ಯಾವುದೇ ಸಂಭ್ರಮ ಸಡಗರಗಳ ನಡುವೆ ಕೇಕ್ ಒಂದು ಕೇಂದ್ರ ಬಿಂದುವಾಗಿರುವುದು ಸಹಜ. ಕಣ್ಣಿಗೆ ಆಕರ್ಷಣೀಯವಾಗಿ ಕಾಣುವ ಕೇಕುಗಳಲ್ಲಿ ಸಾಕಷ್ಟು ರಾಸಾಯನಿಕ ಬಣ್ಣಗಳನ್ನು , ಹಾಗೂ ಹೆಚ್ಚಿನ ಸಕ್ಕರೆಯ ಅಂಶಗಳನ್ನು ಬೆರೆಸಲಾಗುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಆದ್ದರಿಂದ ಮನೆಯಲ್ಲೇ ಆರೋಗ್ಯಕರ ರುಚಿಕರ ಕೇಕ್ ತಯಾರಿಸಲು ಇಲ್ಲಿದೆ ಸುಲಭ ರೆಸಿಪಿ ವಿಧಾನ. ನೀವು ಒಮ್ಮೆ ಪ್ರಯತ್ನಿಸಿ.
ಬೇಕಾಗುವ ಸಾಮಾಗ್ರಿಗಳು:
1 ಕಪ್ ಬೆಣ್ಣೆ
1 ಚಮಚ ವೆನಿಲ್ಲಾ ಎಸೆನ್ಸ್
1 ಕಪ್ ಗೋಧಿ ಹಿಟ್ಟು
1 ಚಮಚ ಅಡಿಗೆ ಸೋಡಾ
1/4 ಚಮಚ ಉಪ್ಪು
2 ಮೊಟ್ಟೆ
1/2 ಕಪ್ ಸಕ್ಕರೆ
4 ಚಮಚ ಕೋಕೋ ಪೌಡರ್
1 ಚಮಚ ಬೇಕಿಂಗ್ ಪೌಡರ್
ಮಾಡುವ ವಿಧಾನ:
ಹಂತ 1
ಒಂದು ಪಾತ್ರೆಯಲ್ಲಿ ಬೆಣ್ಣೆ, ಸಕ್ಕರೆ, ವೆನಿಲ್ಲಾ ಎಸೆನ್ಸ್ ಮತ್ತು ಮೊಟ್ಟೆ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.
ಹಂತ 2
ಈಗ ಬೌಲ್‌ನಲ್ಲಿ ಗೋಧಿ ಹಿಟ್ಟು, ಕೋಕೋ ಪೌಡರ್, ಬೇಕಿಂಗ್ ಪೌಡರ್, ಬೇಕಿಂಗ್ ಪೌಡರ್ ಮತ್ತು ಚಿಟಿಕೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಗಂಟುಗಳಾದ ರೀತಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿ.
ಹಂತ 3
ನಂತರ ಕೇಕ್ ಟಿನ್ ಗೆ ಬೆಣ್ಣೆ ಮತ್ತು ಸ್ವಲ್ಪ ಹಿಟ್ಟು ಹಾಕಿ ಮತ್ತು ಸಮವಾಗಿ ಹರಡಿ.
ಹಂತ 4
180 ಡಿಗ್ರಿನಲ್ಲಿ 20 ನಿಮಿಷಗಳ ಕಾಲ ಓವನ್ ನಲ್ಲಿ ಬೇಯಿಸಿ.
ಹಂತ 5
20 ನಿಮಿಷಗಳ ನಂತರ, ಕೇಕ್ ಸಿದ್ಧವಾಗಿದೆ. ನಂತರ ನಿಮಗೆ ಇಷ್ಟವಾಗುವಂತೆ ಕೇಕ್ ಮೇಲೆ ಅಲಂಕರಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: