Diabetes: ಒಂದು ಲೋಟ ಹಾಲು ಮಧುಮೇಹ ಬರದಂತೆ ತಡೆಯಲು ಸಾಧ್ಯನಾ? ಸಂಶೋಧನೆ ಹೇಳುವುದು ಏನು?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2022 | 8:00 AM

ಒಂದು ಲೋಟ ಹಾಲು ಮಧುಮೇಹದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದ ಗಮನಾರ್ಹವಾದ ಅಂಶವಾಗಿದೆ.

Diabetes: ಒಂದು ಲೋಟ ಹಾಲು ಮಧುಮೇಹ ಬರದಂತೆ ತಡೆಯಲು ಸಾಧ್ಯನಾ? ಸಂಶೋಧನೆ ಹೇಳುವುದು ಏನು?
ಹಾಲು (ಸಂಗ್ರಹ ಚಿತ್ರ)
Follow us on

ಭಾರತದಲ್ಲಿ ಮಾತ್ರವಲ್ಲದೇ ಇಡೀ ಪ್ರಪಂಚದಾದ್ಯಂತ ಮಧುಮೇಹವು (Diabetes) ವೇಗವಾಗಿ ಬೆಳೆಯುತ್ತಿದೆ. ವಯಸ್ಸಾದವರ ಜೊತೆಗೆ ಯುವಕರಲ್ಲಿಯೂ ಸಹ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ ಮಧುಮೇಹವನ್ನು ತಡೆಗಟ್ಟುವ ಬಗ್ಗೆ ಹೊಸ ವಿಚಾರ ಬಹಿರಂಗ ಮಾಡಲಾಗಿದೆ. ಸಂಶೋಧನೆಯ ಪ್ರಕಾರ, ಒಂದು ಲೋಟ ಹಾಲು (milk)  ಮಧುಮೇಹದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದ ಗಮನಾರ್ಹವಾದ ಅಂಶವಾಗಿದೆ. ಹಾಲಿ ಕುಡಿಯುವುದರಿಂದ ಇದರ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಹಾಲಿನಲ್ಲಿ ಇಂತಹ ಅನೇಕ ಪೋಷಕಾಂಶಗಳಿವೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇದು ರಕ್ತದಲ್ಲಿರುವ ಗ್ಲೂಕೋಸ್​ನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಣ್ಣು ಮತ್ತು ಹೃದಯಕ್ಕೆ ಮಧುಮೇಹ ಅಪಾಯಕಾರಿ:

ಮಧುಮೇಹವನ್ನು ಸಮಯೋಚಿತವಾಗಿ ಪತ್ತೆಹಚ್ಚುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ, ಮಧುಮೇಹವು ನಮ್ಮ ಕಣ್ಣುಗಳು ಮತ್ತು ಹೃದಯಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಮಧುಮೇಹದ ಅಪಾಯಕಾರಿ ಮಟ್ಟವನ್ನು ತಲುಪುವುದು ವ್ಯಕ್ತಿಯ ಕಣ್ಣುಗಳ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರಲಿ. ಅಷ್ಟೇ ಅಲ್ಲ ಕುರುಡನೂ ಆಗಿರಬಹುದು. ಇದಲ್ಲದೆ, ಇದು ಮಾರಣಾಂತಿಕ ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇಂಟರ್‌ನ್ಯಾಷನಲ್‌ ಡಯಾಬಿಟಿಸ್‌ ಫೆಡರೇಷನ್‌ ಪ್ರಕಾರ, ವಿಶ್ವಾದ್ಯಂತ ಸುಮಾರು 55 ಕೋಟಿ ಜನರು ಇದರಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಆಹಾರವೂ ಕಾರಣ ಎಂದು ಹೇಳಲಾಗಿದೆ.

ಒಂದು ಲೋಟ ಹಾಲು ಮಧುಮೇಹ ದೂರ:

ಯುರೋಪಿಯನ್ ಯೂನಿಯನ್ ಮಧುಮೇಹದ ಬಗ್ಗೆ ಅಧ್ಯಯನ ಮಾಡಿದ್ದು, ಅದರ ಪ್ರಕಾರ, ಹಾಲು, ಮೊಸರು ಮತ್ತು ಮಜ್ಜಿಗೆಯಂತಹ ಡೈರಿ ಉತ್ಪನ್ನಗಳು ಈ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಪ್ರತಿದಿನ ಒಂದು ಲೋಟ ಹಾಲನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಯಾವುದೇ ಡೈರಿ ಉತ್ಪನ್ನದ 200 ಗ್ರಾಂ ಈ ರೋಗವನ್ನು 5 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಡೈರಿ ಉತ್ಪನ್ನಗಳು ಪೋಷಕಾಂಶಗಳು, ಜೀವಸತ್ವಗಳು ಮತ್ತು ಹೆಚ್ಚಿನ ಜೈವಿಕ ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿವೆ ಎಂದು ಸಂಶೋಧನೆ ತಿಳಿಸಿದೆ. ಇದು ಗ್ಲೂಕೋಸ್​ನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗುತ್ತಿದೆ.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.