Benefits of Banana: ಬಾಳೆಹಣ್ಣು ತಿನ್ನುವುದರಿಂದ ಈ ಆರೋಗ್ಯ ಪ್ರಯೋಜನ ಖಂಡಿತ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 21, 2023 | 6:34 PM

ಪ್ರತಿದಿನ ಸೇಬು ತಿನ್ನುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅದೇ ರೀತಿ ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಬಾಳೆಹಣ್ಣುನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

Benefits of Banana: ಬಾಳೆಹಣ್ಣು ತಿನ್ನುವುದರಿಂದ ಈ ಆರೋಗ್ಯ ಪ್ರಯೋಜನ ಖಂಡಿತ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಜನರು ತುಂಬಾ ಹಸಿವಾದಾಗ, ಉಪವಾಸದ ಸಮಯದಲ್ಲಿ ಅಥವಾ ಬೆಳಗ್ಗಿನ ಉಪಹಾರದಲ್ಲಿ ಬಾಳೆಹಣ್ಣು ತಿನ್ನುತ್ತಾರೆ. ಆದರೆ ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಂಡರೆ, ನೀವು ಅವುಗಳನ್ನು ಪ್ರತಿದಿನ ತಿನ್ನಲು ಪ್ರಾರಂಭಿಸುತ್ತೀರಿ. ಬಾಳೆಹಣ್ಣು ತಿನ್ನಲು ರುಚಿಕರವಾದ ಹಣ್ಣು ಮಾತ್ರವಲ್ಲದೆ, ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಹೀಗೆ ಪೋಷಕಾಂಶಗಳಲ್ಲಿ ಹೇರಳವಾಗಿರುವ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಅವುಗಳು ಯಾವುವು ಎಂಬುದನ್ನು ನೋಡೋಣ.

ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಗೆ ಸಹಕಾರಿ :

ಬಾಳೆಹಣ್ಣಿನಲ್ಲಿ ಫೈಬರ್ ಅಂಶ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಬಾಳೆಹಣ್ಣಿನ ಸೇವನೆ ಉತ್ತಮ. ಜೊತೆಗೆ ಜೀರ್ಣಕ್ರಿಯೆಯ ತೊಂದರೆಯನ್ನು ದೂರ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಪೆಸ್ಟಿನ್ ಅಂಶವು ಮಲಬದ್ಧತೆಯನ್ನು ದೂರವಿರಿಸುತ್ತದೆ,

ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ:

ರಕ್ತದೊತ್ತಡದಲ್ಲಿನ ಏರುಪೇರುಗಳಿಂದ ನೀವು ತೊಂದರೆಗೊಳಗಾಗಿದ್ದರೆ ಅಥವಾ ನೀವು ಬೇಗನೆ ಸುಸ್ತಾಗಲು ಪ್ರಾರಂಭಿಸಿದರೆ ಬಾಳೆಹಣ್ಣು ಸೇವಿಸಬೇಕು. ಈ ಹಣ್ಣಿನಲ್ಲಿ ಪೊಟ್ಯಾಸಿಯಂ ಅಂಶ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ ಇದು ದೇಹದೊಳಗೆ ರಕ್ತಪರಿಚಲನೆಯನ್ನು ಸುಧಾರಿಸಲು ಸಹಕಾರಿಯಾಗಿದೆ.

ದೇಹದ ಮೂಳೆಗಳನ್ನು ಬಲಪಡಿಸುತ್ತದೆ:

ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ದೇಹದ ಮೂಳೆಗಳು ಬಲಗೊಳ್ಳುತ್ತವೆ ಏಕೆಂದರೆ ಬಾಳೆಹಣ್ಣಿನಲ್ಲಿ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವಿದೆ, ಇದು ನಿಮ್ಮ ಆಹಾರದಿಂದ ಕ್ಯಾಲ್ಸಿಯಂ ನ್ನು ಹೀರಿಕೊಳ್ಳುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಮತ್ತು ಮೂಳೆಯ ಸಾಂದ್ರತೆಯೂ ಹೆಚ್ಚಾಗುತ್ತದೆ. ನೀವು ಮೂಳೆಗಳನ್ನು ಗಟ್ಟಿಯಾಗಿಸಲು ಬಯಸಿದರೆ, ಖಂಡಿತವಾಗಿಯೂ ಪ್ರತಿದಿನ ಬಾಳೆಹಣ್ಣು ತಿನ್ನಿರಿ.

ಮಧುಮೇಹಿಗಳಿಗೆ ಒಳ್ಳೆಯದು:

ಮಧುಮೇಹ ರೋಗಿಗಳಿಗೆ ಅವರು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದು ದೊಡ್ಡ ಸಮಸ್ಯೆಯಾಗಿದೆ. ಬಾಳೆಹಣ್ಣು ರುಚಿಯಲ್ಲಿ ಸಿಹಿಯಾಗಿರುವುದರಿಂದ ಹೆಚ್ಚಿನವರು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸುತ್ತಾರೆ. ಬಾಳೆಹಣ್ಣಿನಲ್ಲಿ ಫೈಬರ್ ಅಂಶ ಇರುವುದರಿಂದ ಮಧುಮೇಹಿಗಳು ತಿನ್ನಲು ಈ ಹಣ್ಣು ಉತ್ತಮವಾಗಿದೆ. ಫೈಬರ್ ಸೇವನೆಯು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದ್ರೋಗಿಗಳಿಗೆ ಒಳ್ಳೆಯದು:

ಹೃದಯ ಸಂಬಂಧಿ ಕಾಯಿಲೆ ಇರುವವರು ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಂ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಹೆಚ್ಚಿನ ಫೈಬರ್ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಇದನ್ನೂ ಓದಿ:ಬಾಳೆಹಣ್ಣು ಪಾಯಸ ಮಾಡುವುದನ್ನು ಇಂದೇ ಕಲಿಯಿರಿ; ಇಲ್ಲಿದೆ ಸುಲಭ ಪಾಕವಿಧಾನ

ರಕ್ತ ಹೀನತೆಯ ಸಮಸ್ಯೆಯನ್ನು ಪರಿಹರಿಸುತ್ತದೆ:

ರಕ್ತಹೀನತೆಯಿಂದ ಬಳಲುತ್ತಿರುವವರು ಬಾಳೆಹಣ್ಣು ಸೇವಿಸಬೇಕು. ಇದರಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವು ಕಂಡುಬರುತ್ತದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ:

ವಿಟಮಿನ್ ಬಿ-6 ಬಾಳೆಹಣ್ಣಿನಲ್ಲಿ ಹೇರಳವಾಗಿದೆ. ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ಇದು ಉಪಯುಕ್ತವೆಂದು ಪರಿಗಣಿಸಲಾಗಿದೆ. ಇದರ ದೈನಂದಿನ ಸೇವನೆಯು ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸುತ್ತದೆ.

ಒತ್ತಡವನ್ನು ನಿವಾರಿಸಲು ಬಾಳೆಹಣ್ಣು ಸಹಕಾರಿ:

ಬಾಳೆಹಣ್ಣು ಒತ್ತಡವನ್ನು ನಿವಾರಿಸಲು ಸಹಕಾರಿ. ಇದರಲ್ಲಿ ಟ್ರಿಟೊಫಾನ್ ಎಂಬ ಅಂಶ ಕಂಡುಬರುತ್ತದೆ. ಇದು ದೇಹದಲ್ಲಿ ಸಿರೊಟೋನಿನ್ ಹಾರ್ಮೋನು ಉತ್ಪತ್ತಿಯಾಗಲು ಸಹಕಾರಿಯಾಗಿದೆ. ಸಿರೊಟೋನಿನ್ ಒತ್ತಡವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾದ ಹಾರ್ಮೋನು ಆಗಿದೆ. ಆದ್ದರಿಂದ ನಿಯಮಿತ ಬಾಳೆಹಣ್ಣಿನ ಸೇವನೆಯಿಂದ ಒತ್ತಡವನ್ನು ನಿವಾರಿಸಬಹುದು.

ಬಾಳೆಹಣ್ಣು ಶಕ್ತಿಯ ಕೇಂದ್ರವಾಗಿದೆ:

ಬಾಳೆಹಣ್ಣು ಶಕ್ತಿಯ ಕೆಂದ್ರವಾಗಿದೆ. ಇದು ಕಾರ್ಬೋಹೈಡ್ರೇಟ್​​​ಗಳ ಉತ್ತಮ ಮೂಲವಾಗಿದೆ. ಬಾಳೆಹಣ್ಣು ತಿಂದರೆ ದೇಹಕ್ಕೆ ತ್ವರಿತ ಶಕ್ತಿ ಲಭಿಸುತ್ತದೆ. ಪ್ರತಿದಿನ ಬೆಳಗ್ಗೆ ಬಾಳೆಹಣ್ಣು ತಿಂದರೆ ನೀವು ದಿನವಿಡೀ ಚೈತನ್ಯದಿಂದ ಇರುತ್ತೀರಿ.

ಬಾಳೆಹಣ್ಣು ಚರ್ಮಕ್ಕೆ ಪ್ರಯೋಜನಕಾರಿ:

ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ ಆ ಸಮಸ್ಯೆಗೆ ಬಾಳೆಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಬಹುದು. ಬಾಳೆಹಣ್ಣು ತಿಂದರೆ ಮುಖ ಕಾಂತಿಯುತವಾಗುತ್ತದೆ ಮತ್ತು ಚರ್ಮ ಕಾಂತಿಯುತವಾಗುತ್ತದೆ.

ಬಾಳೆಹಣ್ಣು ಪೋಷಕಾಂಶಗಳ ನಿಧಿ:

ಬಾಳೆಹಣ್ಣು ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಬಾಳೆಹಣ್ಣು ಇತರ ಹಣ್ಣುಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ವಿಟಮಿನ್ ಎ, ಬಿ, ಬಿ6, ಕಬ್ಬಿಣ್ಣ, ಕ್ಯಾಲ್ಸಿಯಂ, ಮೆಗ್ನೇಸಿಯಂ, ಪೊಟ್ಯಾಸಿಯಂ ಮುಂತಾದ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತದೆ. ಈ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: