ನೀವು ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಜೀವನ ಪೂರ್ತಿ ಸಂಗಾತಿ ಜತೆಗೆ ಸಂತೋಷವಾಗಿಬಹುದು ಎಂಬುದು ನಿಜ, ಆದ್ರೆ ಎಲ್ಲಾ ವಿಚಾರಗಳಲ್ಲಿ ಅಲ್ಲ. ನೀವು ಒತ್ತಾಯಪೂರ್ವಕವಾಗಿ ಹೊಂದಾಣಿಕೆ ಮಾಡಿಕೊಂಡಲ್ಲಿ ಒಂದಲ್ಲಾ ಒಂದು ದಿನ ನಿಮ್ಮಲ್ಲಿರುವ ಭಾವನೆ ಚಿಮ್ಮುತ್ತದೆ ಆಗ ನಿಮ್ಮನ್ನು ನೀವು ನಿಯಂತ್ರಿಸುವುದು ಕಷ್ಟವಾಗಬಹುದು.
ಸಂಗಾತಿ ಹೇಳಿದ್ದೆಲ್ಲವನ್ನೂ ಸರಿ ಎಂದು ಹೇಳಿ ತಲೆ ಅಲ್ಲಾಡಿಸುವ ಅಗತ್ಯವಿಲ್ಲ, ಅವರು ಸರಿ ಇದ್ದಾಗ ಅವರು, ನೀವು ಸರಿ ಎಂದೆನಿಸಿದಾಗ ನೀವು ಮಾತನಾಡುವುದು ಉತ್ತಮ. ಇಬ್ಬರ ಹೊಂದಾಣಿಕೆ ಇಲ್ಲಿ ಮುಖ್ಯವಾಗುತ್ತದೆ. ಈ ಎಮೋಷನಲ್ ಬ್ಲ್ಯಾಕ್ಮೇಲ್(Emotional Blackmail) ನಿಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.
ನಿಮ್ಮ ಕಾಳಜಿ ನೀವು ನೋಡಿಕೊಳ್ಳಿ
ಇತರರ ಬಗ್ಗೆ ಚಿಂತಿಸುವ ಮೊದಲು ನಿಮ್ಮ ಬಗ್ಗೆ ನೀವು ಕಾಳಜಿ ಮಾಡುವುದು ಉತ್ತಮ. ಕೆಲವೊಮ್ಮೆ ಇಲ್ಲ ಆಗುವುದಿಲ್ಲ ಎಂದು ಹೇಳುವುದನ್ನೂ ಕಲಿಯಿರಿ.
ನಿಮ್ಮ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳಿ
ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾನೆ. ಅದನ್ನು ಜೀವನದಲ್ಲಿ ತ್ಯಾಗ ಮಾಡಲು ಸಾಧ್ಯವಿಲ್ಲ, ನಿಮ್ಮ ಆಸೆ, ಆಕಾಂಕ್ಷೆಗಳ ಮೇಲೆ ಕೇಂದ್ರೀಕರಿಸಿ, ನಿಮ್ಮ ಸಂಗಾತಿಕ ನಕಾರಾತ್ಮಕ ಮನೋಭಾವದಿಂದ ನಿಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬೇಡಿ. ಪ್ರತಿ ತಪ್ಪಿಗೆ ನಿಮ್ಮನ್ನು ದೂಷಿಸಬೇಡಿ.
ಮತ್ತಷ್ಟು ಓದಿ: Social media: ಯುವ ಜನತೆಯಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮ ಕಾರಣವೇ?
ಸ್ವತಂತ್ರರಾಗಿ
ನೀವು ಎಲ್ಲದಕ್ಕೂ ನಿಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಿದ್ದಾಗ ಅವರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾ ಬಾರಿಯೂ ಆರೋಪಗಳು ನಿಮ್ಮ ಮೇಲೆ ಬಾರದಂತೆ ರಕ್ಷಿಸಿಕೊಳ್ಳಿ. ಆರ್ಥಿಕವಾಗಿ ಸ್ವತಂತ್ರರಾಗುವುದರಿಂದ ನಿಮ್ಮ ಜೀವನದಲ್ಲಿ ನೀವು ಸುಲಭವಾಗಿ ಸಣ್ಣ ನಿರ್ಧಾರಗಳನ್ನು ತೆಗದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಸಂಗಾತಿ ನಿಮಗೆ ಬ್ಲ್ಯಾಕ್ ಮೇಲ್ ಮಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ನಿಮ್ಮ ಸಂಗಾತಿಯ ಮಿತಿಯನ್ನು ನೆನಪಿಸಿ
ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಘಟನೆಗಳು ನಡೆಯುತ್ತಿದ್ದಾಗ ನಿಮ್ಮ ಸಂಗಾತಿಯ ಮಿತಿಯನ್ನು ಒಮ್ಮೆ ನೆನಪಿಸಿ.
ನಿಮ್ಮ ಇಚ್ಛೆಗೆ ಪ್ರಾಮುಖ್ಯತೆ ನೀಡಿ
ಪ್ರತಿ ಕೆಲಸಕ್ಕೂ ನಿಮ್ಮ ಸಂಗಾತಿಯಿಂದ ಅನುಮತಿ ತೆಗೆದುಕೊಳ್ಳುವುದರಿಂದ ಅವರ ಮೇಲೆ ಅವಲಂಬಿತವಾಗುತ್ತೀರಿ. ವ್ಯಕ್ತಿ ಸ್ವಂತ ಆಸೆ, ಆಕಾಂಕ್ಷೆಗಳನ್ನು ಮರೆತುಬಿಡುತ್ತೀರಿ. ನಿಮ್ಮ ಸಂಗಾತಿಯ ಇಚ್ಛೆಯ ಪ್ರಕಾರ ಪ್ರತಿಯೊಂದು ಕೆಲಸ ಮಾಡುವುದನ್ನು ನಿಲ್ಲಿಸಿ.
ಹೆಚ್ಚು ಹೊರೆ ಮಾಡಿಕೊಳ್ಳಬೇಡಿ
ಪ್ರತಿಯೊಂದು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೊರೆಯನ್ನು ಹೆಚ್ಚಿಸಿಕೊಳ್ಳಬೇಡಿ. ಆರೋಗ್ಯಕರವಾಗಿರಲು ಪ್ರಯತ್ನಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ