್ತು ಇತರ ಗಾಜಿನ ವಸ್ತುಗಳ ಮೇಲ್ಮೈಗಳಿಂದ ಕೊಳೆ ಗೆರೆಗಳನ್ನು ತೆಗೆದುಹಾಕಲು, ಖಾಲಿ ಸ್ಪ್ರೇ ಬಾಟಲಿಗೆ ಸುಮಾರು ಎರಡು ಚಮಚ ನಿಂಬೆ ರಸವನ್ನು ಹಿಂಡಿ. ಸುಮಾರು ಒಂದು ಚಮಚ ಬಿಳಿ ವಿನೆಗರ್ ಸೇರಿಸಿ. ಒಂದು ಕಪ್ ಬಿಸಿ ನೀರನ್ನೂ ಸೇರಿಸಿಕೊಳ್ಳಿ. ಮಿಶ್ರಣವನ್ನು ಚೆನ್ನಾಗಿ ಅಲ್ಲಾಡಿಸಿ ಮತ್ತು ಎಲ್ಲಿ ಶುಚಿಗೊಳಿಸಬೇಕೋ ಅಲ್ಲೆಲ್ಲಾ ರಸದ ಮಿಶ್ರಣವನ್ನು ಸಿಂಪಡಿಸಿ.

2. ನಿಂಬೆಯಿಂದ ಕಸ ವಿಲೇವಾರಿ ಬಕೆಟ್/ ಬುಟ್ಟಿಯನ್ನು ತಾಜಾಗೊಳಿಸಿ:

ನಿಮ್ಮ ಅಡುಗೆಮನೆಯ ಸಿಂಕ್‌ನಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಕೆಲವು ನಿಂಬೆ ತುಂಡುಗಳು ಅಥವಾ ಸಿಪ್ಪೆಗಳನ್ನು ಅಲ್ಲಿ ಹಾಕಿಡಿ. ಸ್ವಲ್ಪ ತಣ್ಣನೆಯ ನೀರನ್ನೂ ಅಲ್ಲಿ ಸಿಂಪಡಿಸಿ. ಇನ್ನೂ ಕೆಲವು ಬಾರಿ ಘಾಟು ವಾಸನೆಯನ್ನು ತಡೆಯಲು ಮಿಶ್ರಣಕ್ಕೆ ಸ್ವಲ್ಪ ಅಡುಗೆ ಸೋಡಾವನ್ನು ಸೇರಿಸಿ ಸ್ಪ್ರೇ ಮಾಡಿ.

3. ನಿಂಬೆಯಿಂದ ಸೋಫಾ, ದಿಂಬು ಕವರ್​​ಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು:

ಸೋಫಾ, ದಿಂಬು ಕವರ್​​ಗಳು, ಇತರೆ ಬಟ್ಟೆಬರೆ ಅಥವಾ ಕಟ್ಟೆಗಳ ಮೇಲೆ ಕಸ, ಕಲೆಗಳು ಬಿದ್ದಿವೆಯಾ? ಅದಕ್ಕೆ ನಿಂಬೆ ರಸ ಮತ್ತು ಉಪ್ಪಿನ ಮಿಶ್ರಣ ಬಳಸಿ, ಹೋಗಲಾಡಿಸಬಹುದು. ಅವುಗಳ ಮೇಲೆ 30 ನಿಮಿಷಗಳ ಕಾಲ ಈ ಮಿಶ್ರಣ ಚೆಲ್ಲಿ, ನಂತರ ಕ್ಲೀನ್ ಮಾಡಿ. ಕ್ಲೀನ್ ಮಾಡಲು ಬೆಚ್ಚಗಿನ ನೀರು ಮತ್ತು ವಿನೆಗರ್‌ ಅನ್ನು ಬಳಸಿ. ನಂತರ ಬಿಸಿಲಿನಲ್ಲಿ ಒಣಗಿ ಹಾಕಿ. ಅವು ಮತ್ತೆ ಫಳಫಳ ಹೊಳಪನ್ನು ಹೊಂದುತ್ತವೆ. ಈ ವಿಧಾನವು ಶರ್ಟ್‌ಗಳ ಮೇಲಿನ ಬೆವರು ಕಲೆಗಳನ್ನು ನಿವಾರಿಸಲು ಸಹ ಒಳ್ಳೆಯದು.

4. ಬಿಸಿ ನೀರಿನಲ್ಲಿ ನಿಂಬೆ ಹೋಳುಗಳು:

ದೊಡ್ಡ ಪಾತ್ರೆಯಲ್ಲಿ ನೀರನ್ನು ತುಂಬಿಸಿ ನಿಂಬೆ ಹೋಳುಗಳನ್ನು ಹಾಕಿ. ನಂತರ ಅದನ್ನು ಕುದಿಸಿ. ನಂತರ, ಕೊಳೆ ಬಟ್ಟೆಗಳನ್ನು ಹಾಕಿ ಚೆನ್ನಾಗಿ ಒಂದು ಗಂಟೆ ನೆನೆಯಲು ಬಿಡಿ. ಅದಾದ ಮೇಲೆ ಎಂದಿನಂತೆ ಅವುಗಳನ್ನು ಹೊರ ತೆಗೆದು, ಒಗೆದು, ಒಣಗಲು ಹಾಕಿ.

5. ನಿಂಬೆಯಿಂದ ಹಿತ್ತಾಳೆ, ತಾಮ್ರ, ಇತರೆ ಲೋಹದ ವಸ್ತುಗಳ ಪಾಲಿಷ್:

ನಲ್ಲಿಗಳು ಮತ್ತು ನೆಲೆದ ಮೇಲಿನ ಕೆಲವು ವಸ್ತುಗಳನ್ನು ಸ್ವಚ್ಛಗೊಳಿಸಲು ಅಂದರೆ ಗಟ್ಟಿಯಾದ ನೀರಿನ ಕಲೆಗಳು ಮತ್ತು ಸೋಪ್ ಕಲೆಗಳಿಂದಾಗಿ ಹೊಳಪನ್ನು ಕಳೆದುಕೊಳ್ಳಬಹುದು. ಅದನ್ನು ತೆಗೆಯಲು ನಿಂಬೆ ಮಿಶ್ರಣವನ್ನು ಸಿಂಪಡಿಸಿ, ತೆಗೆಯಬಹುದಾಗಿದೆ. ಅವುಗಳ ಹೊಳಪನ್ನು ಮರಳಿ ತರಲು ನಿಂಬೆಯನ್ನು ಅರ್ಧದಷ್ಟು ಕತ್ತರಿಸಿ ಮತ್ತು ಅದನ್ನು ನಲ್ಲಿ, ಹಿಡಿಕೆಗಳು ಮತ್ತು ಇತರೆ ಯಾವುದೇ ಲೋಹದ ಮೇಲ್ಮೈಗಳನ್ನು ಒರೆಸಬೇಕು.

ಅರ್ಧ ನಿಂಬೆಯನ್ನು ಒರಟಾದ ಉಪ್ಪಿನೊಂದಿಗೆ ಲೇಪಿಸಿ, ನಂತರ ಅದನ್ನು ಕಳಂಕಿತ ಮಡಕೆಗಳು, ಕ್ಯಾಬಿನೆಟ್ ಹಿಡಿಗಳು ಮತ್ತು ಇತರ ಲೋಹದ ವಸ್ತುಗಳ ಮೇಲೆ ಉಜ್ಜಿ. (ಅದು ವಾರ್ನಿಷ್ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ), ನಂತರ, ಒದ್ದೆಯಾದ ಬಟ್ಟೆಯಿಂದ ಮೊದಲು ಒರೆಸಿ, ಬಳಿಕ ಮೃದುವಾದ ಒಣ ಬಟ್ಟೆಯಿಂದ ಸವರಿ. ಆಲಿವ್ ಎಣ್ಣೆ ಮತ್ತು ನಿಂಬೆ ರಸದ ಮಿಶ್ರಣವೂ ಬಳಕೆ ಮಾಡಬಹುದು.

6. ನಿಂಬೆಯಿಂದ ಕಳೆಗಳನ್ನು ಸಾಯಿಸಲು

ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ಗಾಢವಾದ ರಾಸಾಯನಿಕಗಳಿಂದ ದೂರವಿಡಲು ಬಯಸುವ ಪೋಷಕರಿಗೆ ಇಲ್ಲೊಂದು ಸಲಹೆ ಇದೆ. ಸ್ವಲ್ಪವೇ ನಿಂಬೆ ರಸವೂ ಸಕ್ರಿಯ ಕಳೆನಾಶಕವಾಗಿ ಕಾರ್ಯನಿರ್ವಹಿಸಬಲ್ಲದು. ನಿಂಬೆ ಹಣ್ಣಿನಲ್ಲಿರುವ ಆಮ್ಲೀಯತೆಯು ಕಳೆ ಸಸ್ಯಗಳನ್ನು ಹಾನಿಗೊಳಿಸಬಹುದು. ಹಾಗಾಗಿ ನಿಂಬೆ ರಸ ಸಿಂಪಡಿಸಿ. ಆದರೆ ನೀವು ಎಚ್ಚರ ವಹಿಸಬೇಕಾಗಿರುವುದು ಮಣ್ಣಿನ pH ಕ್ಷೀಣಿಸದಂತೆ ನೋಡಿಕೊಳ್ಳಬೇಕು. ಹಾಗಾಗಿ ಹೆಚ್ಚಾಗಿ ಮಾಡದೆ, ನಿಯಂತ್ರಿತ ಮಟ್ಟದಲ್ಲಿ ನಿಂಬೆ ರಸ ಬಳಸಿದರೆ ಸೂಕ್ತವಾದೀತು.

7. ನಿಂಬೆಯಿಂದ ಪ್ಲಾಸ್ಟಿಕ್ ಪಾತ್ರೆಗಳ ಮೇಲಿರುವ ಕಲೆಗಳನ್ನು ತೆಗೆದುಹಾಕಿ:

ನೀವು ಎಂದಾದರೂ ತಿನ್ನುವ ಪದಾರ್ಥಗಳನ್ನು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಹಾಕಿದ್ದರೆ ಅದರ ರಸ ಅಹಿತಕರ ಪದರವನ್ನು ಬಿಡುತ್ತದೆ. ಆ ಪದರದಿಂದ ಬೇಸರಗೊಂಡು ಪ್ಲಾಸ್ಟಿಕ್ ಕಂಟೇನರ್‌ ಅನ್ನು ಬಿಸಾಕುವ ಬದಲು, ನಿಂಬೆ ರಸ ಬಳಸಿ, ನಂತರ ಸ್ಟೇನ್ ತೊಡೆದುಹಾಕಲು ಅದನ್ನು ಸಂಪೂರ್ಣವಾಗಿ ಸ್ಕ್ರಬ್ ಮಾಡಿ, ತೆಗೆದುಬಿಡಿ. ಸ್ವಚ್ಛವಾಗಿಬಿಡುತ್ತದೆ.